Film News

ದೇವ್ರು ವರ ಕೊಟ್ರು, ಪೂಜಾರಿ ಕೊಡಲಿಲ್ಲ ಅಂದಂಗಾಯ್ತು ಚಿತ್ರಮಂದಿರಗಳ ಪಾಡು!

ಬೆಂಗಳೂರು: ಕೋವಿಡ್ ಲಾಕ್‌ಡೌನ್ ನಿಯಾಮವಳಿಗಳಂತೆ ಚಿತ್ರಮಂದರಿಗಳಲ್ಲಿ ಕೇವಲ ಶೇ.50 ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಿತ್ತು ಕೇಂದ್ರ ಸರ್ಕಾರ. ಇದೀಗ ಕೇಂದ್ರ ಸರ್ಕಾರ ಹಲವು ನಿಬಂಧನೆಗಳನ್ನು ವಿಧಿಸಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿದರೂ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಫೆಬ್ರವರಿ ಮಾಸಾಂತ್ಯದವರೆಗೂ ಹಳೆಯ ನಿಯಮಗಳನ್ನೆ ಪಾಲಿಸುವಂತೆ ಆದೇಶಿದೆಯಂತೆ.

ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡದೇ ಇದ್ದರೂ ಕೂಡ, ಈ ಹಿಂದೆ ತಮಿಳುನಾಡು ಸರ್ಕಾರ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿ ಮತ್ತೆ ಕೇಂದ್ರ ಸರ್ಕಾರದ ವಿರೋಧದಿಂದ ಆದೇಶ ವಾಪಸ್ಸು ಪಡೆದಿತ್ತು. ಇದೀಗ ಕೇಂದ್ರ ಸರ್ಕಾರವೇ ಹಲವಾರು ನಿಬಂಧನೆಗಳನ್ನು ವಿಧಿಸುವ ಮೂಲಕ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿದೆ.

ಆದರೆ ರಾಜ್ಯ ಸರ್ಕಾರ ಮಾತ್ರ ಈ ಅವಕಾಶ ನೀಡಿಲ್ಲ. ಕೊರೋನಾ ಎರಡನೇ ಅಲೆ ಬರುವ ಸಾಧ್ಯತೆಯಿರುವ ಕಾರಣ ಹಾಗೂ ಕರೋನಾ ಸೋಂಕು ಸಂಪೂರ್ಣವಾಗಿ ಕಡಿಮೆಯಾಗದ ಕಾರಣ ಹೋಟೆಲ್, ರೆಸ್ಟೋರೆಂಟ್, ಮೆಟ್ರೊಗಳು ಹಾಗೂ ಚಿತ್ರಮಂದರಿಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿಲ್ಲ. ಅಂದಹಾಗೆ ಫೆಬ್ರವರಿ ಮಾಹೆಯಲ್ಲಿ ಸ್ಯಾಂಡಲ್‌ವುಡ್‌ನ ಬಿಗ್ ಬಜೆಟ್, ದೊಡ್ಡ ಸ್ಟಾರ್‌ಗಳ ಸಿನೆಮಾಗಳು ಬಿಡುಗಡೆಯಾಗಲಿದ್ದು, ರಾಜ್ಯ ಸರ್ಕಾರದ ಈ ಆದೇಶದಿಂದ ದೇವ್ರು ವರ ಕೊಟ್ರು ಪೂಜಾರಿ ವರ ಕೊಡ್ಲಿಲ್ಲ ಎಂಬಂತೆ ನಿರ್ಮಾಪಕರ ಪಾಡಾಗಿದೆ.

ಇನ್ನೂ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಸಭೆ ನಡೆಸಿದ್ದು, ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡದೇ ಇದ್ದಲ್ಲಿ ರಾಜ್ಯದಲ್ಲಿ ಯಾವುದೇ ಸಿನೆಮಾಗಳನ್ನು ಪ್ರದರ್ಶನ ಮಾಡುವುದಿಲ್ಲ ಎಂಬ ಬೇಡಿಕೆಯನ್ನು ಸಹ ಇಟ್ಟಿದ್ದಾರೆ ಎನ್ನಲಾಗಿದೆ.

Trending

To Top