ಅಮ್ಮಮ್ಮ ಹಂಚಿಕೊಂಡ ಸ್ಪೆಷಲ್ ನ್ಯೂಸ್ ಏನು ಗೊತ್ತಾ ?

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ “ಕನ್ನಡತಿ”
ಈ ಧಾರಾವಾಹಿಯಲ್ಲಿ “ಅಮ್ಮಮ್ಮ” “ರತ್ನಮಾಲಾ” ಪಾತ್ರ ನಿರ್ವಹಿಸುತ್ತಿರುವ ನಟಿ “ಚಿತ್ಕಲಾ ಬಿರಾದಾರ್”.
ಅಗ್ನಿಸಾಕ್ಷಿಯಲ್ಲಿ ನಾಯಕಿಯ ಅಮ್ಮನಾಗಿ ವೀಕ್ಷಕರ ಮನ ಸೆಳೆದ ಚಿತ್ಕಲಾ ಅವರು ಅವನು ಮತ್ತು ಶ್ರಾವಣಿ ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಅಯ್ಯಂಗಾರ್ ಪುಷ್ಪವಲ್ಲಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡರು.ಇದೀಗ ಇವರು ಕಿರುತೆರೆಯಲ್ಲಿ ಮಾತ್ರವಲ್ಲದೆ ಹಿರಿತೆರೆಯಲ್ಲಿಯೂ ಸಹ ನಟಿಸಿದ್ದಾರೆ.

ಬಂದೇ ಬರುತಾವ ಕಾಲ ಧಾರಾವಾಹಿಯ ಮೂಲಕ ನಟನೆಯನ್ನು ಶುರು ಮಾಡಿದ ಚಿತ್ಕಲಾ ಬಿರಾದಾರ್, ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಕೂಡಾ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಪಡೆದ ಬಳಿಕ ಒಂದಷ್ಟು ಸಮಯಗಳ ಕಾಲ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಮುಂದೆ ಉಪನ್ಯಾಸಕಿ ವೃತ್ತಿಗೆ ಬಾಯ್ ಹೇಳಿದ ಚಿತ್ಕಲಾ ಪೂರ್ಣ ಪ್ರಮಾಣದ ನಟಿಯಾಗಿ ಕಮಾಲ್ ಮಾಡುತ್ತಿದ್ದಾರೆ.

ಏಪ್ರಿಲ್ 1 ಕ್ಕೆ ಬಿಡುಗಡೆಯಾಗಲಿರುವ “ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್” ಅವರ “ಯುವರತ್ನ” ಚಿತ್ರದಲ್ಲಿ ನಟಿಸಿದ್ದಾರೆ.ಈ ಸಂತೋಷದ ವಿಷಯವನ್ನು ಸ್ವತಃ “ಚಿತ್ಕಲಾ ಬಿರಾದಾರ್” ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯುವರತ್ನ ತಂಡದ ಜೊತೆಗಿನ ಫೋಟೋವನ್ನು ಶೇರ್ ಮಾಡಿ ಏಪ್ರಿಲ್ 1 ಕ್ಕೆ ಬಿಡುಗಡೆಯಾಗಲಿರುವ ಯುವರತ್ನ ಚಿತ್ರ ಚಿತ್ರಿಕರಣದ ಸಮಯದಲ್ಲಿ ತೆಗೆದ ಕೆಲವು ನೆನಪುಗಳು.ನನ್ನದು ಒಂದು ಚಿಕ್ಕ ಮಜವಾದ ಪಾತ್ರ ನೋಡಿ ಆನಂದಿಸಿ..” ಎಂದು ತಮ್ಮ ಸೋಷಿಯಲ್ ಮೆಡಿಯಾದಲ್ಲಿ ಬರೆದುಕೊಂಡಿದ್ದಾರೆ.

https://m.facebook.com/story.php?story_fbid=4853271221356310&id=100000204396151


Previous articleಚಂದನ್ ಕವಿತಾ ಎಂಗೇಜ್ಮೆಂಟ್ ಹೇಗಿತ್ತು ನೋಡಿ !
Next articleಯುವರತ್ನ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ ?