Film News

ಕೆಜಿಎಫ್ ಚಾಪ್ಟರ್-2: 4 ಭಾಷೆಯಲ್ಲಿ ಯಶ್ ಧ್ವನಿ ನೀಡಲಿದ್ದಾರಂತೆ!

ಬೆಂಗಳೂರು: ಚಿತ್ರದ ಬಿಡುಗಡೆಗೂ ಮುನ್ನವೇ ಇಡೀ ವಿಶ್ವದಾದ್ಯಂತ ಹೆಸರು ಗಳಿಸಿರುವ ಸ್ಯಾಂಡಲ್‌ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿರುವ ಕೆಜಿಎಫ್ ಚಾಪ್ಟರ್-೨ ಚಿತ್ರಕ್ಕೆ ಕನ್ನಡ ಸೇರಿದಂತೆ ೪ ಭಾಷೆಗಳಲ್ಲೂ ಯಶ್ ರವರೇ ಧ್ವನಿ ನೀಡಲಿದ್ದಾರಂತೆ.

ಟೀಸರ್ ಮೂಲಕ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿರುವ ಕೆಜಿಎಫ್-೨ ಚಿತ್ರದ ಬಿಡುಗಡೆ ದಿನಾಂಕವೂ ಸಹ ಘೋಷಣೆಯಾಗಿದ್ದು, ತೆರೆಮೇಲೆ ರಾಖಿ ಭಾಯ್ ಅಬ್ಬರವನ್ನು ಕಾಣಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನೂ ಈ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇನ್ನೂ ಕೆಜಿಎಫ್-೨ ಚಿತ್ರದ ಡಬ್ಬಿಂಗ್ ಹಕ್ಕುಗಳ ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗಿದ್ದು, ಹಿಂದಿ ಭಾಷೆಯಲ್ಲಿ ಯಶ್ ರವರೇ ರಾಖಿ ಭಾಯ್ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ ಎನ್ನಲಾಗಿದೆ. ಇನ್ನೂ ತೆಲುಗು, ತಮಿಳು ಭಾಷೆಗಳಲ್ಲೂ ಸಹ ಯಶ್ ರವರೇ ಧ್ವನಿ ನೀಡಲಿದ್ದಾರಂತೆ. ಮಲಯಾಳಂ ಭಾಷೆ ಯಶ್ ರವರಿಗೆ ಬಾರದ ಕಾರಣ ಮಲಯಾಳಂ ನಲ್ಲಿ ಬೇರೆಯವರಿಂದ ರಾಖಿ ಭಾಯ್ ಗೆ ಧ್ವನಿ ಕೊಡಿಸುವ ಸಾಧ್ಯತೆಯಿದೆಯಂತೆ.

ಈ ಹಿಂದೆ ಕೆಜಿಎಫ್ ಭಾಗ ೧ ಹಿಂದಿಯಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿತ್ತು. ಬಾಹುಬಲಿ ಚಿತ್ರದ ನಂತರ ಡಬ್ಬಿಂಗ್ ಸಿನೆಮಾಗಳಲ್ಲಿ ಹೆಚ್ಚಿನ ಆದಾಯ ಗಳಿಸಿದ ಚಿತ್ರವೆಂದರೇ ಅದು ಕೆಜಿಎಫ್ ಭಾಗ-೧. ಇದೀಗ ಕೆಜಿಎಫ್-೨ ಚಿತ್ರ ಸಹ ದಾಖಲೆ ಮೊತ್ತಕ್ಕೆ ಹಿಂದಿಗೆ ಮಾರಾಟವಾಗಿದ್ದು, ಯಾವ ರೀತಿಯಲ್ಲಿ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Trending

To Top