News

(video)ನೀವು ಕನ್ನಡಿಗರಾಗಿದ್ದರೆ ನಿಮಗಿದು ಗೊತ್ತಿರಲೇಬೇಕು! ನಿಜವಾದ ಕನ್ನಡಿಗರು ಇದನ್ನು ಶೇರ್ ಮಾಡಿ

kannadiga

ಇಂದು ಕನ್ನಡ ರಾಜ್ಯೋತ್ಸವ. ಮೊದಲಿಗೆ ಎಲ್ಲರಿಗು ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ನಮ್ಮ ಕರ್ನಾಟಕದ ವಿಶೇಷಗಳು, ಕನ್ನಡ ಭಾಷೆಯ ಬಗ್ಗೆ ಅದ್ಭುತ ವಿಷಯಗಳು ಪ್ರತಿಯೊಬ್ಬ ಕನ್ನಡಿಗರಿಗೆ ಇದು ಗೊತ್ತಿರಬೇಕು! ಈ ವಿಡಿಯೋ ಒಮ್ಮೆ ನೋಡಿ! ಹಾಗು ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ. (video)ನೀವು ಕನ್ನಡಿಗರಾಗಿದ್ದರೆ ನಿಮಗಿದು ಗೊತ್ತಿರಲೇಬೇಕು! ನಿಜವಾದ ಕನ್ನಡಿಗರು ಇದನ್ನು ಶೇರ್ ಮಾಡಿ
ಈ ಕೆಳಗಿನ ವಿಡಿಯೋ ನೋಡಿರಿ

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು! ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು. ಕನ್ನಡಾ! ಕನ್ನಡ, ಹಾ, ಸವಿಗನ್ನಡ! ಕನ್ನಡದಲಿ ಹರಿ ಬರೆಯುವವನು; ಕನ್ನಡದಲಿ ಹರ ತಿರಿಯುವನು! ಕನ್ನಡದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು! ಹರ ಮುರಿಯದೆ ತಾ ಪೊರೆಯುವನು!

ರಾಷ್ಟ್ರ ಕವಿ ಕುವೆಂಪು ಅವರ ಈ ಸಾಲುಗಳು ಎಷ್ಟು ಅಭೂತವಾಗಿದೆ ನೋಡಿ! ಕನ್ನಡ ಭಾಷೆ ಬಗ್ಗೆ ನೆಲದ ಬಗ್ಗೆ ಇದಕ್ಕಿಂತ ಇನ್ನೇನು ಹೇಳುವದಿಕ್ಕೆ ಸಾಧ್ಯ ನೀವೇ ಹೇಳಿ! ಜಗತ್ತಿನ ಅತ್ಯಂತ ಪುರಾತನ ಹಾಗು ಶ್ರೀಮಂತ ಭಾಷೆ ಗಳಲ್ಲಿ ಒಂದು ನಮ್ಮ ಕನ್ನಡ ಭಾಷೆ. ನಮ್ಮ ಭಾಷೆಯ ಬಗ್ಗೆ ಹಾಗು ನಮ್ಮ ಅದ್ಭುತ ರಾಜ್ಯದ ಬಗ್ಗೆ ಅದೆಷ್ಟೋ ಅದ್ಭುತಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿರಿ.

ಸ್ನೇಹಿತರೆ, ನೀವು ವಿಕಿಪೀಡಿಯ ಲೋಗೋ ನೋಡಿದ್ದೀರಾ! ಅದರಲ್ಲಿ ಇರುವ ಕೆಲವೇ ಕೆಲವು ಭಾರತೀಯ ಭಾಷೆ ಗಳಲ್ಲಿ ನಮ್ಮ ಕನ್ನಡ ಭಾಷೆ ಕೂಡ ಇದೆ. ವಿಕಿಪೀಡಿಯ ಲೋಗೋ ದಲ್ಲಿ ನೀವು ಕನ್ನಡದ “ವಿ ” ಅಕ್ಷರವನ್ನು ಕಾಣಬಹುದು.

ಅತೀ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಬಂದಿರುವ ಭಾರತೀಯ ಏಕೈಕ ಭಾಷೆ ಎಂದರೆ ನಮ್ಮ ಕನ್ನಡ ಭಾಷೆ. ಇದು ಹೆಮ್ಮೆ ಪಡುವ ವಿಷ್ಯ ಅಲ್ವಾ! ನಮ್ಮ ಕನ್ನಡ ಭಾಷೆಯ ಸಾಹಿತ್ಯಕ್ಕೆ ಒಟ್ಟು ಎಂಟು ಜ್ಞಾನ ಪೀಠ ಪ್ರಶಸ್ತಿ ಬಂದಿವೆ.

ಚಲನ ಚಿತ್ರ ನಾಯಕನ ಹಿನ್ನಲೆ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಕೊಟ್ಟಿರುವುದು ಕನ್ನಡ ನಟನಿಗೆ ಮಾತ್ರ! ಅವರು ಕನ್ನಡದ ಲೆಜೆಂಡ್ ನಮ್ಮ ಅಣ್ನವರು. ಹೌದು, ಡಾ ರಾಜಕುಮಾರ್ ಅವರ ಗಾಯನಕ್ಕೆ ಭಾರತೀಯ ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ. ಅಣ್ಣಾವ್ರ ನಾದಮಯ ಎಂಬ ಹಾದಿಗ ಅತ್ಯುತ್ತಮ ಹಿನ್ನಲೆ ಗಾಯಕ ಎಂಬ ಪ್ರಶಸ್ತಿ ಬಂದಿತ್ತು.

ನಮ್ಮ ಭಾರತದ ರಾಷ್ಟ್ರ ಧ್ವಜ ವಿನ್ಯಾಸ ಮಾಡಿರುವವರು Pingali ವೆಂಕಯ್ಯ ಅವರು. ಇವರು ಮೂಲತಃ ಅಂದ್ರ ಪ್ರದೇಶ ನವರು. ಆದರೆ ಈಗ ನಮ್ಮ ಭಾರತದ ರಾಷ್ಟ್ರ ಧ್ವಜವನ್ನು ತಯಾರು ಮಾಡುವುದು ನಮ್ಮ ಕರ್ನಾಟಕದ ಹುಬ್ಬಳ್ಳಿಯ ಖಾಧಿ ಗ್ರಾಮೋದ್ಯೋಗ ಕೇಂದ್ರ ದಲ್ಲಿ ಮಾತ್ರ!

ನಿಮಗೆ ತಾಜ್ ಮಹಲ್ ಬಗ್ಗೆ ಗೊತ್ತೇ ಇದೆ! ನಮ್ಮ ಭಾರತದಲ್ಲಿ ತಾಜ್ ಮಹಲ್ ಬಿಟ್ಟರೆ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಏಕೈಕ ಸ್ಥಳ ನಮ್ಮ ಮೈಸೂರು ಪ್ಯಾಲೇಸ್! ಇದು ನಿಜಕ್ಕೂ ಹೆಮ್ಮೆ ಪಡುವ ವಿಷ್ಯ! ಇದನ್ನು ಹೆಮ್ಮೆಯಿಂದ ಶೇರ್ ಮಾಡಿರಿ.

ಭಾರತೀಯ ಚಿತ್ರ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ under water ಚಿತ್ರೀಕರಣ ಮಾಡಿರುವ ಏಕೈಕ ಚಿತ್ರ ಅದು ನಮ್ಮ ಲೆಜೆಂಡ್ ಶಂಕ್ರಣ್ಣ ನಿರ್ದೇಶನದ ಅಣ್ಣಾವ್ರು ಅಭಿನಯದ ಮುತ್ತಿನ ಕಥೆ ಚಿತ್ರ! ಇಂತಹ ಚಿತ್ರವನ್ನು ಮಾಡಿದ್ದು ಕನ್ನಡದಲ್ಲೇ ಮೊದಲು ಎಂದು ಹೇಳಲು ಬಹಳ ಖುಷಿ ಆಗುತ್ತೆ ಕಣ್ರೀ.

ಇಡೀ ಭಾರತ ದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿ ಬೆಳೆ ಬೆಳೆದದ್ದು ನಮ್ಮ ಕರ್ನಾಟಕ ದಲ್ಲಿ. ಅದು ಎಲ್ಲಿ ಎಂದು ನಿಮಗೆ ಹೇಳುವುದೇ ಬೇಡ! ಅದುವೇ ನಮ್ಮ ಹೆಮ್ಮೆಯ ಚಿಕ್ಕಮಗಳೂರು ಜಿಲ್ಲೆ. ಇಡೀ ಭಾರತಕ್ಕೆ ಮೊದಲು ಕಾಫೀ ಬೆಳೆದೆದ್ದು ಇದೆ ಜಗದಲ್ಲಿ.

ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ಇನ್ನಷ್ಟು ಅದ್ಭುತ ವಿಷಯಗಳಿಗೆ ಈ ಮೇಲಿನ ವಿಡಿಯೋ ನೋಡಿರಿ! ನಮ್ಮ ಕನ್ನಡ , ನಮ್ಮ ಕರ್ನಾಟಕ ನಮ್ಮ ಹೆಮ್ಮೆ! ಗಾಂಚಲಿ ಬಿಡಿ ಕನ್ನಡ ಮಾತಾಡಿ! ನಮ್ಮ ಕನ್ನಡ ಭಾಷೆ ಹಾಗು ನಮ್ಮ ರಾಜ್ಯವನ್ನು ಗೌರವಿಸೋಣ! ಇದನ್ನು ಹೆಮ್ಮೆಯಿಂದ ಆದಷ್ಟು ಶೇರ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top