Film News

ಇನ್ನು ಮುಂದೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವುದಿಲ್ಲವಂತೆ ಕೀರ್ತಿ ಸುರೇಶ್

ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ ಕೀರ್ತಿ ಸುರೇಶ್. ಹಿರಿಯ ನಟಿ ಮೇನಕಾ ಮತ್ತು ನಿರ್ಮಾಪಕ ಸುರೇಶ್ ಅವರ ಮುದ್ದಿನ ಕಿರಿಯ ಮಗಳು. ಬಹಳ ಚಿಕ್ಕ ವಯಸ್ಸಿನಲ್ಲೇ ಸಿನಿರಂಗಕ್ಕೆ ಕಾಲಿಟ್ಟು ಯಶಸ್ಸು ಗಳಿಸಿದರು ಕೀರ್ತಿ ಸುರೇಶ್. ಅದರಲ್ಲೂ 2018 ರಲ್ಲಿ ತೆರೆಕಂಡ ಮಹಾನಟಿ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಮಹಾನಟಿ ಸಾವಿತ್ರಿ ಅವರ ಪಾತ್ರದಲ್ಲಿ ನಟಿಸಿದ ನಂತರ ಇವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.

ಮಹಾನಟಿ ಸಿನಿಮಾದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದರು ಕೀರ್ತಿ. ನಂತರ ದಕ್ಷಿಣ ಭಾರತದ ಖ್ಯಾತ ನಟರಾದ ವಿಜಯ್, ಸೂರ್ಯ, ವಿಶಾಲ್, ಎಲ್ಲರ ಜೊತೆ ತೆರೆಹಂಚಿಕೊಂಡರು. ಆದರೆ 2019 ರಲ್ಲಿ ಕೀರ್ತಿ ನಟಿಸಿದ ಯಾವುದೇ ಸಿನಿಮಾಗಳು ತೆರೆಕಾಣಲಿಲ್ಲ. ಇನ್ನು ಈ ವರ್ಷ ಕೀರ್ತಿ ಅಭಿನಯದ ಎರಡು ಸಿನಿಮಾಗಳು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ತೆರೆಕಂಡರು ಕೂಡ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಸಿಗಲಿಲ್ಲ. ಪ್ರಂಗ್ವಿನ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದರೆ, ಮಿಸ್ ಇಂಡಿಯಾ ಹೆಚ್ಚಾಗಿ ನೆಗಟಿವ್ ಪ್ರತಿಕ್ರಿಯೆ ಪಡೆಯುತ್ತಿದೆ.

ಇದಕ್ಕೆ ಕಾರಣ ಕೀರ್ತಿ ಆರಿಸಿಕೊಂಡ ಪಾತ್ರಗಳು, ಈ ಎರಡು ಸಿನಿಮಾಗಳು ಮಹಿಳಾ ಪ್ರಧಾನ ಪಾತ್ರವಾದರ, ಕಥೆಯಲ್ಲಿ ಗ್ರಿಪ್ ಇರದ ಕಾರಣ ಸೋತಿವೆ. ಎರಡು ಸೋಲುಗಳ ನಂತರ ಇನ್ನು ಮುಂದೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವುದು ಬೇಡ ಎಂದು ನಿರ್ಧರಿಸಿದ್ದಾರಂತೆ ಕೀರ್ತಿ. ಕೀರ್ತಿ ಸುರೇಶ್ ಅಭಿನಯದ ಗುಡ್ ಲಕ್ ಸಖಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದು ಕೂಡ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಓಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಗುಡ್ ಲಕ್ ಸಖಿ ನಂತರ ಕೀರ್ತಿ ಆರಿಸಿಕೊಂಡಿರುವ ಸಿನಿಮಗಳೆಲ್ಲವು ಕಮರ್ಷಿಯಲ್ ಕಥೆಗಳಾಗಿವೆ. ನಟ ನಿತಿನ್ ಜೊತೆ ರಂಗ್ ದೆ, ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಜೊತೆ ಅಣ್ಣಾತೆ, ಮಹೇಶ್ ಬಾಬು ಅವರೊಡನೆ ಸರ್ಕಾರು ವಾರಿ ಪಾಟ, ಹಾಗೂ ತಮಿಳು ಸಿನಿಮಾ ವೇದಾಳಮ್ ರಿಮೇಕ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿ ಪಾತ್ರದಲ್ಲಿ ನಟಿಸಲಿದ್ದಾರೆ ಕೀರ್ತಿ.

Trending

To Top