ಕನ್ನಡ ರಾಜ್ಯೋತ್ಸವ ದಿನದಂದು ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ….!

ಇಡೀ ವಿಶ್ವ ವ್ಯಾಪಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ಅಭಿಮಾನಿಗಳು ಅಕ್ಟೋಬರ್‍ 29 ರ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಅಪ್ಪು ಅಭಿಮಾನಿಗಳೂ ಸೇರಿದಂತೆ ಕೊಟ್ಯಂತರ ಕನ್ನಡಿಗರಿಗೆ ಶಾಕಿಂಗ್ ಸುದ್ದಿ ಬಂದಿತ್ತು. ಯಾರೂ ಊಹಿಸಿರದ ಸುದ್ದಿ ಅದಾಗಿತ್ತು. ಅಪ್ಪು ಸಾವಿನ ಸುದ್ದಿ ಬರುತ್ತಿದ್ದಂತೆ ಇಡೀ ಕರುನಾಡು ಮಾತ್ರವಲ್ಲದೇ ಇಡೀ ದೇಶವೇ ಕಂಬನಿ ಮಿಡಿಯಿತು. ಇಂದಿಗೂ ಸಹ ಅಪ್ಪು ಇಲ್ಲ ಎಂಬ ವಿಚಾರವನ್ನು ನಂಬಲು ಸಾಧ್ಯವೇ ಇಲ್ಲ ಎನ್ನಬಹುದಾಗಿದೆ. ಅವರ ಸಮಾಧಿಯ ಬಳಿಗೆ ಇಂದಿಗೂ ಸಹ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಅಪ್ಪು ದರ್ಶನ ಪಡೆಯುತ್ತಿರುತ್ತಾರೆ. ಇದೀಗ ಅಪ್ಪು ರವರಿಗೆ ನವೆಂಬರ್‍ 1 ರಂದು ಪ್ರತಿಷ್ಟಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ತೋಟಗಾರಿಕೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿರವರು ನವೆಂಬರ್‍ 1 ರಂದು ಪುನೀತ್ ರಾಜ್ ಕುಮಾರ್‍ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನೂ ಪ್ರಶಸ್ತಿ ಪ್ರಧಾನ ಮಾಡಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲು ಸಮಿತಿಯನ್ನು ಸಹ ರಚಿಸಲಾಗುತ್ತದೆ. ಇನ್ನೂ ಈ ಸಮಿತಿಯಲ್ಲಿ ರಾಜ್ ಕುಮಾರ್‍ ರವರ ಕುಟುಂಬದ ಸದಸ್ಯರು ಸಹ ಇರುತ್ತಾರೆ. ಎಲ್ಲರೂ ಒಟ್ಟಾಗಿ ಪುನೀತ್ ರಾಜ್ ಕುಮಾರ್‍ ರವರಿಗೆ ಮರಣೋತ್ತರ ಕನ್ನಡ ರತ್ನ ಪ್ರಶಸ್ತಿಯನ್ನು ಗೌರವಯುತವಾಗಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಇನ್ನೂ ಲಾಲ್ ಭಾಗ್ ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಈ ಭಾರಿ ಸ್ವಾತಂತ್ಯ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ  ವಿಶೇಷವಾಗಿ ನಡೆಯುತ್ತಿದೆ. ಜೊತೆಗೆ ಈ ಬಾರಿ ಡಾ.ರಾಜ್ ಕುಮಾರ್‍ ಹಾಗೂ ಪುನೀತ್ ರಾಜ್ ಕುಮಾರ್‍ ರವರ ಸ್ಮರಣಾರ್ಥ ವಿಶೇಷವಾದ ಪ್ರದರ್ಶನ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಹತ್ತು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಸಾಕಷ್ಟು ಜನರು ಬರುವ ನಿರೀಕ್ಷೆ ಇದೆ. ಪುನೀತ್ ರಾಜ್ ಕುಮಾರ್‍ ಹಾಗೂ ರಾಜ್ ಕುಮಾರ್‍ ರವರ ಪ್ರತಿಮೆಗಳು ಎಲ್ಲರನ್ನೂ ಆಕರ್ಷಣೆ ಮಾಡುತ್ತಿವೆ. ಎಲ್ಲರೂ ಈ ಅದ್ಬುತವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕೆಂದರು. ಇನ್ನೂ ಅಪ್ಪುಗೆ ಕನ್ನಡರತ್ನ ಪ್ರಶಸ್ತಿ ಘೋಷಣೆ ಮಾಡುತ್ತಿದ್ದಂತೆ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ.

ಇನ್ನೂ ಡಾ.ರಾಜ್ ಕುಮಾರ್‍ ಹಾಗೂ ಪುನೀತ್ ರಾಜ್ ಕುಮಾರ್‍ ರವರ ಪ್ರತಿಮೆಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಲಾಗಿದೆ. ಚಿನ್ನ ಲೇಪಿತವಾದ ಅಪ್ಪು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಅಪ್ಪು ಪುಣ್ಯ ಭೂಮಿಯಿಂದ ಜ್ಯೋತಿಯನ್ನು ಹೊತ್ತು ಅವರ ಸಮಾಧಿಯವರೆಗೆ ತಂದು ಪೂಜೆ ಸಲ್ಲಿಸಿದರು. ಬಳಿಕ ಜ್ಯೋತಿಯನ್ನು ಬೆಳ್ಳಿ ರಥದ ಮೂಲಕ ಲಾಲ್ ಬಾಗ್ ವರೆಗೂ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ತೋಟಗಾರಿಕಾ ಸಚಿವ ಮುನಿರತ್ನ ಇದ್ದರು. ಜೊತೆಗೆ ಬೆಳ್ಳಿರಥದ ಜೊತೆಗೆ ಸೈಕಲ್ ಜಾಥಾ ಸಹ ಹಮ್ಮಿಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಹೆಸರಿನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಈ ಹಿಂದೆಗಿಂತಲೂ ಹೆಚ್ಚಿನ ಜನರು ಭಾಗವಹಿಸುತ್ತಿದ್ದಾರೆ. ಆದ ಕಾರಣ ಆ.15 ರ ಬಳಿಕವೂ ಸಹ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ ಎನ್ನಲಾಗಿದೆ.

Previous articleಯುವಕನೊಬ್ಬ ನೀಡಿದ ಕಿರುಕುಳವನ್ನು ರಿವೀಲ್ ಮಾಡಿದ ಮಲಯಾಳಿ ಬ್ಯೂಟಿ ನಿತ್ಯಾ…!
Next articleಅನೇಕ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಖ್ಯಾತ ನಟಿ ದೀಪಿಕಾ, ಕಾರಣವಾದರೂ ಏನು?