News

(video)ಕುತೂಹಲ ಮೂಡಿಸಿದೆ ಶಿವಣ್ಣನ ಕವಚ ಚಿತ್ರದ ಟೀಸರ್! ಮತ್ತೊಂದು ಅದ್ಭುತ ಕನ್ನಡ ಸಿನಿಮಾ, ನೋಡಿ ಶೇರ್ ಮಾಡಿ

kavacha

ನಮ್ಮ ಶಿವಣ್ಣ ಅವ್ರ ಹೊಸ ಕನ್ನಡ ಚಿತ್ರ ಕವಚ ಚಿತ್ರದ ಟೀಸರ್ ಬಿಡುಗಡೆ ಆಗಿ ಭಾರಿ ಸಡ್ಡು ಮಾಡುತ್ತಿದೆ. ಕವಚ ಚಿತ್ರದಲ್ಲಿ ಶಿವಣ್ಣ, ಇಶಾ ಕೊಪ್ಪಿಕರ್, ರಾಜೇಶ್ ನಟರಂಗ, ಕೃತಿಕಾ ಜಯಕುಮಾರ್, ವಶಿಷ್ಠ ಅವರು ನಟಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ನಮ್ಮ ಶಿವಣ್ಣ ಅವರು ಒಂದು ಕುರುಡನ ಪಾತ್ರವನ್ನು ಮಾಡುತ್ತಿದ್ದಾರೆ. ಶಿವಣ್ಣ ಅವರ ಅಭಿನಯಕ್ಕೆ ಅವರ ಶ್ರಮಕ್ಕೆ ಒಂದು ಸಲಾಂ! ತಪ್ಪದೆ ನೀವು ಕವಚ ಚಿತ್ರದ ಟೀಸರ್ ಅನ್ನು ನೋಡಿರಿ, ಈ ಕೆಳಗಿನ ವಿಡಿಯೋ ನೋಡಿರಿ
ಕವಚ ಚಿತ್ರದ ಕಂಪ್ಲೀಟ್ ಕ್ಯಾಸ್ಟ್ ಮತ್ತು crew ಡೀಟೇಲ್ಸ್ ಇಲ್ಲಿದೆ ನೋಡಿರಿ Music: Arjun Janya & The 4 Musics Background Score: Ron Ethan Yohann , DOP: Rahul Srivatsav, Action: Ravi Varma, Editor: Jo.Ni Harsha, Dialogues: M S Ramesh, Lyrics: K.Kalyan, Dr V.Nagendra Prasad,Kaviraj, Singers: S P Balasubrahmanyam, Vyasaraj, Baby Sreya Jayadeep, Choreography: Shankar, Imran, Art: Mohan Pandit, Sound Designer: Sampath Alwar, Audiographer: E Radhakrishna. ಕವಚ ಚಿತ್ರವನ್ನು GVR ವಾಸು ಅವರು ನಿರ್ದೇಶಿಸಿದ್ದಾರೆ. ಇದಲ್ಲದೆ ಈ ಚಿತ್ರವನ್ನು ಸತ್ಯನಾರಾಯಣ ಅವರು ನಿರ್ಮಾಣ ಮಾಡಿದ್ದಾರೆ.
ಕವಚ ಚಿತ್ರ ಮಲಯಾಳಂ ನ ಒಪ್ಪಂ ಚಿತ್ರದ ರಿಮೇಕ್ ಚಿತ್ರ. ಶಿವಣ್ಣ ಅವರು ಸುಮಾರು 15 ವರ್ಷಗಳ ನಂತರ ಒಂದು ರಿಮೇಕ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರು “ನನಗೆ ಇದರ ಕಥೆ ಮತ್ತು ಸೊಸೈಟಿ ಗೆ ಇರುವ ಒಂದು ಮೆಸೇಜ್ ನಿಂದ ಈ ಚಿತ್ರವನ್ನು ಒಪ್ಪಿಕೊಂಡೆ” ಎಂದು ಹೇಳಿದ್ದಾರೆ. ಕವಚ ಚಿತ್ರವೂ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಈಗಾಗಲೇ ಟೀಸರ್ ನೋಡಿ ಬಹಳಷ್ಟು ಕುತೂಹಲ ಮೂಡಿಸಿದೆ ಕನ್ನಡ ಚಿತ್ರ ಕವಚ. ಕವಚ ಚಿತ್ರದಲ್ಲಿ ತಬಲಾ ನಾಣಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಇತ್ತೀಚಿಗೆ ಶಿವಣ್ಣ ಅವರ ದಿ ವಿಲನ್ ಚಿತ್ರ 2018 ಸಾಲಿನ ಬ್ಲಾಕ್ ಬಸ್ಟರ್ ಚಿತ್ರ ಎಂದೇ ಹೇಳಬಹುದು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ನಟಿಸಿದ್ದರು ಹಾಗು ದಿ ವಿಲನ್ ಚಿತ್ರವನ್ನು ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದರು. ಇದಲ್ಲದೆ ನಮ್ಮ ಶಿವಣ್ಣ ಅವರು ರುಸ್ತುಮ್, DRK ಹಾಗು ದ್ರೋಣ ಎಂಬ ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಸದ್ಯ ಕನ್ನಡದಲ್ಲಿ ಬಹಳ ಬ್ಯುಸಿ ಆಗಿರುವ ನಟ ಎಂದರೆ ಅದುವೇ ನಮ್ಮ ಶಿವಣ್ಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top