Film News

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವ ನಟಿ ಶಹಾನಾ…..

ಕೇರಳದ ಮಾಡೆಲ್ ಹಾಗೂ ನಟಿ ಶಹಾನಾ ಎಂಬ ಯುವ ನಟಿ 20ನೇ ವಯಸ್ಸಿಗೆ ನೇಣಿಗೆ ಶರಣಾಗಿದ್ದಾರೆ. ಕೋಯಿಕ್ಕೋಡ್ ಪರಂಬಿಲ್ ನಜಾರ್‍ ಎಂಬಲ್ಲಿ ಪ್ಲಾಟ್ ನಲ್ಲಿ ನಟಿ ಶಹಾನಾ ನೇಣಿಗೆ ಶರಣಾಗಿದ್ದಾರೆ. ಮೇ.12 ಗುರುವಾರ ರಾತ್ರಿ ಮನೆಯ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಯುವ ನಟಿ ಶಹಾನಾ 18 ವಯಸ್ಸಿನಲ್ಲೇ ಮದುವೆಯಾಗಿದ್ದರು. ಮದುವೆಯಾಗಿ ಇನ್ನೂ ಎರಡು ವರ್ಷ ಸಹ ಕಳೆದಿಲ್ಲ. ಅದಾಗಲೇ ನಟಿ ನೇಣಿಗೆ ಶರಣಾಗಿರುವುದು ಸಾಕಷ್ಟು ಅನುಮಾಗಳನ್ನು ಮೂಡಿಸಿದೆ. ಇನ್ನೂ ಬದುಕಿ ಬಾಳಬೇಕಿದ್ದ ನಟಿ ಶಹಾನಾ ನೇಣು ಬಿಗಿದುಕೊಂಡಿದ್ದು, ಈ ಕುರಿತು ಅವರ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪ ಸಹ ಮಾಡಿದ್ದಾರೆ. ಕಾಸರಗೋಡಿನ ಚಿರುವತ್ತೂರ್‍ ನಲ್ಲಿ ಶಹಾನಾ ತಂದೆ ತಾಯಿ ವಾಸವಿದ್ದಾರೆ. ಇದೀಗ ತಮ್ಮ ಮಗಳ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪ ಮಾಡಿದ್ದಾರೆ. ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ಶಹಾನಾ ಒಂದೂವರೆ ವರ್ಷದ ಹಿಂದೆ ಸಾಜದ್ ಎಂಬಾತನೊಂದಿಗೆ ಹಸೆಮಣೆ ಏರಿದ್ದರು. ಶಹಾನಾ ಮದುವೆಯಾದ ಸಂದರ್ಭದಲ್ಲಿ ಆಕೆಗಿನ್ನು 18 ವರ್ಷ ವಯಸ್ಸಾಗಿತ್ತು. ಈ ಜೋಡಿಯ ಮದುವೆಯಾದ ಬಳಿಕ ಇಬ್ಬರ ನಡುವೆ ದಾಂಪತ್ಯ ಜೀವನ ಅಷ್ಟಕಷ್ಟೆ ಎನ್ನಲಾಗುತ್ತಿದೆ. ಹಣಕ್ಕಾಗಿ ಶಹಾನಾಗೆ ಸದಾ ಪೀಡಿಸುತ್ತಿದ್ದನಂತೆ ಸಾಜದ್. ಈ ವಿಚಾರ ನೆರೆಯವರಿಗೂ ತಿಳಿದಿತ್ತು ಎನ್ನಲಾಗಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾಜದ್ ನನ್ನು ವಶಕ್ಕೆ ಪಡೆದು ವಿಚಾರಣೆ ಶುರು ಮಾಡಿದ್ದಾರೆ.

ನಟಿ ಶಹಾನಾ ಕೇರಳದ ಕೋಯಿಕ್ಕೋಡ್ ಪರಂಬಿಲ್ ಎಂಬ ಪ್ರದೇಶದಲ್ಲಿ ಪ್ಲಾಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದು, ಅಲ್ಲಿಯೇ ವಾಸವಾಗಿದ್ದರು. ಗುರುವಾರ ರಾತ್ರಿ 11 ರ ಸಮಯದಲ್ಲಿ ಮನೆಯ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾನಾ ಸಾವಿಗೆ ಕಾರಣವಾದರೂ ಏನು ಎಂಬುದರ ಕುರಿತು ಇದೀಗ ತನಿಖೆ ಶುರುವಾಗಿದೆ. ಸಾಜದ ಶಹಾನಾ ಗೆ ತುಂಬಾನೆ ನಿರ್ಭಂದ ಹೇರುತ್ತಿದ್ದನಂತೆ. ಶಹಾನಾ ಕುಟುಂಬದ ಯಾರು ಮನೆಗೆ ಬರಲು ಅವಕಾಶ ನೀಡುತ್ತಿರಲಿಲ್ಲವಂತೆ. ಕನಿಷ್ಟ ದೂರವಾಣಿ ಕರೆ ಮಾಡಲು ಸಹ ಅವಕಾಶ ಕೊಡುತ್ತಿರಲಿಲ್ಲ. ಜೊತೆಗೆ ಕಿರುಕುಳ ಸಹ ನೀಡುತ್ತಿದ್ದ ಎನ್ನಲಾಗುತ್ತಿದೆ.

ಇನ್ನೂ ದೊಡ್ಡ ಕನಸು ಹೊತ್ತು ಮಾಡೆಲ್ ಆಗಿ ಗುರ್ತಿಸಿಕೊಂಡು, ಬಳಿಕ ಸಿನಿರಂಗದಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ಈಗಷ್ಟೆ ಖ್ಯಾತಿ ಪಡೆಯುತ್ತಿದ್ದರು. ಇಂತಹ ಸಂಧರ್ಭದಲ್ಲಿ ಆಕೆಯ ಸಾವು ಆಕೆಯ ಕನಸ್ಸನ್ನು ನುಚ್ಚು ನೂರು ಮಾಡಿದೆ. ಇನ್ನೂ ಶಹಾನಾ ಸಾವಿಗೆ ನ್ಯಾಯ ದೊರಕಿಸಿಕೊಡಲು ಒತ್ತಡ ಹೆಚ್ಚಾಗಿದ್ದು, ಸೋಷಿಯಲ್ ಮಿಡಿಯಾಗಳಲ್ಲಿ ಶಹಾನಾಳಿಗೆ ಸಂತಾಪ ಸೂಚಿಸುತ್ತಿದ್ದಾರೆ.

Trending

To Top