Film News

ಕನ್ನಡದ ಈ ಕಲಾವಿದರ ಜೊತೆ ನಟಿಸುವ ಕನಸು ವ್ಯಕ್ತಪಡಿಸಿದ್ದಾರೆ ನಟಿ ಕೀರ್ತಿ ಸುರೇಶ್

ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು ಕೀರ್ತಿ ಸುರೇಶ್. ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಯಶಸ್ಸು ಕಂಡು, ಕನ್ನಡದಲ್ಲಿ ಅಣ್ಣಾವ್ರ ಜೊತೆ ತಂಗಿಯಾಗಿ ಅಭಿನಯಿಸಿದ್ದ ನಟಿ ಮೇನಕಾ ಮತ್ತು ಸಿನಿಮಾ ತಯಾರಕರಾದ ಸುರೇಶ್ ದಂಪತಿಯ ಮಗಳು ಕೀರ್ತಿ ಸುರೇಶ್. ತಮಿಳು, ಮಲಯಾಳಂ ಮತ್ತು ತೆಲುಗು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಅವರಿಗೆ ಬಹಳ ಬೇಡಿಕೆ ಇದೆ.2018 ರಲ್ಲಿ ತೆರೆಕಂಡ ಮಹಾನಟಿ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದರು ಕೀರ್ತಿ. ಮಹಾನಟಿ ಸಿನಿಮಾ ಅಭಿನಯಕ್ಕಾಗಿ ಭಾರತಾದ್ಯಂತ ಹಿರಿಯ ಕಲಾವಿದರಿಂದ ಪ್ರಶಂಸೆ ಪಡೆದರು. ತಮಿಳು ಚಿತ್ರರಂಗದ ಪ್ರಸಿದ್ಧ ನಟರಾದ ವಿಜಯ್, ಸೂರ್ಯ, ಶಿವಕಾರ್ತಿಕೇಯನ್, ಮಲಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್, ತೆಲುಗಿನಲ್ಲಿ ನಾನಿ, ಪವನ್ ಕಲ್ಯಾಣ್ ಸೇರಿದಂತೆ ಹಲವಾರು ಯಶಸ್ವಿ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ.ಒಂದೆರಡು ತಿಂಗಳ ಹಿಂದೆ ಕೀರ್ತಿ ಸುರೇಶ್ ಅಭಿನಯದ ಪೆಂಗ್ವಿನ್ ಸಿನಿಮಾ ಓಟಿಟಿ ಯಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಇದೀಗ ಕೀರ್ತಿ ಸುರೇಶ್ ಅಭಿನಯದ ಮತ್ತೊಂದು ಸಿನಿಮಾ ಮಿಸ್ ಇಂಡಿಯಾ ಸಹ ನೆಟ್ ಫ್ಲಿಕ್ಸ್ ನಲ್ಲಿ ತೆರೆಕಂಡಿದ್ದು, ಕೀರ್ತಿ ಸುರೇಶ್ ಅಭಿನಯಕ್ಕೆ ಒಳ್ಳೆಯ ಪ್ರಶಂಸೆ ಪಡೆಯುತ್ತಿದೆ. ಕೀರ್ತಿ ಸುರೇಶ್ ಅಭಿನಯದ ಗುಡ್ ಲಕ್ ಸಖಿ ಮತ್ತು ರಂಗ್ ದೆ ಸಿನಿಮಾ ಕೂಡ ತೆರೆಕಾಣಲು ಸಿದ್ಧವಾಗಿದ್ದು ಓಟಿಟಿ ಪ್ಲಾಟ್ ಫಾರ್ಮ್ ನಲ್ಲೇ ಬಿಡುಗಡೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.ಮಿಸ್ ಇಂಡಿಯಾ ಸಿನಿಮಾ ತೆರೆಕಂಡ ಸಮಯದಲ್ಲಿ ಟ್ವಿಟರ್ ನಲ್ಲಿ #AskKeerthy ಎಂಬ ಹ್ಯಾಶ್ ಟ್ಯಾಗ್ ಮೂಲಕ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ಸಮಯದಲ್ಲಿ ಒಬ್ಬ ಅಭಿಮಾನಿ “ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿ ಯಶಸ್ಸು ಪಡೆದಿದ್ದೀರಿ. ಕನ್ನಡ ಸಿನಿಮಾದಲ್ಲಿ ನಟಿಸುವ ಯೋಜನೆ ಇದೆಯೇ ? ಇದ್ದರೆ, ಯಾವ ನಿರ್ದೇಶಕ ಅಥವಾ ನಂತರ ಜೊತೆ ಕೆಲಸ ಮಾಡುವ ಆಸೆ ಇದೆ..?” ಎಂದು ಕೇಳಿದ ಪ್ರಶ್ನೆಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಹೆಸರನ್ನು ಹೇಳಿದ್ದಾರೆ ಕೀರ್ತಿ ಸುರೇಶ್. ಕನ್ನಡ ಸಿನಿಪ್ರಿಯರು ಹಾಗೂ ಅಪ್ಪು ಯಶ್ ಅಭಿಮಾನಿಗಳಿಗೆ ಇದು ಬಹಳ ಸಂತೋಷ ತಂದಿದೆ.

Trending

To Top