ಸ್ಯಾಂಡಲ್ ವುಡ್ ನಟಿ ಕಾವ್ಯ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕ್ಯಾನ್ಸರ್ ರೋಗಿಗಳಿಗೆ ನಾನು ಕೂದಲನ್ನು ದಾನ ಮಾಡಿದ್ದೇನೆ ಕ್ಯಾನ್ಸರ್ ರೋಗದಿಂದ ನಾನು ನನ್ನ ಚಿಕ್ಕಪ್ಪನನ್ನು ಕಳೆದುಕೊಂಡಿದ್ದೇನೆ ಆ ನೋವನ್ನು ತುಂಬಾ ಹತ್ತಿರದಿಂದ ಕಂಡಿದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ.
ಕೂದಲು ದಾನ ತುಂಬಾ ಸಣ್ಣ ಕೆಲಸವೇ ಇರಬಹುದು ಆದರೆ ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಈ ಒಳ್ಳೆ ಕೆಲಸಕ್ಕೆ ನೀವು ಕೈ ಜೋಡಿಸಿ ಎಂದು ಮನವಿ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಕೂದಲು ಕಟ್ ಮಾಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕೊರೋನ ಸಂಕಷ್ಟದ ಸಮಯದಲ್ಲಿ ಪ್ಲಾಸ್ಮಾ ಧಾನ ಮಾಡಿ ಇತರರಿಗೂ ಮಾದರಿಯಾಗಿದ್ದರು.
ಲಾಕ್ ಡೌನ್ ಸಮಯದಲ್ಲಿ ದಿನಸಿ ಕಿಟ್ ಆಹಾರದ ಪೊಟ್ಟಣಗಳನ್ನು ಹಂಚಿದ್ದರು. ಇದೀಗ ನಟಿ ಕಾವ್ಯ ಶಾಸ್ತ್ರಿ ಕ್ಯಾನ್ಸರ್ ರೋಗಿಗಳಿಗೆ ಕೂದಲು ಧಾನ ಮಾಡಿದ್ದಾರೆ.ಈ ಹಿಂದೆ ಸ್ಯಾಂಡಲ್ ವುಡ್ ನ ದೃವ ಸರ್ಜಾ ಕಾರುಣ್ಯ ರಾಮ್ ಹೀಗೆ ಅನೇಕ ಮಂದಿ ನಟ ನಟಿಯರು ಕ್ಯಾನ್ಸರ್ ರೋಗಿಗಳಿಗೆ ಕೂದಲು ಧಾನ ಮಾಡಿದ್ದಾರೆ ಇದೀಗ ಅದೇ ಸಾಲಿಗೆ ನಟಿ ಕಾವ್ಯ ಶಾಸ್ತ್ರಿ ಸೇರ್ಪಡೆಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.