Film News

ಕನ್ನಡ ಕಲಾವಿದನ ಕೈ ಚಳಕದಲ್ಲಿ ಶಿವನಾದ ನಟ ಕಾರ್ತಿ

ಚೆನೈ: ಕನ್ನಡದ ಕಲಾವಿದನೊಬ್ಬ ಕಾಲಿವುಡ್ ಸ್ಟಾರ್ ನಟ ಕಾರ್ತಿ ರವರನ್ನು ಶಿವನ ರೂಪದಲ್ಲಿ ಚಿತ್ರೀಕರಿಸಿದ್ದು, ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.

ತಮ್ಮ ವಿಭಿನ್ನ ರೀತಿಯ ಐಡಿಯಾಗಳ ಮೂಲಕ ಪೊಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅವರೇ ಕರಣ್ ಆಚಾರ್ಯ. ಈ ಹಿಂದೆ ಅನೇಕ ಸ್ಟಾರ್ ನಟರ ಪೋಟೊಗಳನ್ನು ಎಡಿಟ್ ಮಾಡುತ್ತಿರುತ್ತಾರೆ. ಅಂದಹಾಗೆ ಕಾರ್ತಿ ಅಭಿಮಾನಿಯೊಬ್ಬರು ಕರಣ್ ರವರ ಬಳಿ ಕಾರ್ತಿ ಅವರ ಪೋಟೊವನ್ನು ಶಿವ ಅಥವಾ ರಾಮ ಇವರಿಬ್ಬರಂತೆ ಎಡಿಟ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಸ್ಪಂಧಿಸಿದ ಕರಣ್ ಕಾರ್ತಿ ರವರನ್ನು ಶಿವನ ಅವತಾರದಲ್ಲಿ ಎಡಿಟ್ ಮಾಡಿ ತಮಿಳು ಅಭಿಮಾನಿಗಳ ಹೃದಯ ಗೆದಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ನಟಿ ಮೇಘನಾ ರಾಜ್ ರವರ ಪೊಟೋವನ್ನು ಸಹ ಎಡಿಟ್ ಮಾಡಿದ್ದರು, ಮೇಘನಾ ರಾಜ್ ಹಾಗೂ ಪತಿ ಚಿರಂಜೀವಿ ಕೈ ಹಿಡಿದು ಕರೆದುಕೊಂಡು ಹೋಗುವಂತೆ ಚಿತ್ರ ಎಡಿಟ್ ಮಾಡಿ ಭಾರಿ ಹೆಸರು ಗಳಿಸಿದ್ದರು. ಅಷ್ಟೇ ಅಲ್ಲದೇ ಸ್ಯಾಂಡಲ್ ವುಡ್ ನ ದರ್ಶನ್ ಹಾಗೂ ಸುದೀಪ್ ರಾಮ-ಆಂಜನೇಯ ಅವತಾರದಲ್ಲಿ ಪೊಟೋ ಕ್ರಿಯೇಟ್ ಮಾಡಿದ್ದರು. ಇದೀಗ ಕಾರ್ತಿ ಪೊಟೋ ಶಿವನ ಅವತಾರದಲ್ಲಿ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ಕರಣ್ ಮತ್ತಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ಅನೇಕ ಅಭಿಮಾನಿಗಳು ಪೊಟೋಗಳನ್ನು ಕಳುಹಿಸಿ ಎಡಿಟ್ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

 

Trending

To Top