ಬಾಲಿವುಡ್ ನಲ್ಲೂ ಕಲೆಕ್ಷನ್ ಕಿಂಗ್ ಆದ ಕೆಜಿಎಫ್-2 ಸಿನೆಮಾ!

ಇಡೀ ಸಿನಿರಂಗದಲ್ಲೇ ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಾ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಹಾಕು‌ತ್ತಾ ಸಾಗುತ್ತಿರುವ ಕೆಜಿಎಫ್-2 ಸಿನೆಮಾ ಇದೀಗಾ ಬಾಲಿವುಡ್ ಕಲೆಕ್ಷನ್ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡುತ್ತಾ ಸಾಗಿದೆ. ಬಾಲಿವುಡ್ ಸಿನೆಮಾಗಳೇ ಕಲೆಕ್ಷನ್ ಮಾಡಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಕೆಜಿಎಫ್-2 329 ಕೋಟಿ ಬಾಚಿಕೊಂಡಿದೆ. ಆ ಮೂಲಕ ಬಾಲಿವುಡ್ ರೆಕಾರ್ಡ್‌ಗಳನ್ನು ಸಹ ಬ್ರೇಕ್ ಮಾಡಿದೆ.

ಈ ಹಿಂದೆ ಬಾಲಿವುಡ್ ನಲ್ಲಿ ಭಾರಿ ಸೌಂಡ್ ಮಾಡಿದ್ದ ಅನೇಕ ಸಿನೆಮಾಗಳ ಕಲೆಕ್ಷನ್ ರೆಕಾರ್ಡ್‌ಗಳನ್ನು ಕೆಜಿಎಫ್-2 ಬ್ರೇಕ್ ಮಾಡಿದೆ. ಭಜರಂಗಿ ಬಾಯಿಜಾನ್ 320.34 ಕೋಟಿ, ಸುಲ್ತಾನ್ 300 ಕೋಟಿ ಹಾಗೂ ಪದ್ಮಾವತ್ 302 ಕೋಟಿ ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಮಾಡಿತ್ತು. ಆದರೆ ಇದೀಗ ಕೆಜಿಎಫ್-2 ಹಿಂದಿ ವರ್ಷನ್ ಸದ್ಯ ಈ ರೆಕಾರ್ಡ್ ಬ್ರೇಕ್ ಮಾಡಿದೆ.

ಇನ್ನೂ ಬಾಲಿವುಡ್ ನ ಸಂಜು 342.53 ಕೋಟಿ, ಟೈಗರ್‍ ಜಿಂದಾ ಹೈ 339.16 ಕೋಟಿ ಹಾಗೂ ಪಿಕೆ 340 ಕೋಟಿ ಕಲೆಕ್ಷನ್ ಮಾಡಿ ರೆಕಾರ್ಡ್ ಮಾಡಿದೆ. ಇನ್ನೂ ಈ ರೆಕಾರ್ಡ್ ಸಹ ಕೆಜಿಎಫ್-2 ಮುರಿಯಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಬಾಲಿವುಡ್ ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನೆಮಾಗಳ ಪೈಕಿ ಬಾಹುಬಲಿ-2 510 ಕೋಟಿ ಹಾಗೂ ಅಮೀರ್‍ ಖಾನ್ ನಟನೆಯ ದಂಗಲ್ 387 ಕೋಟಿ ಗಳಿಸುವ ಮೂಲಕ ಮೊದಲ ಹಾಗೂ ಎರಡನೇ ಸ್ಥಾನಗಳಲ್ಲಿದೆ. ಸದ್ಯ ದಂಗಲ್ ರೆಕಾರ್ಡ್ ಎರಡುಮೂರು ದಿನಗಳಲ್ಲಿ ಬ್ರೇಕ್ ಮಾಡಬಹುದು ಎನ್ನಲಾಗುತ್ತಿದ್ದು, ಬಾಹುಬಲಿ-2 ರೆಕಾರ್ಡ್ ಮುರಿಯುವ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.

Previous articleತೋತಾಪುರಿಗೆ ಫಿಧಾ ಆದ ಸಿನಿರಸಿಕರು, ಟ್ರೈಲರ್ ಗೆ ಪುಲ್ ರೆಸ್ಪಾನ್ಸ್
Next articleಜಾಹೀರಾತಿನಲ್ಲಿ ಕಾಣಿಸಿಕೊಂಡ ಕರೀನಾ ಕಪೂರ್ ಟ್ರೋಲ್ ಆಗಿದ್ದಾದರೂ ಯಾಕೆ?