Current Issues

ಶಕಿ0ಗ್ -ನಮ್ಮ ಯೆಡಿಯೂರಪ್ಪ ಅವರಿಗೆ ಕರೋನ ದೃಢಪಟ್ಟಿದೆ! ಆದಷ್ಟು ಬೇಗ ಗುಣಮುಖರಾಗಲಿ ಎಂದು ಆಶಿಸೋಣ!

ಚೀನಾ ದೇಶದಲ್ಲಿ ಶುರುವಾದ ಕರೊನಾ ವೈರಸ್ ಪ್ರಪಂಚಾದ್ಯಂತ ಹಲವಾರು ದೇಶಗಳಿಗೆ ಹರಡಿದೆ. ಇಡೀ ಪ್ರಪಂಚದಲ್ಲಿ ಕೋಟ್ಯಂತರ ಮಂದಿಗೆ ಈ ಸೋಂಕು ಹರಡಿದೆ. ಹಾಗೂ ಅನೇಕ ಜನರು ಈ ಸೊಂಕಿನಿಂದ ಮೃತರಾಗಿದ್ದಾರೆ. ಜೊತೆಗೆ ಅನೇಕ ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕರೊನಾ ವೈರಸ್ ಸೋಂಕು ಕಿರಿಯರಿಂದ ಹಿಡಿದು ಹಿರಿಜೀವಗಳ ವರೆಗೂ. ಸಾಮಾನ್ಯ ಮನುಷ್ಯರಿಂದ ಹಿಡಿದು ಸೆಲೆಬ್ರಿಟಿಗಳು ಸ್ವಾಮೀಜಿಗಳು ಎಲ್ಲರಲ್ಲೂ ಕರೊನಾ ವೈರಸ್ ಸೋಂಕು ಕಂಡುಬಂದಿದೆ. ಇದೀಗ ನಮ್ಮ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.
ಈ ಕುರಿತು ಸ್ವತಃ ಯಡಿಯೂರಪ್ಪ ನವರು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ..”ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ರೋ#ಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ, ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ..” ಎಂದು ಟ್ವೀಟ್ ಮಾಡಿದ್ದಾರೆ. ಸಧ್ಯಕ್ಕೆ, ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಇರುವ ಮಣಿಪಾಲ್ ಆಸ್ಪತೆಗೆ ದಾಖಲಾಗಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿರುವ ಸಿಎಂ, ತಮ್ಮೊಡನೆ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಕ್ವಾರಂಟೈನ್ ನಲ್ಲಿ ಇರಿ ಎಂದಿದ್ದಾರೆ.
ಸೆಲೆಬ್ರಿಟಿಗಳು ಗಣ್ಯರು ಸೇರಿದಂತೆ ಹಲವಾರು ಜನಪ್ರತಿನಿಧಿಗಳಿಗೆ ಕೊರೊನಾ ಸೋಂಕು ಪಾಸಿಟಿವ್ ಆಗುತ್ತಿರುವುದು ಹೆಚ್ಚಾಗಿದೆ. ನಿನ್ನೆ ಮಧ್ಯಾಹ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೂಡ ಕೊರೊನಾ ಸೋಂಕು ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಅವರು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉತ್ತರ ಪ್ರದೇಶದ ಸಚಿವೆ ಕಮಲ್‌ ರಾಣಿ ಕೊರೊನಾ ಸೋಂಕಿನ ಕಾರಣದಿಂದ ಬೆಳಗ್ಗೆ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಕೂಡ ಸೋಂಕಿಗೆ ತುತ್ತಾಗಿದ್ದರು.
ಭಾನುವಾರದ ವರದಿಯ ಪ್ರಕಾರ ಒಟ್ಟು 5532 ಪಾಸಿಟಿವ್‌ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿದೆ. ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತಲೇ ಇದೆ, ಕೆಲವೊಂದು ಜಿಲ್ಲೆಗಳಲ್ಲಿ ದೈನಂದಿನ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಒಂದೇ ದಿನ 84 ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ 2496ಕ್ಕೆ ಏರಿದೆ.ಚೀನಾ ದೇಶದಲ್ಲಿ ಶುರುವಾದ ಕರೊನಾ ವೈರಸ್ ಪ್ರಪಂಚಾದ್ಯಂತ ಹಲವಾರು ದೇಶಗಳಿಗೆ ಹರಡಿದೆ. ಇಡೀ ಪ್ರಪಂಚದಲ್ಲಿ ಕೋಟ್ಯಂತರ ಮಂದಿಗೆ ಈ ಸೋಂಕು ಹರಡಿದೆ. ಹಾಗೂ ಅನೇಕ ಜನರು ಈ ಸೊಂಕಿನಿಂದ ಮೃತರಾಗಿದ್ದಾರೆ. ಜೊತೆಗೆ ಅನೇಕ ಮಂದಿ ಈ ಸೋಂಕಿನಿಂದ ಗುಣಮುಖರಾಗಿದ್ದಾರೆ. ಕರೊನಾ ವೈರಸ್ ಸೋಂಕು ಕಿರಿಯರಿಂದ ಹಿಡಿದು ಹಿರಿಜೀವಗಳ ವರೆಗೂ. ಸಾಮಾನ್ಯ ಮನುಷ್ಯರಿಂದ ಹಿಡಿದು ಸೆಲೆಬ್ರಿಟಿಗಳು ಸ್ವಾಮೀಜಿಗಳು ಎಲ್ಲರಲ್ಲೂ ಕರೊನಾ ವೈರಸ್ ಸೋಂಕು ಕಂಡುಬಂದಿದೆ. ಇದೀಗ ನಮ್ಮ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.

Trending

To Top