Entertainment

ಕರ್ನಾಟಕದ ಅಳಿಯ ಸಿನಿಮಾವನ್ನು ಅಪ್ಪುಗೆ ಅರ್ಪಣೆ ಮಾಡಿದ ರಾಘಣ್ಣ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಿ, ಅವರ ನೆನಪುಗಳನ್ನು ಮೆಲುಕು ಹಾಕುವ ಸಲುವಾಗಿ ನಿನ್ನೆ ಕನ್ನಡ ಚಿತ್ರರಂಗ ಪುನೀತ ನಮನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ಹಲವು ಕಲಾವಿದರು ಭಾಗಿಯಾಗಿ, ಪುನೀತ್ ಅವರ ಬಗ್ಗೆ ಮಾತನಾಡಿದರು..

ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದ ಅನೇಕ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪುನೀತ್ ಅವರ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು. ಹಿರಿಯ ಕಲಾವಿದರೆಲ್ಲರು, ಪುನೀತ್ ರಾಜ್ ಕುಮಾರ್ ಅವರು ನಮ್ಮ ಶ್ರದ್ಧಾಂಜಲಿ ಕಾರ್ಯಕ್ಕೆ ಬರಬೇಕಿತ್ತು, ಆದರೆ ನಾವೇ ಬರುವ ಹಾಗೆ ಆಗಿದೆ ಎಂದು ಬಹಳ ಬೇಸರ ಮಾಡಿಕೊಂಡರು.

ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 23 ದಿನಗಳು ಕಳೆದಿದೆ. ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿದಿನ ತಮ್ಮನ ಬಗ್ಗೆ ಹಲವು ವಿಚಾರಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಒಳ್ಳೆ ಹುಡುಗ ಪ್ರಥಮ್ ನಿರ್ದೇಶನ ಮಾಡಿರುವ ಕರ್ನಾಟಕದ ಆಳಿಯ ಸಿನಿಮಾದಲ್ಲಿ ರಾಘಣ್ಣ ಸಹ ನಟಿಸುತ್ತಿದ್ದು, ಈ ಸಿನಿಮಾವನ್ನು ಅಪ್ಪುಗೆ ಅರ್ಪಣೆ ಮಾಡಿದ್ದಾರೆ ರಾಘಣ್ಣ.

Trending

To Top