Film News

ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಬ್ಯೂಟಿ ಕರೀನಾ

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ನಟ ಸೈಫ್ ಅಲಿ ಖಾನ್ ದಂಪತಿಗೆ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಸೆಲೆಬ್ರೆಟಿಗಳಿಂದ ಹಾಗೂ ಅಭಿಮಾನಿಗಳಿಂದ ಶುಭಾಷಯಗಳು ಹರಿದು ಬರುತ್ತಿದೆ.

ಕಳೆದ 2016 ರಲ್ಲಿ ನಟಿ ಕರೀನಾ-ಸೈಫ್ ದಂಪತಿಗೆ ಗಂಡು ಮಗು ಜನನವಾಗಿತ್ತು, ೫ ವರ್ಷಗಳ ಬಳಿಕ ಮತ್ತೆ ಗಂಡು ಮಗುವಿನೆ ಜನ್ಮ ನೀಡಿದ್ದಾರೆ. ಮುಂಬೈನ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯಕರವಾಗಿದ್ದಾರೆ ಎನ್ನಲಾಗಿದೆ. ಎರಡನೇ ಮಗು ಜನ್ಮಕ್ಕೂ ಮುನ್ನವೇ ಜೋಡಿ ದೊಡ್ಡ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮಗುವಿನ ಆರೈಕೆಗೆ ಸೂಕ್ತವಾದ ವ್ಯವಸ್ಥೆ ಮಾಡಿಕೊಂಡು ಹೊಸ ಮನೆಗೆ ಶಿಫ್ಟ್ ಆಗಿತ್ತು ಜೋಡಿ.

ಇನ್ನೂ ಕರಿನಾ ಕಪೂರ್ ರವರಿಗೆ ಎರಡನೇ ಮಗುವಾದರೂ ಸಹ ಪತಿ ಸೈಫ್ ಅಲಿ ಖಾನ್ ರವರಿಗೆ ನಾಲ್ಕನೇ ಮಗು. ಏಕೆಂದರೇ, ನಟ ಸೈಫ್ ರವರ ಮೊದಲ ಪತ್ನಿ ಅಮೃತಾ ಸಿಂಗ್ ದಂಪತಿಗೆ ಎರಡು ಮಕ್ಕಳಿರುವ ಕಾರಣ ಇದು ಸೈಫ್ ಅಲಿ ಖಾನ್ ಗೆ ನಾಲ್ಕನೇ ಮಗುವಾಗಿದೆ. ಈ ಪೈಕಿ ಬಾಲಿವುಡ್‌ನ ಖ್ಯಾತ ನಟ ಸಾರಾ ಅಲಿ ಖಾನ್ ಸಹ ಒಬ್ಬರಾಗಿದ್ದಾರೆ.

ಇನ್ನೂ ಸದ್ಯ ಕರೀನಾ-ಸೈಫ್ ದಂಪತಿಯ ಎರಡನೇ ಮಗುವಿಗೆ ಏನೆಂದು ಹೆಸರಿಡುತ್ತಾರೆಂಬ ಚರ್ಚೆ ಶುರುವಾಗಿದೆ. ಈ ದಂಪತಿಯ ಮೊದಲನೆ ಮಗುವಿಗೆ ತೈಮೂರ್ ಎಂದು ಹೆಸರಿಟ್ಟಿದ್ದರು. ತೈಮೂರ್ ಎಂಬ ಹೆಸರು ದುಷ್ಟನಾದ ರಾಜನ ಹೆಸರಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆ ಕಾರಣ ಎರಡನೇ ಮಗುವಿನ ಹೆಸರು ಏನಿಡುತ್ತಾರೆ ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Trending

To Top