Cinema

ದರ್ಶನ್, ಅಪ್ಪು, ಯಶ್, ಮಾಲಾಶ್ರೀ ರಾಕೀ ಹಬ್ಬ ಹೇಗಿತ್ತು ನೋಡಿ! ಅಣ್ಣ ತಂಗಿ ಸುಂದರ ವಿಡಿಯೋ ನೋಡಿ

ನಿನ್ನೆ ರಕ್ಷಾಬಂಧನ.. ಸೋದರರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ದಿನ. ರಕ್ಷಾಬಂಧನ ದಿನದಂದು ಕಟ್ಟುವ ರಾಖಿಗೆ ಬಹಳ ಮಹತ್ವವಿದೆ. ಎಲ್ಲಾ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅವರಿಂದ ಗಿಫ್ಟ್ ಪಡೆದು ಸಂಭ್ರಮಿಸುತ್ತಾರೆ. ರಾಖಿ ಹಬ್ಬ ಎಲ್ಲಾ ತಂಗಿಯರಿಗೂ ಬಹಳ ಸ್ಪೆಷಲ್. ನಮ್ಮ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ರಕ್ಷಾಬಂಧನ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸ್ಯಾಂಡಲ್ ವುಡ್ ಸುಲ್ತಾನ್ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ರಕ್ಷಾಬಂಧನ ಹಬ್ಬ ತುಂಬಾ ಸ್ಪೆಷಲ್, ರಕ್ಷಾಬಂಧನದಂದು ಹಲವಾರು ಮಹಿಳಾ ಅಭಿಮಾನಿಗಳು ದರ್ಶನ್ ಅವರಿಗೆ ರಾಖಿ ಕಟ್ಟುತ್ತಾರೆ. ಸ್ಕ್ರಾಲ್ ಡೌನ್ ಮಾಡಿ ಕನ್ನಡ ನಟರ ರಾಕೀ ಹಬ್ಬದ ವಿಡಿಯೋ ನೋಡಿ
ಆದರೆ ಈ ವರ್ಷ ಕರೊನಾ ಬಿಕ್ಕಟ್ಟು ಲಾಕ್ ಡೌನ್ ಇರುವ ಕಾರಣ ಹೆಚ್ಚಿನ ಮಹಿಳಾ ಅಭಿಮಾನಿಗಳು ದರ್ಶನ್ ಅವರಿಗೆ ರಾಖಿ ಕಟ್ಟಲು ಆಗಿಲ್ಲ. ಆದರೆ ಅವರ ಸಹೋದರಿ ಕವಿತಾರಿಂದ ರಾಖಿ ಕಟ್ಟಿಸಿಕ್ಕೊಂಡಿದ್ದಾರೆ ದರ್ಶನ್, ಒಂದು ದಿನ ಮುಂಚಿತವಾಗಿಯೇ ರಕ್ಷಾಬಂಧನ ಆಚರಿಸಿದ್ದಾರೆ. ಇನ್ನು ರಾಕಿ ಭಾಯ್ ನಟ ಯಶ್ ತಂಗಿಯೊಡನೆ ಭರ್ಜರಿಯಾಗಿ ರಾಖಿ ಹಬ್ಬ ಆಚರಿಸಿದ್ದಾರೆ. ಪ್ರತಿವರ್ಷವೂ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ ಯಶ್, ರಕ್ಷಾಬಂಧನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಈ ಬಾರಿಯೂ ಸಹ ತಂಗಿಯಿಂದ ರಾಖಿ ಕಟ್ಟಿಸಿಕೊಂಡು. ತಂಗಿಯ ಹಣೆ ಮೇಲೆ ಕೈ ಇಟ್ಟು ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿ
ಜೊತೆಗೆ, ಒಂದು ಕಾಲದಲ್ಲಿ ನಮ್ಮ ಸ್ಯಾಂಡಲ್ ವುಡ್ ಅನ್ನು ಆಳಿದ ನಟಿ ಮಾಲಾಶ್ರೀ ಅವರು ಸಹ ರಕ್ಷಾಬಂಧನ ಹಬ್ಬವನ್ನು ಬಹಳ ಸಂತೋಷದಿಂದ ಆಚರಿಸಿದ್ದಾರೆ. ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಮಾಲಾಶ್ರೀ ಅವರ ಮಗಳು ಸಹ ಕಸಿನ್ಸ್ ಗೆ ರಾಖಿ ಕಟ್ಟಿದ್ದಾರೆ. ಸ್ಯಾಂಡಲ್ ವುಡ್ ನ ಚಾಕೊಲೇಟ್ ಹೀರೋ, ವಿಜಯ್ ರಾಘವೇಂದ್ರ ಸಹ ಅಕ್ಕನ ಜೊತೆ ರಕ್ಷಾಬಂಧನ ಆಚರಿಸಿದ್ದಾರೆ.. “ರಕ್ಷಾಬಂಧನ ಅಕ್ಕನ ಬಾಹುಬಂಧನ..” ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಸಹ ಬಹಳ ಜೋರಾಗಿಯೇ ರಕ್ಷಾಬಂಧನ ಆಚರಿಸಿದ್ದಾರೆ. ತಂಗಿಗರೆಲ್ಲಾ ನಿಖಿಲ್ ಗೆ ರಾಖಿ ಕಟ್ಟಿದ್ದಾರೆ.
ರೇಷ್ಮೆ ಬಟ್ಟೆ ತೊಟ್ಟು ಕಂಗೊಳಿಸಿದ್ದಾರೆ ನಿಖಿಲ್. “ರಕ್ಷಾಬಂಧನ ಸಹೋದರ ಸಹೋದರಿಯರ ಸಂಬಂಧವನ್ನು ಗಟ್ಟಿಯಾಗಿಸುತ್ತದೆ.. ಎಲ್ಲರಿಗೂ ರಕ್ಷಾಬಂಧನದ ಶುಭಾಶಯಗಳು..” ಎಂದು ಕ್ಯಾಪ್ಶನ್ ಬರೆದು ತಂಗಿಯರು ರಾಖಿ ಕಟ್ಟುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ಬಹಳ ವರ್ಷದ ನಂತರ ಸಹೋದರನೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ. ಸಹೋದರನಿಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ…”ತುಂಬಾ ಸಮಯದ ನಂತರ ಇದನ್ನ ಮಾಡುತ್ತಿದ್ದೇವೆ. ಎಲ್ಲಾ ಭಾವನೆಗಳು ಒಟ್ಟಾಗಿ ಬಂದಿವೆ. ಈ ಜಗತ್ತಿನಲ್ಲಿ ಎಲ್ಲರಿಗಿಂತಲೂ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ. ನೀನು ಎತ್ತರಕ್ಕೆ ಬೆಳೆಯುತ್ತಾ, ಯಶಸ್ಸು ಪಡೆಯುತ್ತಿರುವುದನ್ನ ನೋಡಲು ಖುಷಿಯಾಗುತ್ತಿದೆ. ಯಾವಾಗಲೂ ಈ ಶಕ್ತಿ ಹಾಗೂ ನಂಬಿಕೆಯನ್ನ ಇಟ್ಟುಕೋ. ಸದಾ ನಿನ್ನ ಜೊತೆಗಿರುತ್ತೇನೆ. ನಿನ್ನ ಹಿಂದೆಯೂ, ನಿನ್ನ ಪಕ್ಕದಲ್ಲೂ..” ಎಂದು ಬರೆದು ರಕ್ಷಾಬಂಧನ ಸಂಭ್ರಮವನ್ನು ಆಚರಿಸಿದ್ದಾರೆ.

Trending

To Top