Film News

ಮಾಸ್ ಮಹಾರಾಜ ರವಿತೇಜ ಚಿತ್ರದಲ್ಲಿ ಕನ್ನಡದ ನಟಿ?

ಬೆಂಗಳೂರು: ಚಂದನವನದ ಕ್ಯೂಟ್ ನಟಿ ಶ್ರೀಲೀಲಾ ಇತ್ತೀಚಿಗೆ ಟಾಲಿವುಡ್‌ನಲ್ಲೂ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಪೆಳ್ಳಿಸಂದಂಡಿ-೨ ಚಿತ್ರದಲ್ಲಿ ಶ್ರೀಲಿಲಾ ನಟಿಸುತ್ತಿದ್ದು, ಮತ್ತೊಂದು ಸಿನೆಮಾದಲ್ಲೂ ಅವಕಾಶ ಪಡೆದುಕೊಂಡಿದ್ದಾರಂತೆ.

ಭರಾಟೆ, ಕಿಸ್ ಚಿತ್ರಗಳ ಮೂಲಕ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ನಟಿ ಶ್ರೀಲೀಲಾ, ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಅಭಿನಯಿಸುವ ಚಿತ್ರವೊಂದರಲ್ಲಿ ನಾಯಕಿಯಾಗುವ ಚಾನ್ಸ್ ಪಡೆದುಕೊಂಡಿದ್ದಾರಂತೆ. ಇನ್ನೂ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಈ ಪೈಕಿ ಶ್ರೀಲಿಲಾ ರವರು ಸಹ ಒಬ್ಬರಂತೆ.

ತ್ರಿನಾಥ್ ರಾವ್ ನಕ್ಕಿನಾ ನಿರ್ದೇಶನದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ರವಿತೇಜ ನಾಯಕನಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರದಲ್ಲಿ ಇಬ್ಬರು ನಾಯಕಿರಿದ್ದಾರೆ. ಒಬ್ಬರು ಸ್ಯಾಂಡಲ್‌ವುಡ್ ನಟಿ ಶ್ರೀಲಿಲಾ, ಮತ್ತೊಬ್ಬರು ಐಶ್ವರ್ಯ ಮೆನನ್. ಇಬ್ಬರದ್ದೂ ಪ್ರಮುಖ ಪಾತ್ರಗಳಾಗಿದ್ದು, ಚಿತ್ರದಲ್ಲಿ ಸಖತ್ ಟ್ವಿಸ್ಟ್ ಹಾಗೂ ಕುತೂಹಲ ಹೆಚ್ಚಿಸುವ ಪಾತ್ರಗಳಾಗಿವೆ ಎನ್ನಲಾಗಿದೆ.

ಇನ್ನೂ ಈ ಚಿತ್ರದ ಶೂಟಿಂಗ್ ಏಪ್ರಿಲ್‌ನಲ್ಲಿ ಪ್ರಾರಂಭವಾಗಲಿದ್ದು, ರವಿತೇಜ ಕ್ರ್ಯಾಕ್ ಸಿನೆಮಾದ ಬಳಿಕ ಕಿಲಾಡಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಈ ಸಿನೆಮಾ ಶೂಟಿಂಗ್ ಮುಕ್ತಾಯವಾಗುತ್ತಿದ್ದಂತೆ ಹೊಸ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನಲಾಗಿದೆ.

Trending

To Top