Saturday, May 21, 2022
HomeFilm Newsರೊಮ್ಯಾಂಟಿಕ್ ಲುಕ್ ನೊಂದಿಗೆ ಹಲ್ ಚಲ್ ಸೃಷ್ಟಿಸುತ್ತಿರುವ ನಟಿ ಕೇತಿಕ ಶರ್ಮಾ…

ರೊಮ್ಯಾಂಟಿಕ್ ಲುಕ್ ನೊಂದಿಗೆ ಹಲ್ ಚಲ್ ಸೃಷ್ಟಿಸುತ್ತಿರುವ ನಟಿ ಕೇತಿಕ ಶರ್ಮಾ…

ಬಹುತೇಕ ಅನೇಕ ನಟಿಯರು ಸಿನೆಮಾಗಳಿಗಿಂತ ಸೋಷಿಯಲ್ ಮಿಡೀಯಾಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮಿಡಿಯಾಗಳ ಮೂಲಕವೇ ದೊಡ್ಡ ಸಂಖ್ಯೆಯ ಫಾಲೋವರ್ಸ್‌ಗಳನ್ನು ಸಹ ಹೊಂದಿರುತ್ತಾರೆ. ಈ ಸಾಲಿಗೆ ಟಾಲಿವುಡ್ ನಟಿ ಕೇತಿಕ ಶರ್ಮಾ ಸಹ ಸೇರುತ್ತಾರೆ. ಅವರ ಬೋಲ್ಡ್ ಲುಕ್ ನೊಂದಿಗೆ ಅಭಿಮಾನಿಗಳ ನಿದ್ದೆ ಗೆಡಿಸುತ್ತಿದ್ದಾರೆ.

ಟಾಲಿವುಡ್ ಸಿನಿರಂಗದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಪುತ್ರ ಆಕಾಶ್ ಪೂರಿ ನಾಯಕನಾಗಿ ನಟಿಸಿದ್ದ ರೊಮ್ಯಾಂಟಿಕ್ ಸಿನೆಮಾದಲ್ಲಿ ನಟಿಸಿದ ಈಕೆ ಹೆಚ್ಚು ಪ್ಯಾಪುಲರ್‍ ಆದರು. ಕೇತಿಕಾ ಶರ್ಮಾ ಈ ಸಿನೆಮಾದಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಎಲ್ಲರ ಮನ ಗೆದ್ದರು. ಸದ್ಯ ಈಕೆ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಟಿಯಾಗಿದ್ದಾರೆ. ಸ್ಟಾರ್‍ ಡಮ್ ಪಡೆದುಕೊಳ್ಳಲು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿಸುತ್ತಿದ್ದಾರೆ. ರೊಮ್ಯಾಂಟಿಕ್ ಸಿನೆಮಾ ಬಳಿಕ ಲಕ್ಷ್ಯ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು ಆದರೆ ಸಿನೆಮಾ ಅಷ್ಟೊಂದು ಜಯ ಗಳಿಸಲಿಲ್ಲ. ಆದರೂ ಸಹ ಈಕೆಗೂ ಅವಕಾಶಗಳು ಹರಿಸಿ ಬರುತ್ತಿವೆ.

ಇನ್ನೂ ಉಪ್ಪೇನ ಖ್ಯಾತಿ ವೈಷ್ಣವ್ ತೇಜ್ ನಟಿಸುತ್ತಿರುವ ರಂಗರಂಘ ವೈಭವಂಗಾ ಎಂಬ ಸಿನೆಮಾದಲ್ಲಿ ಕೇತಿಕಾ ಶರ್ಮಾ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಈಕೆಯ ಮೊದಲ ಎರಡೂ ಸಿನೆಮಾಗಳಿಗಿಂತಲೂ ಈ ಸಿನೆಮಾದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಂಪ್ರದಾಯಬದ್ದವಾದ ತೆಲುಗಿನ ಹುಡುಗಿಯಂತೆ ಈಕೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡರೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ಮನ ಕದಿಯುತ್ತಿದ್ದಾರೆ. ಇತ್ತೀಚಿಗೆ ತಮ್ಮ ಥೈಸ್ ಪೊಟೋ ಶೇರ್‍ ಮಾಡಿರುವ ಈ ನಟಿಯನ್ನು ಕಂಡ ಅನೇಕರು ಮನಸೋತಿದ್ದಾರೆ.

ಇನ್ನೂ ನಟಿ ಕೇತಿಕಾ ಶರ್ಮಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪೊಟೋವೊಂದನ್ನು ಶೇರ್‍ ಮಾಡಿ ಯುವಜನತೆಯ ಹೃದಯವನ್ನು ಕದಿಯುವ ಕೆಲಸ ಮಾಡಿದ್ದಾರೆ. ಆಕೆ ತಮ್ಮ ಥೈಸ್ ಎಕ್ಸ್‌ ಪೋಸ್ ಮಾಡಿ ಹಂಚಿಕೊಂಡ ಪೊಟೋ ಸಖತ್ ಹಲ್ ಚಲ್ ಸೃಷ್ಟಿಸಿತ್ತು. ಇನ್ನೂ ಪೊಟೋಗಳನ್ನು ಕಂಡ ಅಭಿಮಾನಿಗಳು ಮೆಚ್ಚುಗೆಯ ಜೊತೆಗೆ ವಿವಿಧ ರೀತಿಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ನಟಿ ಕೇತಿಕ ರವರನ್ನು ನೋಡಿದ ಕೂಡಲೇ ಆಕರ್ಷಣೆ ಯಾಗುವಂತಹ ಮೈಮಾಟವನ್ನು ಹೊಂದಿದ್ದಾರೆ. ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿ ಮುಂದಿನ ದಿನಗಳಲ್ಲಿ ಟಾಲಿವುಡ್ ಸ್ಟಾರ್‍ ಹಿರೋಯಿನ್ ಆಗುವ ಅವಕಾಶಗಳು ಕಾಣಿಸುತ್ತಿವೆ ಎನ್ನಬಹುದಾಗಿದೆ.

- Advertisement -

You May Like

More