Cinema

ಶೂಟಿಂಗ್ ಬೇಡವೆ ಬೇಡ, ಸ್ವಲ್ಪ ದಿನ ಏನು ಬೇಡ ಎಂದು ಹೇಳಿದ ಸಿನಿಮಾ ನಟರು ಹಾಗು ತಂಡಗಳು!

ಕಳೆದ ನಾಲ್ಕು ತಿಂಗಳಿನಿಂದ ಪ್ರಪಂಚದ ಸ್ಥಿತಿಗತಿಗಳೇ ಬದಲಾಗಿಹೋಗಿದೆ. ಎಲ್ಲಾ ವರ್ಗದ ಕೆಲಸಗಾರರು ಸಹ ಸರಿಯಾದ ಕೆಲಸವಿಲ್ಲದೆ, ಸಂಪಾದನೆ ಇಲ್ಲದೆ ಕಷ್ಟದಲ್ಲಿದ್ದಾರೆ. ಈ ಸಮಸ್ಯೆಗೆ ಚಿತ್ರರಂಗ ಹೊರತಾಗಿಲ್ಲ. ನಾಲ್ಕು ತಿಂಗಳಿನಿಂದ ಶೂಟಿಂಗ್ ನಡೆಯದೆ ಸಿನಿಮಾ ತಂತ್ರಜ್ಞರು ತೆರೆಹಿಂದಿನ ಕೆಲಸಗಾರರು ಸಂಕಷ್ಟದಲ್ಲಿದ್ದಾರೆ.ಚಿತ್ರೀಕರಣ ಶುರುಮಾಡಲು ಸರ್ಕಾರ ಅನುಮತಿ ನೀಡಿದ್ದರೂ, ಒಂದಷ್ಟು ಮಾರ್ಗಸೂಚಿಗಳನ್ನು ನೀಡಲಾಗಿದೆ. ಅವುಗಳನ್ನು ಪಾಲಿಸಿಯೇ ಶೂಟಿಂಗ್ ನಡೆಸಬೇಕು. ಸಧ್ಯದ ಪರಿಸ್ಥಿತಿಯಲ್ಲಿ ಪ್ರತಿದಿನವೂ 2000 ದಷ್ಟು ಹತ್ತಿರಕ್ಕೆ ಕರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಅನುಮತಿ ಕೊಟ್ಟಿದ್ದರೂ ಚಿತ್ರೀಕರಣ ನಡೆಸಲು ಚಿತ್ರತಂಡಗಳು ಸಿದ್ಧವಿಲ್ಲ.
ಮಾರ್ಗಸೂಚಿಗಳ ಪ್ರಕಾರ, ಸಿನಿಮಾ ಸೆಟ್ ನಲ್ಲಿ 50 ಜನರಿಗಿಂತ ಹೆಚ್ಚು ಜನ ಇರುವ ಹಾಗಿಲ್ಲ, ಜೊತೆಗೆ 60ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಪುಟ್ಟ ಮಕ್ಕಳು ಶೂಟಿಂಗ್ ನಲ್ಲಿ ಪಾಲ್ಗೊಳ್ಳುವ ಹಾಗಿಲ್ಲ. ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಈ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟವಿದೆ. 50 ಜನರಿಗಿಂತ ಹೆಚ್ಚಿನ ಜನರ ಅಗತ್ಯವಿರಲಿದೆ. ಜೊತೆಗೆ ಹಿರಿಯ ಕಲಾವಿದರನ್ನು ಕರೆಸುವುದು ಕಷ್ಟವಾಗಿದೆ. ಜೊತೆಗೆ, ಹಿರಿಯ ಕಲಾವಿದರಾಗಲಿ, ಅಥವಾ ಇನ್ಯಾರಿಗೇ ಆದರೂ ಏನಾದರೂ ತೊಂದರೆಯಾದರೆ ಏನು ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ.
ಜೊತೆಗೆ, ದಿನೇ ದಿನೇ ಹೆಚ್ಚುತ್ತಿರುವ ಕರೊನಾ ಪ್ರಕರಣಗಳು. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಗಳು ಸಹ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತಯಾರಿಲ್ಲ. ಕರೊನಾ ಪ್ರಕರಣಗಳು ಕಡಿಮೆಯಾಗಿ, ಎಲ್ಲವೂ ಒಂದು ಹಂತಕ್ಕೆ ಬಂದು, ಚಿತ್ರರಂಗ ಹಿಂದಿನಂತೆ ಅಗಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಚಿತ್ರರಂಗಕ್ಕೆ ಹಿಂದೆಂದೂ ಇಂತಹ ಪೆಟ್ಟು ಬಿದ್ದಿರಲಿಲ್ಲ. ಈ ತೊಂದರೆಯಿಂದ ಚಿತ್ರರಂಗ ಚೇತರಿಸಿಕೊಳ್ಳುವುದಕ್ಕೆ ಬಹಳ ಸಮಯ ತೆಗೆದುಕೊಳ್ಳಲಿದೆ.

Trending

To Top