ಕನ್ನಡ ನಟರ ಒತ್ತಾಯಕ್ಕೆ ಮಣಿದ ಸರ್ಕಾರ: ಚಿತ್ರಮಂದಿರಗಳ ಪೂರ್ಣ ಭರ್ತಿಗೆ ಅವಕಾಶ!

ಬೆಂಗಳೂರು: ಕೊರೋನಾ ಲಾಕ್‌ಡೌನ್ ಹೊಸ ನಿಯಮಾವಳಿಗಳಂತೆ ಕೇಂದ್ರ ಸರ್ಕಾರ ಚಿತ್ರಮಂದಿರಗಳಲ್ಲಿ ಪೂರ್ಣ ಆಸನಗಳ ಭರ್ತಿಗೆ ಅವಕಾಶ ನೀಡಿತ್ತು. ಆದರೆ ರಾಜ್ಯ ಸರ್ಕಾರ ಅವಕಾಶ ನೀಡದೇ ಇರುವುದರಿಂದ ಇಡೀ ಕನ್ನಡ ಚಿತ್ರರಂಗದ ನಟರು ವಿರೋಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪೂರ್ಣ ಭರ್ತಿಗೂ ಅವಕಾಶ ನೀಡಿದೆ.

ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಮದುವೆ, ಜಾತ್ರೆ, ಸಮಾರಂಭ, ಸಭೆಗಳಿಗೆ ಎಲ್ಲದಕ್ಕೂ ಅವಕಾಶ ನೀಡಿದ್ದು, ಚಿತ್ರಮಂದಿರಗಳಿಗೆ ಮಾತ್ರ ಅವಕಾಶ ನೀಡಿರಲಿಲ್ಲ. ಈ ಧೋರಣೆಯನ್ನು ಪುನೀತ್ ರಾಜಕುಮಾರ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಇನ್ನೂ ಈ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ರವರು ಸಹ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇದೀಗ ಕೆಲವೊಂದು ಮಾರ್ಗಸೂಚಿಗಳಂತೆ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿದೆ ರಾಜ್ಯ ಸರ್ಕಾರ.

ಇನ್ನೂ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ಜೊತೆ ಆರೋಗ್ಯ ಸಚಿವ ಕೆ.ಸುಧಾಕರ್ ಮಾತುಕತೆ ನಡೆಸಿದ್ದು, ಮುಂದಿನ ೪ ವಾರಗಳ ಕಾಲ ಸಿನೆಮಾ ಥಿಯೇಟರ್‌ಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಲು ತೀರ್ಮಾನ ಮಾಡಿದ್ದು, ಈ ಕುರಿತು ಹೊಸ ಮಾರ್ಗಸೂಚಿ ಸಹ ಬಿಡುಗಡೆಯಾಗಲಿದೆ. ಸರ್ಕಾರ ನೀಡುವಂತಹ ಮಾರ್ಗಸೂಚಿಗಳನ್ನು ಥಿಯೇಟರ್ ಮಾಲೀಕರು ಹಾಗೂ ಸಾರ್ವಜನಿಕರೂ ಸಹ ಕಡ್ಡಾಯವಾಗಿ ಪಾಲನೆ ಮಾಡಬೇಕು. ಒಂದು ವೇಳೆ ಚಿತ್ರಮಂದಿರಗಳಿಂದ ಕೊರೋನಾ ಸೋಂಕು ಹರಡುವಿಕೆ ಹೆಚ್ಚಾದರೇ ನಿರ್ಬಂಧವನ್ನು ಹೇರಲಾಗುತ್ತದೆ ಎಂದಿದ್ದಾರೆ.

Previous articleಆಚಾರ್ಯ ಚಿತ್ರದಲ್ಲಿ ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟನೆ!
Next articleಸರ್ಕಾರುವಾರಿ ಪಾಟ ಚಿತ್ರದಲ್ಲಿ ಮಹೇಶ್ ಲುಕ್ ಹೀಗಿರುತ್ತಾ?