ಪೋಸ್ಟರ್ ರಿಲೀಸ್ ಮಾಡಿ ಇನಷ್ಟು ಕುತೂಹಲ ಹೆಚ್ಚಿಸಿದ ಕೆಜಿಎಫ್-2

ಬೆಂಗಳೂರು: ಕೆಜಿಎಫ್ ಚಿತ್ರತಂಡ ಬಿಡುಗಡೆ ಮಾಡುವ ಪ್ರತಿಯೊಂದು ಪೋಸ್ಟರ್. ಅಪ್ ಡೇಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸುತ್ತಿದ್ದು, ಇದೀಗ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಪೋಸ್ಟರ್ ಮೂಲಕ ಮತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಜೊತೆಗೆ ಆ ಪೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇಡೀ ವಿಶ್ವವನ್ನೇ ಕನ್ನಡ ಸಿನಿರಂಗದತ್ತ ತಿರುಗಿ ನೋಡುವಂತೆ ಮಾಡಿದ ಹೊಂಬಾಳೆ ಫಿಲ್ಸ್ಂ ನ ಕೆಜಿಎಫ್ ಚಿತ್ರ ಇದೀಗ ಕೆಜಿಎಫ್ ಚಾಪ್ಟರ್-೨ ಚಿತ್ರೀಕರಣ ಬಹುತೇಕ ಪೂರ್ಣಗೊಂಡ ವಿಷಯ ಎಲ್ಲರಿಗೂ ತಿಳಿದಿದೆ. ಇನ್ನೂ ಕೆಜಿಎಫ್-೨ ಟೀಸರ್ ನ್ನು ಚಿತ್ರದ ನಾಯಕ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬದಂದು ರಿಲೀಸ್ ಮಾಡುವ ವಿಚಾರ ಸಹ ತಿಳಿದಿದೆ. ಜನವರಿ ೮ ರಂದು ಹುಟ್ಟು ಹಬ್ಬವಾಗಿದ್ದು ಅದೇ ದಿನ ಟೀಶರ್ ಬಿಡುಗಡೆಯಾಗಲಿದೆ.

ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರ ತಂಡ ಕೆಜಿಎಫ್ ಚಿತ್ರದ ಹೊಸ ಪೊಟೋವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಜ.8ರಂದು ಬೆಳಗ್ಗೆ 10.18 ಗಂಟೆಗೆ ಟೀಸರ್ ಬಿಡುಗಡೆಯಾಗಲಿದೆ. ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಪ್ರಾರಂಭವಾಗಿದೆ ಎಂಬ ಟ್ಯಾಗ್ ಲೈನ್ ಸಹ ಹಾಕಿದ್ದಾರೆ.  ಇನ್ನೂ ಈ ಪೋಟೊ ನೋಡಿದ ಅಭಿಮಾನಿಗಳು ಮಾತ್ರ ಕೆಜಿಎಫ್ ತೆರೆಮೇಲೆ ಬರುವಿಕೆಗಾಗಿ ಕಾಯುತ್ತಿದ್ದಾರೆ.

ಈ ಚಿತ್ರ ಪ್ಯಾನ್ ಇಂಡಿಯಾದಡಿ ಬಿಡುಗಡೆಯಾಗಲಿದ್ದು, ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಖಳನಾಯಕನ ಪಾತ್ರದಲ್ಲಿ ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ನಟಿಸಲಿದ್ದು, ರವೀನಾ ಅಂಡನ್, ಪ್ರಕಾಶ್ ರಾಜ್, ಶ್ರಿನಿಧಿ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

Previous articleಆಚಾರ್ಯ ಚಿತ್ರಕ್ಕಾಗಿ ನಿರ್ಮಾಣವಾಯ್ತು ದುಬಾರಿ ವೆಚ್ಚದ ಸೆಟ್!
Next articleಆಚಾರ್ಯ ಚಿತ್ರದಲ್ಲಿ ರಾಮ್ ಚರಣ್ ಲುಕ್ ಹೀಗೆ ಇರುತ್ತಂತೆ!