RRR ಸಿನೆಮಾದ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದ ಕೆಜಿಎಫ್-2 ಕಲೆಕ್ಷನ್ಸ್….

ಕಳೆದ ಮಾರ್ಚ್ ಮಾಹೆಯಲ್ಲಿ ಬಿಡುಗಡೆಯಾದ RRR ಸಿನೆಮಾ ವಿಶ್ವವ್ಯಾಪಿ 1127 ಕೋಟಿ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆದಿತ್ತು. ದೇಶದಲ್ಲಿ 904 ಕೋಟಿ ಲೂಟಿ ಹೊಡೆದಿತ್ತು. ಸದ್ಯ ದೇಶದಲ್ಲಿ ಕೆಜೆಎಫ್-2 ಸಿನೆಮಾ 930 ಕೋಟಿ ಬಾಚುವ ಮೂಲಕ ಆರ್‍.ಆರ್‍.ಆರ್‍ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿದೆ.

ಕೆಜಿಎಫ್-2 ಸಿನೆಮಾ ದಿನೇ ದಿನೇ ದೇಶದಲ್ಲಿ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಾ ಸಾಗಿದೆ. ಬಾಲಿವುಡ್ ನಲ್ಲಿ ದಂಗಲ್ ಸಿನೆಮಾದ ರೆಕಾರ್ಡ್ ಬ್ರೇಕ್ ಮಾಡಿದೆ. ಅದರಂತೆ ಕಾಲಿವುಡ್ ನಲ್ಲೂ ಸಹ ರೆಕಾರ್ಡ್ ಮಾಡಿದೆ. ಪ್ಯಾನ್ ಇಂಡಿಯಾ ಸಿನೆಮಾಗಳಾದ ಆರ್‍.ಆರ್‍.ಆರ್‍ ಹಾಗೂ ಕೆಜಿಎಫ್ 2 ಎರಡೂ ಸಿನೆಮಾಗಳು ಬಾಕ್ಸ್ ಆಫೀಸ್ ಕಲೆಕ್ಷನ್ ಕುರಿತು ನೀ ಮುಂದೆ ನಾ ಮುಂದೆ ಎಂದು ಸಾಗುತ್ತಿತ್ತು. ಆದರೆ ಕೆಜಿಎಫ್ 2  ಸಿನೆಮಾ ಆರ್‍.ಆರ್‍.ಆರ್‍ ಸಿನೆಮಾದ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುತ್ತಿದೆ.

ಹೌದು ಇಂಡಿಯಾದಲ್ಲಿ ಆರ್‍.ಆರ್‍.ಆರ್‍ ಪುಲ್ ರನ್ ಟೈಂ ನಲ್ಲಿ 904 ಕೋಟಿ ಕಲೆಕ್ಷನ್ ಮಾಡಿತ್ತು. ಈ ರೆಕಾರ್ಡ್ ಕೆಜಿಎಫ್-2 ಬ್ರೇಕ್ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೆಜಿಎಫ್-2 ಸಿನೆಮಾ ಈ ಮಾತುಗಳನ್ನು ತಳ್ಳಿಹಾಕಿದ್ದು, 930 ಕೋಟಿಗಳನ್ನು ಗಳಿಸುವ ಮೂಲಕ ಆರ್‍.ಆರ್‍.ಆರ್‍ ರೆಕಾರ್ಡ್ ಬ್ರೇಕ್ ಮಾಡಿದೆ. ಇನ್ನೂ ವಿಶ್ವಮಟ್ಟದಲ್ಲಿ ಆರ್‍.ಆರ್‍.ಆರ್‍. 1127 ಕೋಟಿ ಗಳಿಸಿದ್ದು, ಕೆಜಿಎಫ್-2 ಸಹ 1107 ಕೋಟಿ ಗಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ರೆಕಾರ್ಡ್ ಅನ್ನು ಸಹ ಬ್ರೇಕ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಆರ್‍.ಆರ್‍.ಆರ್‍ ವಿಶ್ವದಲ್ಲಿನ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಲು ಕೆಜಿಎಫ್-2 ಸಿನೆಮಾಗೆ ಕೇವಲ 20 ಕೋಟಿ ಮಾತ್ರ ಬಾಕಿಯಿದೆ. ಮೂರು ನಾಲ್ಕು ದಿನಗಳಲ್ಲಿ ಈ 20 ಕೋಟಿ ಸಹ ಗಳಿಸಿ ವರ್ಲ್ಡ್ ವೈಡ್ ನಲ್ಲೂ ಸಹ ಆರ್‍.ಆರ್‍.ಆರ್‍ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲಿದೆ ಎಂದು ಹೇಳಲಾಗುತ್ತಿದೆ.

Previous articleಆಗಸ್ಟ್ 12 ರಂದು ಯೂತ್ ಸ್ಟಾರ್ ನಿತಿನ್ ಅಭಿನಯದ ಮಾಚರ್ಲ ನಿಯೋಜಕ ವರ್ಗಂ ರಿಲೀಸ್…
Next articleಮೆಗಾಸ್ಟಾರ್‍ ಚಿರು ಕುರಿತು ನಟ ಕೋಟಾ ಶ್ರೀನಿವಾಸರಾವ್ ಸಂಚಲನಾತ್ಮಕ ಹೇಳಿಕೆಗಳು…