Cinema

ಅಂದು ಕನ್ನಡದ ಬಾಲ ಕಲಾವಿದೆ, ಇಂದು UPSC ಟಾಪರ್, ಹೆಮ್ಮೆಯ ಕನ್ನಡತಿ ಕೀರ್ತನ ಕಥೆ ನೋಡಿ

ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಮತ್ತು ನಟಿ ಮಾಲಾಶ್ರೀ ಅಭಿನಯಿಸಿರುವ “ಗಂಗಾ ಯಮುನಾ” ಸಿನಿಮಾವನ್ನು ನೀವೆಲ್ಲರೂ ನೋಡಿರುತ್ತೀರಿ. ಈಗ ಧಿಡೀರ್ ಎಂದು ಗಂಗಾ ಯಮುನಾ ಸಿನಿಮಾ ಬಗ್ಗೆ ಮಾತು ಏಕೆ ಬಂತು ಎಂದು ಯೋಚನೆ ಮಾಡುತ್ತಿದ್ದೀರಾ? ಗಂಗಾ ಯಮುನಾ ಸಿನಿಮಾದಲ್ಲಿ ಶಿವಣ್ಣ ಹಾಗೂ ಮಾಲಾಶ್ರೀಯರ ಮುದ್ದು ಮಗಳಾಗಿ ಅಭಿನಯಿಸಿದ್ದ ಬಾಲನಟಿ ನಿಮಗೆ ನೆನಪಿದ್ದಾರಾ ? ಗಂಗಾ ಯಮುನಾ ಮಾತ್ರವಲ್ಲದೆ, ಓ ಮಲ್ಲಿಗೆ, ಎ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಅವರು ಬಾಲನಟಿಯಾಗಿ ಬಣ್ಣ ಹಚ್ಚಿದ್ದಾರೆ. ಆ ಹುಡುಗಿಯ ಹೆಸರು ಕೀರ್ತನ.. ಅಂದು ಬಾಲನಟಿಯಾಗಿದ್ದ ಕೀರ್ತನ ಇಂದು ಎಷ್ಟೆಲ್ಲಾ ಸಾಧನೆ ಮಾಡಿದ್ದಾರೆ ಗೊತ್ತಾ. ಮುಂದೆ ಓದಿ…
ಕೀರ್ತನ ಅವರು ನಾಗರಿಕ ಸೇವೆ ಪರೀಕ್ಷೆಯಲ್ಲಿ 167 ನೇ ರ‍್ಯಾಂಕ್ ಪಡೆಡಿದ್ದಾರೆ. ಹಾಗೂ ಬಿಬಿಎಂಪಿಯಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅತಿ ಕಿರಿಯ ವಯಸ್ಸಿಗೆ ಈಕೆಯ ಸಾಧನೆ ಅಗಾಧ. ನಂದಿನಿ ಲೇಔಟ್ ನಲ್ಲಿ ನಡೆಯುವ ಅಣ್ತಮ್ಮ ಉತ್ಸವದಲ್ಲಿ ಭಾಗವಹಿಸಿದ್ದ ಬಾಲಕಿ, ನಂತರ ಚಿತ್ರರಂಗ ಪ್ರವೇಶಿಸಿದರು. ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅಭಿನಯದ ದೊರೆ ಕೀರ್ತನ ನಟಿಸಿದ ಮೊದಲ ಸಿನಿಮಾ. ಅದಾದ ನಂತರ ಹಲವಾರು ಸಿನಿಮಾಗಳಲ್ಲಿ ಕೀರ್ತನ ನಟಿಸಿದರು. ಓ ಮಲ್ಲಿಗೆ, ಕಾನೂರ ಹೆಗ್ಗಡತಿ, ಕರ್ಪೂರದ ಗೊಂಬೆ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಹಿರಿಯ ನಟರಾದ ಕಲ್ಯಾಣ್ ಕುಮಾರ್ ಅವರ ಜೊತೆ ತೆರೆಹಂಚಿಕೊಂಡಿದ್ದಾರೆ. ನಟರಾದ ಶಶಿ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಎಲ್ಲರ ಜೊತೆಯಲ್ಲೂ ನಟಿಸಿದ್ದಾರೆ.
ಮಾಲಾಶ್ರೀ, ಸಿತಾರಾ, ಶ್ರುತಿ, ಶ್ವೇತಾ ಸೇರಿದಂತೆ ಸ್ಟಾರ್ ನಟಿಯರ ಜೊತೆ ನಟಿಸಿ ಯಶಸ್ಸು ಪಡೆದಿದ್ದಾರೆ. ಬಾಲನಟಿಯಾಗಿದ್ದಾಗಲೇ ಹಲವಾರು ಸಂಸ್ಥೆಗಳಿಂದ ಸನ್ಮಾನ ಮಾಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಬಾಲ ಪುರಸ್ಕಾರ ಮತ್ತು ರಾಜ್ಯ ಪ್ರಶಸ್ತಿಗಳು ಸಹ ಕೀರ್ತನಾರಿಗೆ ದೊರಕಿದೆ. ಸಿನಿಮಾದಲ್ಲಿ ಅಭಿನಯಿಸಿ ದೊಡ್ಡ ದೊಡ್ಡ ಡೈಲಾಗ್ ಹೇಳಿ ಅಭ್ಯಾಸ ಇದ್ದುದರಿಂದಲೇ ಇವರ ಗ್ರಹಿಕೆ ಶಕ್ತಿ ಹೆಚ್ಚಾಯಿತಂತೆ. ವರನಟ ಡಾ.ರಾಜ್ ಕುಮಾರ್ ಅವರಿಂದಲೂ ಸಹ ಸಿಹಿ ತಿನ್ನಿಸಿಕೊಂಡಿದ್ದಾರೆ. ಚಿಗುರು, ಜನನಿ, ಸುನೀಲ್ ಪುರಾಣಿಕ್ ಅವರ ಪುಟಾಣಿ ಏಜೆಂಟ್ ಸೀರಿಯಲ್ ನಲ್ಲಿ ನಟಿಸಿದ್ದಾರೆ.”ಅಂತರ್ಜಲ” ಎಂಬ ಒಂದು ಶಾರ್ಟ್ ಮೂವಿ ಅವರ ಜೀವನದ ಮೇಲೆ ಪರಿಣಾಮ ಬೀರಿತಂತೆ. ಆಗಿನಿಂದಲೇ ಸೇವಾ ಕ್ಷೇತ್ರಕ್ಕೆ ಬರಬೇಕು ಎಂದು ತೀರ್ಮಾನ ಮಾಡಿದರಂತೆ. ಖಾಸಗಿ ವಾಹಿನಿಯಲ್ಲಿ ನಿರೂಪಣೆ ಕೂಡ ಮಾಡಿದ್ದರು ಕೀರ್ತನ ಜೊತೆಗೆ ಇಂಜಿನಿಯರಿಂಗ್ ಓದಿರುವ ಇವರು, ಇಂಜಿನಿಯರ್ ಆಗಿ ಕೂಡ ಎರಡು ವರ್ಷ ಕೆಲಸ ಮಾಡಿದ್ದಾರೆ.
ಈಗ ಬಿಬಿಎಂಪಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ನೋಡಲ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಹಲವಾರು ದಿಗ್ಗಜರಿಂದ ಹಾರೈಕೆ ಪಡೆದಿದ್ದಾರೆ. ಬಾಲ ಗಂಗಾಧರ ಸ್ವಾಮೀಜಿ ಅವರಿಂದ ಕೂಡ ಸನ್ಮಾನ ಮಾಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೀರ್ತನ ಅವರು ಜನರಿಗೆ ಇನ್ನಷ್ಟು ಸೇವೆ ಮಾಡಲಿ ಎಂದು ಹಾರೈಸೋಣ.

Trending

To Top