ಕೋವಿಡ್ ಹೊಡೆತಕ್ಕೆ ಎಲ್ಲಾ ವರ್ಗದ ಜನರ ಜೀವನ ದುಸ್ತರವಾಗಿದ್ದು, ಮಹಾಮಾರಿ ಆರ್ಭಟದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕೂಡ ಹಾಳಾಗಿದೆ.ಕೊರೋನದಿಂದ ಶಾಲಾ ಕಾಲೇಜುಗಳಲ್ಲಿ ತರಗತಿ ನಡೆಯದ ಪರಿಣಾಮ ಮಕ್ಕಳು ಆನ್ಲೈನ್ ತರಗತಿಯನ್ನೇ ಅವಲಂಬಿಸಿದ್ದಾರೆ.
ತರಗತಿಗೆ ಹಾಜರಾಗುವುದಕ್ಕೆ ಮಕ್ಕಳು ಇಂಟರ್ನೆಟ್ ಹಾಗೂ ನೆಟ್ವರ್ಕ್ ಗಳ ಸಮಸ್ಯೆ ಎದುರಿಸುತ್ತಿದ್ದಾರೆ.ಮೈಸೂರಿನ ವಿದ್ಯಾರ್ಥಿನಿ ಒಬ್ಬಳು ಆನ್ಲೈನ್ ತರಗತಿ ಕೇಳುವುದಕ್ಕೆ ಸೊಪ್ಪು ಮಾರುತ್ತಿದ್ದಾಳೆ. ಆನ್ಲೈನ್ ಕ್ಲಾಸ್ ಗಾಗಿ ಮೈಸೂರಿನ ಸಾದಗಳ್ಳಿ ನಿವಾಸಿ ಕೀರ್ತನಾ ಗೆ ಟ್ಯಾಬ್ ನ ಅಗತ್ಯ ಇದೆ.ಕೀರ್ತನ ತಂದೆ ಹನುಮಂತ ಎಲೆಕ್ಟ್ರಿಕಲ್ ಕೆಳೆಸ ಮಾಡುತ್ತಿದ್ದಾನೆ.
ಆದರೆ ಇವರು ಕೂಡ ಮಗಳ ಶಿಕ್ಷಣಕ್ಕಾಗಿ ಸೊಪ್ಪು ಮಾರುತ್ತಿರುವುದು ಇವರ ಬಡತನಕ್ಕೆ ಸಾಕ್ಷಿಯಾಗಿದೆ. 10ನೆ ತರಗತಿ ಓದುತ್ತಿರುವ ಕೀರ್ತನಾ ಗೆ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದೇ ಆದರೆ ಟ್ಯಾಬ್ ಕರಿದಿಗೂ ಹಣವಿಲ್ಲದ ಕಾರಣ ವಿದ್ಯಾರ್ಥಿನಿ ತಂದೆ ಹನುಮಂತಪ್ಪ ಜೊತೆ ಸೊಪ್ಪು ಮಾರುತ್ತಾ ಪರೀಕ್ಷೆಗಾಗಿ ಓದುತ್ತಿದ್ದಾಳೆ.