ಥೈಲ್ಯಾಂಡ್ ನಲ್ಲಿ ಹಾಟ್ ಆಗಿ ಪೋಸ್ ಕೊಟ್ಟ ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ, ಥೈಲ್ಯಾಂಡ್ ಸೌಂದರ್ಯವನ್ನು ಹೊಗಳಿದ ಬ್ಯೂಟಿ…!

ಕನ್ನಡ ಸಿನಿರಂಗದಲ್ಲಿ ಕಿರಿಕ್ ಹುಡುಗಿ ಎಂದೇ ಕರೆಯಲಾಗುವ ಸಂಯುಕ್ತಾ ಹೆಗಡೆ ಸೋಷಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಕಿರಿಕ್ ಪಾರ್ಟಿ ಎಂಬ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಈ ನಟಿ, ಬಳಿಕ ಸಿನೆಮಾಗಳಲ್ಲಿ ಅಷ್ಟು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಸದ್ಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನ ನಡೆಸುತ್ತಿದ್ದಾರೆ. ಸದ್ಯ ಸಂಯುಕ್ತಾ ಹೆಗ್ಡೆ ಥೈಲ್ಯಾಂಡ್ ಪ್ರವಾಸದಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ. ಜೊತೆಗೆ ಅಲ್ಲಿನ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ.

ನಟಿ ಸಂಯುಕ್ತಾ ಥೈಲ್ಯಾಂಡ್ ಪ್ರವಾಸಕ್ಕೆ ಹೊಗಿದ್ದು, ಅಲ್ಲಿನ ಸುಂದರ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳನ್ನು ಸೋಷಿಯಲ್ ಮಿಡಿಯಾ ವೇದಿಕೆಯಾಗಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಸಂಯುಕ್ತಾ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಭರ್ಜರಿ ಫೇಂ ಪಡೆದುಕೊಂಡಿದ್ದರು.  ಜೊತೆಗೆ ಬೇರೆ ಭಾಷೆಯ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಆದರೆ ಆಕೆಗೆ ಕಿರಿಕ್ ಪಾರ್ಟಿ ಸಿನೆಮಾ ನೀಡಿದಷ್ಟು ಫೇಂ ಯಾವುದೇ ಸಿನೆಮಾ ತಂದುಕೊಡಲಿಲ್ಲ ಎನ್ನಬಹುದಾಗಿದೆ. ನಟಿ ಸಂಯುಕ್ತಾ ಎಲ್ಲರಂತೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾಗಳ ಬಗ್ಗೆ ಸೇರಿದಂತೆ ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಥೈಲ್ಯಾಂಡ್  ಪ್ರವಾಸದ ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಸಂಯುಕ್ತಾ ಥೈಲ್ಯಾಂಡ್  ಪ್ರವಾಸದಲ್ಲಿದ್ದಾರೆ. ಅಲ್ಲಿನ ಸುಂದರ ತಾಣಗಳಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಥೈಲ್ಯಾಂಡ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಸಂಯುಕ್ತಾ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪೊಟೋಗಳನ್ನು ಶೇರ್‍ ಮಾಡಿ ಅಲ್ಲಿನ ಸೌಂದರ್ಯವನ್ನು ಕಾಮೆಂಟ್ ಮೂಲಕ ಬಣ್ಣಿಸಿದ್ದಾರೆ. ಥೈಲ್ಯಾಂಡ್ ನಲ್ಲಿ ಸಮುದ್ರದ ನೂರು ಅಡಿ ಕೆಳಗೆ ಹೋಗುವುದು ತುಂಬಾ ಅದ್ಬುತವಾಗಿತ್ತು. ನನಗೆ ನೀರು ಎಂದರೇ ತುಂಬಾ ಇಷ್ಟ. ನಾನು 2017ರಲ್ಲಿ ನೀರಿನಲ್ಲಿ ಮೊದಲ ಬಾರಿಗೆ ಧುಮಿಕಿದ ಬಳಿಕ ನನ್ನ ಜೀವನ ಬದಲಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.  ನಾನು ಒಂಟಿಯಾಗಿ ಪ್ರವಾಸಕ್ಕೆ ಹೋಗಿದ್ದೀನಿ, ನನಗೆ ತುಂಬಾ ಖುಷಿಯಾಗಿದೆ. ನನಗೆ ವಯಸ್ಸಾದ ಬಳಿಕ ಈ ಎಲ್ಲಾ ಸುಂದರ ವಿಚಾರಗಳನ್ನು ಹೇಳಲು ಉತ್ತಮ ಕಥೆಗಳನ್ನು ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಸಂಯುಕ್ತಾ ಹೆಗ್ಡೆ ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಬಳಿಕ ತಮಿಳು ಸಿನೆಮಾಗಳಲ್ಲೂ ಸಹ ಬ್ಯುಸಿಯಾಗಿದ್ದರು. ಇನ್ನೂ ಕಿರಿಕ್ ಪಾರ್ಟಿ ಸಿನೆಮಾದ ಸಕ್ಸಸ್ ಕಂಡ ಬಳಿಕ ಅನೇಕ ವಿವಾದಗಳನ್ನೂ ಸಹ ಸಂಯುಕ್ತಾ ಮೈಮೇಲೆ ಎಳೆದುಕೊಂಡಿದ್ದರು. ವಿವಾದಗಳಿಂದ ಆಕೆ ಕನ್ನಡ ಸಿನೆಮಾಗಳಿಂದ ದೂರವೇ ಉಳಿದಿದ್ದು, ಇದೀಗ ಪುನಃ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ್ದಾರೆ. ಆಕೆ ಇತ್ತೀಚಿಗಷ್ಟೆ ತೆರೆಕೆಂಡ ತುರ್ತು ನಿರ್ಗಮನ ಸಿನೆಮಾದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.

Previous articleಶೂಟಿಂಗ್ ಸೆಟ್ ನಲ್ಲೇ ನೇಣಿಗೆ ಶರಣಾದ ಬಾಲಿವುಡ್ ಯಂಗ್ ನಟಿ ತುನಿಷಾ ಶರ್ಮಾ….!
Next articleಸಿನಿರಂಗದಲ್ಲಿ ನನ್ನ ಕೆರಿಯರ್ ಆಗ ಮುಗಿತೂ ಎಂದುಕೊಂಡಿದ್ದೆ ಎಂದ ಮಿಲ್ಕಿ ಬ್ಯೂಟಿ ತಮನ್ನಾ….!