Kannada Serials

ಜೊತೆಜೊತೆಯಲಿ ಅನಿರುಧ್, ತಮ್ಮ ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಹೇಗೆ ಆಚರಣೆ ಮಾಡಿದ್ದಾರೆ ನೋಡಿ!

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುಧ್ ಅವರು ಸದ್ಯ ತಮ್ಮ ಕನ್ನಡದ ಟಾಪ್ ದಾರಾವಾಹಿಯಾದ ಜೊತೆಜೊತೆಯಲಿ ಧಾರಾವಾಹಿ ಯಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅನಿರುಧ್ ಅವರ ಕರಿಯರ್ ನಲ್ಲಿ ಜೊತೆಜೊತೆಯಲಿ ಎರಡನೇ ಇನ್ನಿಂಗ್ಸ್ ಎಂದರೆ ತಪ್ಪಾಗಲಾರದು. ನೆನ್ನೆ ಅನಿರುಧ್ ಅವರ ಮಡದಿ ಆದ ಕೀರ್ತಿ ಅವರ ಹುಟ್ಟು ಹಬ್ಬ. ಈ ಸಮಯದಲ್ಲಿ ಅನಿರುಧ್ ಅವರು ತಮ್ಮ ಮಡದಿ ಕೀರ್ತಿ ಅವರ ಹುಟ್ಟು ಹಬ್ಬವನ್ನು ಬಹಳ ಸರಳ ರೀತಿಯಲ್ಲಿ ಮನೆಯಲ್ಲಿ ಕುಟುಂಬದ ಸಮೇತ ಆಚರಣೆ ಮಾಡಿದ್ದಾರೆ! ಕೀರ್ತಿ ವಿಷ್ಣುವರ್ಧನ್ ಅವರ ಹುಟ್ಟು ಹಬ್ಬ ಆಚರಣೆ ಹೇಗಿತ್ತು ಗೊತ್ತಾ, ಈ ಕೆಳಗಿನ ಸುಂದರ ಫೋಟೋಗಳನ್ನು ಒಮ್ಮೆ ನೋಡಿರಿ

ಈ ಸಮಯದಲ್ಲಿ ಅನಿರುಧ್ ಅವರು ತಮ್ಮ ಮಡದಿ ಕೀರ್ತಿ ಅವರಿಗೆ ಒಂದು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಕೀರ್ತಿ ಅವರ ಹುಟ್ಟು ಹಬ್ಬಕ್ಕೆ ಅನಿರುಧ್ ಅವರು ಪತ್ರ ಹೀಗಿದೆ “ಇಂದು ನೀವು ಹುಟ್ಟಿದ ದಿನ.. ನನಗಾಗಿ ಹುಟ್ಟಿದ ದಿನವೇ ಇರಬೇಕು…. ಬಹಳಷ್ಟು ಬಾರಿ ಹೇಳಿರುವೆನು.. ಮತ್ತಷ್ಟು‌ ಬಾರಿ ಹೇಳುವೆನು.. ಮುಂದೆಯೂ ಹೇಳುತ್ತಲೇ ಇರುವೆನು.. ನನ್ನ ಜೀವನದ ಅತ್ಯಮೂಲ್ಯಗಳಲ್ಲಿ ಒಬ್ಬರು ನೀವು.. ಸದಾ ಜೊತೆಯಾಗಿ ನಿಂತಿರುವಿರಿ.. ನಾ ಸಾಗುವಾಗ ಪ್ರತಿ ಹೆಜ್ಜೆಯಲ್ಲಿಯೂ ನೀವಿರುವಿರಿ.. ನಿಮ್ಮ ಕಾಳಜಿ.. ನಿಮ್ಮ ಪ್ರೀತಿ.. ನಿಮ್ಮ ಮಮತೆ.. ನಿಮ್ಮ ……… ಹೇಳಲು ಪದಗಳು ಸಾಲದೆನಗೆ..

ಕೆಲವೊಮ್ಮೆ ಮೂಕನಾಗುವ ಅನುಭವ ನಿಮ್ಮ ಬಗ್ಗೆ ಮಾತನಾಡುವಾಗ ನನಗಾಗುವುದು.. ನನ್ನ ಆತ್ಮವೇ ನೀವಾಗಿರುವಿರಿ.. ನನ್ನ ಜೀವನಕ್ಕೆ ಇಂತಹ ಅತ್ಯಮೂಲ್ಯವಾದ ಉಡುಗೊರೆ ನೀಡಿದ ಅಪ್ಪಾವ್ರಿಗೆ.. ಅಮ್ಮನಿಗೆ ನಾನೆಂದೂ ಸದಾ ಚಿರಋಣಿಯಾಗಿರುವೆನು.. ನನ್ನ ಬಾಳಿನ ದೇವತೆಯೂ ನೀವು.. ನನ್ನೊಳಗಿನ ಆತ್ಮವೂ ನೀವು.. ಮತ್ತೇನನು ಹೇಳಲಾಗದು.. ನನ್ನ ಪ್ರತಿ ಪ್ರಾರ್ಥನೆಯ ಪ್ರಮುಖ ಭಾಗವೂ ನೀವೆ ಆಗಿರುವಿರಿ.. ನಿಮ್ಮ ವ್ಯಕ್ತಿತ್ವ ನನಗೆಂದೂ ಸದಾ ಸ್ಪೂರ್ತಿಯೇ ಆಗಿದೆ.. ನೂರ್ಕಾಲ ಸದಾ ಸಂತೋಷವಾಗಿ ಬಾಳಿ.. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.. #Keerthiji.. ನಿಮ್ಮ #ಅನಿರುಧ್”ಎಂದು ಬರೆದಿದ್ದಾರೆ.

ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಳಿಯರಾದ ಅನಿರುಧ್ ಅವರು ಸದ್ಯ ತಮ್ಮ ಫೇಮಸ್ ದಾರಾವಾಹಿಯಾದ ಜೊತೆಜೊತೆಯಲಿ ಚಿತ್ರೀಕರಣದಲ್ಲಿ ಬಹಳ ಬ್ಯುಸಿ ಆಗಿದ್ದರು. ಅದಲ್ಲದೆ ಲಾಕ್ ಡೌನ್ ತೆಗೆದ ನಂತರ, ಧಾರಾವಾಹಿಯ ಚಿತ್ರೀಕರಣಕ್ಕೆ ಅವಕಾಶ ಕೊಟ್ಟ ಮೇಲೆ, ಬಾಕಿ ಇದ್ದ ಎಲ್ಲಾ ಚಿತ್ರೀಕರಣ ಮಾಡಿ ಮುಗುಸಿದ್ದಾರೆ ನಮ್ಮ ಅನಿರುಧ್. ಮೊನ್ನೆ ಅಷ್ಟೇ ಜೊತೆಜೊತೆಯಲಿ ಧಾರಾವಾಹಿಯ ತಂಡದ ಜೊತೆ, ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ, ನೆನ್ನೆ ತಮ್ಮ ಕುಟುಂಬದ ಸಮೇತ ಅನಿರುಧ್ ಅವರು ಚಿಕ್ಕಮಗಳೂರಿನ ಕಡೆ ಹೊರಟಿದ್ದಾರೆ. ಸದ್ಯ ಇವರ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Trending

To Top