Home Film News ಕಾರ್ತಿಕೇಯ-2 ಸಿನೆಮಾ ತಂಡದಿಂದ ಭರ್ಜರಿ ಆಫರ್, ಆ ಕೆಲಸ ನೀವು ಮಾಡಿ 6 ಲಕ್ಷ ಗೆಲ್ಲಿ….!

ಕಾರ್ತಿಕೇಯ-2 ಸಿನೆಮಾ ತಂಡದಿಂದ ಭರ್ಜರಿ ಆಫರ್, ಆ ಕೆಲಸ ನೀವು ಮಾಡಿ 6 ಲಕ್ಷ ಗೆಲ್ಲಿ….!

ಇತ್ತೀಚಿಗೆ ಸಿನೆಮಾ ಪ್ರಮೋಷನ್ ಗಳನ್ನು ಮಾಡಲು ಚಿತ್ರತಂಡಗಳು ವಿಭಿನ್ನ ರೀತಿಯಲ್ಲಿ ಪ್ಲಾನ್ ಮಾಡುತ್ತಿರುತ್ತಾರೆ. ಇದೀಗ ಈ ಸಾಲಿಗೆ ಕಾರ್ತಿಕೇಯ 2 ಸಿನೆಮಾ ಸಹ ಸೇರಿಕೊಂಡಿದೆ. ಟಾಲಿವುಡ್ ನ ಯಂಗ್ ನಟ ನಿಖಿಲ್ ಸಿದ್ದಾರ್ತ್ ಅಭಿನಯದ ಕಾರ್ತಿಕೇಯ-2 ಸಿನೆಮಾದ ಪ್ರಮೋಷನ್ ಅನ್ನು ಕಾಸ್ಟ್ಲಿಯಾಗಿ ಪ್ಲಾನ್ ಮಾಡಿದೆ. ಸಿನೆಮಾ ತಂಡ ಘೋಷಣೆ ಮಾಡಿದಂತೆ ಅವರು ಹೇಳಿದ ಕೆಲಸ ಮಾಡಿದರೇ ಸಾಕು ನೀವು ಆರು ಲಕ್ಷ ಗೆಲ್ಲುವ ಅವಕಾಶವಿದೆ. ಅಷ್ಟಕ್ಕೂ ಸಿನಿತಂಡ ಹೇಳಿರುವ ಆ ಕೆಲಸ ಆದರೂ ಏನು, ಚಿತ್ರತಂಡ ಬಿಟ್ಟುಕೊಟ್ಟ ಕ್ಲೂ ಏನು ಎಂಬ ವಿಚಾರಕ್ಕೆ ಬಂದರೇ,

ಈಗಾಗಲೇ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟಿಸಿದ ಕಾರ್ತಿಕೇಯ-2 ಸಿನೆಮಾ ಪೋಸ್ಟರ್‍, ಟ್ರೈಲರ್‍ ಗಳ ಮೂಲಕವೇ ದೊಡ್ಡದಾಗಿ ಸದ್ದು ಮಾಡುತ್ತಿದೆ. ಈಗಾಗಲೇ ಈ ಸಿನೆಮಾ ಶೂಟಿಂಗ್ ಮುಗಿಸಿದ್ದು, ಸಿನೆಮಾ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇನ್ನೂ ಚಿತ್ರತಂಡ ಪ್ರಮೋಷನ್ ಅನ್ನು ವಿಭಿನ್ನವಾಗಿ ಪ್ಲಾನ್ ಮಾಡಿದೆ. ಸಿನೆಮಾ ಪ್ರಮೋಷನ್ ನಲ್ಲಿ ಜನರನ್ನು ಭಾಗಿಯಾಗುವಂತೆ ಮಾಡಿದೆ. ಇನ್ನೂ ಚಿತ್ರತಂಡ ಪ್ರೇಕ್ಷಕರಿಗೆ ಆರು ಲಕ್ಷ ಬಹುಮಾನ ಕೊಡುವ ಪ್ಲಾನ್ ಮಾಡಿದೆ. ರಾಷ್ಟ್ರದಲ್ಲಿನ ಪ್ರಮುಖವಾದ ನಾಲ್ಕು ನಗರಗಳಲ್ಲಿ ಬಂಗಾರದ ಶ್ರೀ ಕೃಷ್ಣನ ವಿಗ್ರಹಗಳನ್ನು ಬಚ್ಚಿಡಲಾಗುತ್ತದೆ. ಅದನ್ನು ಹುಡುಕಿಕೊಟ್ಟವರಿಗೆ ಬರೊಬ್ಬರಿ ಆರು ಲಕ್ಷ ಬೆಲೆಯ ಆ ಪ್ರತಿಮೆಗಳನ್ನು ಬಹುಮಾನವನ್ನಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದೆ. ಸದ್ಯ ಈ ಆಫರ್‍ ಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಕ್ರೇಜ್ ಹುಟ್ಟಿಕೊಂಡಿದೆ.

ಇನ್ನೂ ಕೃಷ್ಣನ ಪ್ರತಿಮೆಗಳನ್ನು ಕಂಡು ಹಿಡಿಯಲು ಲೊಕೇಷನ್ ಗೆ ಸಂಬಂಧಿಸಿದಂತೆ ಕೆಲವೊಂದು ಕ್ಲೂಗಳನ್ನು ನೀಡುತ್ತೇವೆ. ಇದರ ಭಾಗವಾಗಿಯೇ ಮೊಲದನೇ ಕ್ಲೂ ಅನ್ನು ಸಹ ರಿವೀಲ್ ಮಾಡಿದೆ ಚಿತ್ರತಂಡ. ಈ ಕುರಿತು ಪೋಸ್ಟ್ ಮಾಡಿದ ಚಿತ್ರತಂಡ ಕಾರ್ತಿಕೇಯ ಚಾಲೆಂಜ್ ನಲ್ಲಿ ಲಾರ್ಡ್ ಕೃಷ್ಣ ಪ್ಯೂರ್‍ ಗೋಲ್ಡ್ ವಿಗ್ರಹವನ್ನು ಗೆಲ್ಲಲು ಮೊದಲನೇ ಕ್ಲೂ ನೀಡುತ್ತಿದ್ದೇವೆ. ವಿಶ್ವಂ ಒಕ ಪೂಸಲ ದಂಡಾ. ನಿಧಿ ನೀ ಭಾಗ್ಯಂ ಲೋ ಉಂದಿ ಅಂಟೆ ಭಾಗ್ಯನಗರಪು ನದಿಬೊಡ್ಡಲೋ ಉನ್ನಾ ಜನಾಲ ಪೂಸಲ ದಂಡನಿ ಚೆರುಕೋ, ಗೆಟ್ ಸರ್ಚ್ ಎಂದು ತೆಲುಗುಗಿನಲ್ಲಿ ಕ್ಲೂ ನೀಡಿದ್ದಾರೆ. ಇನ್ನೂ ಈಗಾಗಲೇ ನೆಟ್ಟಿಗರು ಹಾಗೂ ಪ್ರೇಕ್ಷಕರು ಈ ಕ್ಲೂ ಜಾಡು ಹಿಡಿಯಲು ಶುರು ಮಾಡಿದ್ದಾರಂತೆ. ಇನ್ನೂ 6 ಲಕ್ಷ ಬೆಲೆಬಾಳುವ ವಿಗ್ರಹಗಳನ್ನು ಗೆಲ್ಲುವ ವೀರನ್ಯಾರು ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ಕಾರ್ತಿಕೇಯ-2 ಸಿನೆಮಾ ಇದೇ ಆಗಸ್ಟ್ 12 ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ಸಿನೆಮಾ ಪ್ರಮೋಷನ್ ಅನ್ನು ಸಹ ವಿನೂತನವಾಗಿ ನಿರ್ವಹಿಸುತ್ತಿದೆ. ಇನ್ನೂ ಈಗಾಗಲೇ ಕಾರ್ತಿಕೇಯ-2 ಸಿನೆಮಾ ಭಾರಿ ನಿರೀಕ್ಷೆಯನ್ನೇ ಹುಟ್ಟಿಸಿದೆ. ಸಿನೆಮಾ ಟ್ರೈಲರ್‍, ಪೋಸ್ಟರ್‍ ಗಳು ರಿಲೀಸ್ ಆಗಿದ್ದು ಸಿನೆಮಾದ ಮೇಲಿನ ನಿರೀಕ್ಷೆಯನ್ನು ಮತಷ್ಟು ಹೆಚ್ಚಿಸಿದೆ. ಈ ಸಿನೆಮಾದಲ್ಲಿ ನಿಖಿಲ್ ಜೊತೆಗೆ ಅನುಪಮಾ ಪರಮೇಶ್ವರನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಜೊತೆಗೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಸಹ ಸಿನೆಮಾ ರಿಲೀಸ್ ಆಗಲಿದೆ.

Exit mobile version