ಚೆನೈ: ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಬಹುಬೇಡಿಕೆ ನಟಿಯಾದ ಕತ್ರಿನಾ ಕೈಫ್ ತಮಿಳುನಾಡಿನ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದರ ಜೊತೆಗೆ ಇತರರಿಗೂ ದೇಣಿಗೆ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಪ್ರಸ್ತುತ ಕತ್ರಿನಾ ಕೈಫ್ ರವರು ಅನೇಕ ಸಿನೆಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೆ ತಮಿಳುನಾಡಿನ ಮಧುರೈನಲ್ಲಿ ತಮ್ಮ ತಾಯಿ ಕಟ್ಟಿಸಿದ ಶಾಲೆಯನ್ನು ಉನ್ನತೀಕರಣಗೊಳಿಸುವ ನಿಟ್ಟಿನಲ್ಲಿ ದೇಣಿಗೆ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಎಲ್ಲರಿಗೂ ಗುಣ ಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಕತ್ರಿನಾ ರವರ ತಾಯಿ ಮಧುರೈನಲ್ಲಿ ಶಾಲೆಯೊಂದನ್ನು ಕಟ್ಟಿಸಿದ್ದು, ಈ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರಲ್ಲಿ ಸುಮಾರು 200 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಇದೀಗ ಇನ್ನೂ ಹೆಚ್ಚಿನ ತರಗತಿಗಳ ವರೆಗೆ ಶಿಕ್ಷಣ ನೀಡುವ ಸಲುವಾಗಿ ಕತ್ರಿನಾ ತಮ್ಮ ತಾಯಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುವ ಮೂಲಕ ದೇಣಿಗೆ ಕೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಸ್ಥಿತಿಗತಿ ಹೇಗಿದೆ? ಎಂಬ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಇನ್ನೂ ತನ್ನ ತಾಯಿ ಕಟ್ಟಿಸಿರುವಂತಹ ಈ ಶಾಲೆಯ ಕುರಿತು ಮಾಹಿತಿ ನಿಮಗೆ ತಿಳಿಸಲು ನನಗೆ ಹೆಮ್ಮೆಯಾಗಿದೆ. ಗುಣಮಟ್ಟದ ಇಂಗ್ಲೀಷ್ ಮೀಡಿಯಂ ಶಿಕ್ಷಣವನ್ನು ಮಧುರೈನಲ್ಲಿರುವ ಮೌಂಟೆನ್ ವೀವ್ ಶಾಲೆಯಲ್ಲಿ ಕಳೆದ 2015 ರಿಂದ ಬಡಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ನಮ್ಮ ಕೈಯಲ್ಲಾದ ಸಹಾಯವನ್ನು ಮಾಡೋಣ ಎಂದಿದ್ದಾರೆ.
