Film News

ಜ.1 ಕ್ಕೆ ಕಸ್ತೂರಿ ಮಹಲ್ ಟೀಸರ್!

ಬೆಂಗಳೂರು: ಖ್ಯಾತ ನಿರ್ದೇಶಕ ದಿನೇಶ್ ಬಾಬು ರವರ ಸಿನೆಮಾ ನಟಿ ಶಾನ್ವಿ ಅಭಿನಯದ ಕಸ್ತೂರಿ ಮಹಲ್ ಟೀಸರ್ ಇದೇ 2021ನೇ ಜನವರಿ 01ನೇ ತಾರೀಖಿನಂದು ರಿಲೀಸ್ ಆಗಲದೆಯಂತೆ.

ಈಗಾಗಲೇ ಸಂಪೂರ್ಣ ಶೂಟಿಂಗ್ ಮುಗಿಸಿರುವ ಕಸ್ತೂರಿ ಮಹಲ್ ಸಿನೆಮಾ ಸೈಕಲಾಜಿಕಲ್ ಹಾಗೂ ಹಾರರ್ ಮಾದರಿಯ ಥ್ರಿಲ್ಲರ್ ಕಥೆಯನ್ನು ಆಧರಿಸಿದ್ದಾಗಿದೆ. ಲಾಕ್ ಡೌನ್ ನಂತರ ಆರಂಭಗೊಂಡ ಈ ಚಿತ್ರ ಕಡಿಮೆ ಅವಧಿಯಲ್ಲಿಯೇ ಪೂರ್ಣಗೊಂಡಿದೆ. ಇನ್ನೂ ನಟಿ ಶಾನ್ವಿ ಶ್ರೀವಾಸ್ತವ ಅಭಿನಯನದ ಎರಡನೇ ಹಾರರ್ ಚಿತ್ರ ಇದಾಗಿದೆ. ಇನ್ನೂ ಶಾನ್ವಿ ಚಂದ್ರಲೇಖಾ ಎಂಬ ಹಾರರ್ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು.

ಈ ಚಿತ್ರವನ್ನು ಲಾಕ್ ಡೌನ್ ತೆರವಿನ ಬಳಿಕ ಅಕ್ಟೋಬರ್ ಮಾಹೆಯಲ್ಲಿ ಚಿಕ್ಕಮಂಗಳೂರು ಹಾಗೂ ಕೊಟ್ಟಿಗೆಹಾರ ಎಂಬ ಪ್ರದೇಶಗಳಲ್ಲಿ ಶೂಟಿಂಗ್ ಮಾಡಿರುವ ತಂಡ ಕೇವಲ ೨೦ ದಿನಗಳಲ್ಲಿಯೇ ಚಿತ್ರವನ್ನು ಪೂರ್ಣಗೊಳಿಸಿದೆ. ಇನ್ನೂ ಚಿತ್ರದ ನಿರ್ದೇಶಕ ದಿನೇಶ್ ಬಾಬು ಅತೀ ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಸುವುದರಲ್ಲಿ ಫೇಮಸ್ ಆಗಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು, ನಿನಾಸಂ ಅಶ್ವತ್ಥ್, ಅಕ್ಷರ್, ಸ್ಕಂದ ಅಶೋಕ್, ಶೃತಿ ಪ್ರಕಾಶ್, ನಟಿಸಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ನಿರ್ದೇಶಕ ದಿನೇಶ್ ಬಾಬು ರವರೆ ಬರೆದಿರುವುದು ಮತ್ತೊಂದು ವಿಶೇಷವಾಗಿದೆ. ಶ್ರೀ ಭವಾನಿ ಆರ್ಟ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಆರ್.ಸಿ.ರವೀಶ್, ನವೀನ್ ಹಾಘು ಅಕ್ಷಯ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮೊದಲು ಕಸ್ತೂರಿ ನಿವಾಸ ಎಂಬ ಟೈಟಲ್ ಇಟ್ಟು, ನಾಯಕಿಯಾಗಿ ರಚಿತ ರಾಮ್ ಆಯ್ಕೆಯಾಗಿದ್ದರಂತೆ, ನಂತರದ ಬೆಳವಣಿಗೆಯಲ್ಲಿ ರಚಿತಾ ಸಿನೆಮಾದಿಂದ ಹೊರನಡೆದರು. ನಂತರ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿ ಚಿತ್ರದ ಟೈಟಲ್ ಕೂಡ ಕಸ್ತೂರಿ ಮಹಲ್ ಎಂಬ ಹೆಸರನ್ನಿಡಲಾಯಿತು.

Trending

To Top