Film News

ಮೇ ಮಾಹೆಯಲ್ಲಿ ಬಿಡುಗಡೆಯಾಗುತ್ತಾ ಕೆಜಿಎಫ್-2?

ಬೆಂಗಳೂರು: ಇಡೀ ವಿಶ್ವದಲ್ಲೇ ಕೆಜಿಎಫ್-2 ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದು, ಇದೀಗ ಬಂದ ಅಧಿಕೃತವಲ್ಲದ ಮಾಹಿತಿ ಪ್ರಕಾರ ಮೇ ತಿಂಗಳ ಕೊನೆಯ ವಾರದಲ್ಲಿ ಕೆಜಿಎಫ್-2 ಚಿತ್ರ ಬಿಡುಗಡೆಯಾಗಲಿದೆಯಂತೆ.

ಈ ಕುರಿತು ತೆಲುಗು ವೈಬ್ಸೈಟ್ ಒಂದು ವರದಿ ಮಾಡಿರುವ ಪ್ರಕಾರ ಕೆಜಿಎಫ್-2 ಚಿತ್ರ ಮೇ.30 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆಯಂತೆ. ಈಗಾಗಲೇ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲಿದೆ. ದರ್ಶನ್ ಅಭಿನಯದ ರಾಬರ್ಟ್, ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ, ಧ್ರುವ ಸರ್ಜಾ ಪೊಗರು, ಸುದೀಪ್ ಕೋಟಿಗೊಬ್ಬ ೩, ದುನಿಯಾ ವಿಜಯ್ ಸಲಗ, ಶಿವರಾಜ್ ಕುಮಾರ್ ರವರ ಭಜರಂಗಿ-೨ ಚಿತ್ರಗಳ ರಿಲೀಸ್ ಡೇಟ್ ರಿವೀಲ್ ಮಾಡಿದ್ದಾರೆ. ಇದೀಗ ಕೆಜಿಎಫ್-೨ ಚಿತ್ರ ಬಿಡುಗಡೆಯ ದಿನಾಂಕಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಕೆಜಿಎಫ್-೨ ಚಿತ್ರದ ರಿಲೀಸ್ ಬಗ್ಗೆ ವಿತರಕರೊಂದಿಗೆ ಮಾತುಕತೆ ಸಹ ನಡೆದಿದೆ ಎನ್ನಲಾಗಿದೆ. ತೆಲುಗು ಭಾಷೆಯಲ್ಲಿ ಕೆಜಿಎಫ್ ಚಿತ್ರವನ್ನು ಸಾಯಿ ಕೋರ್ರಪತಿ ರಿಲೀಸ್ ಮಾಡಲಿದ್ದಾರೆ. ಇನ್ನೂ ಕೆಜಿಎಫ್ ಚಿತ್ರದ ತೆಲುಗು ವರ್ಷನ್ ಸುಮಾರು ೬೦ ಕೋಟಿಗೆ ಮಾರಾಟವಾಗಿದೆಯಂತೆ. ತೆಲುಗು ಭಾಷೆಯಲ್ಲಿ ಕೆಜಿಎಫ್-೨ ಚಿತ್ರದ ಕುರಿತು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನೂ ಕೆಜಿಎಫ್ ಭಾಗ-೧ ಕ್ಕಿಂತಲೂ ಕೆಜಿಎಫ್-೨ ಚಿತ್ರಕ್ಕಾಗಿ ಹೆಚ್ಚು ಖರ್ಚು ಮಾಡಿದ್ದಾರಂತೆ. ಮೂಲಗಳ ಪ್ರಕಾರ ಕ್ಲೈಮ್ಯಾಕ್ಸ್ ದೃಶ್ಯವೊಂದಕ್ಕೆ ಸುಮಾರು ೧೨ ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯುತ್ತಿದೆ. ಹಾಡುಗಳ ರೆಕಾರ್ಡ್, ಸಂಕಲನ, ವಿಎಫ್‌ಎಕ್ಸ್, ಡಬ್ಬಿಂಗ್ ಸೇರಿದಂತೆ ಎಲ್ಲಾ ಕೆಲಸಗಳು ಕ್ಷಿಪ್ರ ಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೊಷಣೆಯಾಗಬಹುದಾಗಿದೆ.

Trending

To Top