Film News

ಕಾಲಿವುಡ್ ಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನಟ

ಬೆಂಗಳೂರು: ಕನ್ನಡ ಸಿನಿರಂಗದ ನಟ ಸತೀಶ್ ನೀನಾಸಂ ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ಹಿಟ್ ಆದ ನಂತರ ಇದೀಗ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆ ಮೂಲಕ ಕಾಲಿವುಡ್ ನಲ್ಲಿ ತಮ್ಮ ಕರಿಯರ್ ಪ್ರಾರಂಭಿಸಿದ್ದಾರೆ.

ಕನ್ನಡದ ನಟ ಸತೀಶ್ ನೀನಾಸಂ ಅನೇಕ ಕಾಮಿಡಿ, ಲವ್, ಫ್ಯಾಮಿಲಿ ಆಧಾರಿತ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸತೀಶ್ ನೀನಾಸಂ ಪೆಟ್ರೋಮ್ಯಾಕ್ಸ್ ಚಿತ್ರದ ಶೂಟಿಂಗ್ ಮುಗಿಸಿ ಇದೀಗ ತಮಿಳು ಸಿನೆಮಾದಲ್ಲಿ ನಟಿಸಲು ಎಂಟ್ರಿ ನೀಡಿದ್ದಾರೆ.

ಕಾಲಿವುಡ್ ನ ಯುವ ನಿರ್ದೇಶಕ ಅನಿಸ್ ಅಬ್ಬಾಸ್ ನಿರ್ದೇಶಕತ್ವದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ತಮಿಳು ನಟ ಶಶಿಕುಮಾರ್ ಜೊತೆ ಅಭಿನಯಿಸಲಿದ್ದಾರೆ ಸತೀಶ್ ನೀನಾಸಂ. ಇನ್ನೂ ಶೂಟಿಂಗ್ ನಲ್ಲಿ ಪಾಲ್ಗೊಂಡ ಪೊಟೋವೊಂದನ್ನು ನಿರ್ದೇಶಕ ತಮ್ಮ ಅಧೀಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಪೊಟೋದಲ್ಲಿ ನಟ ಶಶಿಕುಮಾರ್ ಹಾಗೂ ಸತೀಸ್ ನೀನಾಸಂ ರವರು ಸಹ ಇದ್ದಾರೆ.

ವಿಲಿಯಂ ಷೇಕ್ಸ್‌ಪಿಯರ್ ಕಥೆಯೊಂದರಿಂದ ಪ್ರೇರಿತಗೊಂಡ ಈ ಸಿನೆಮಾ ಮೂಡಿಬರುತ್ತಿದ್ದು, ಸತೀಶ್ ನೀನಾಸಂ ಜೈಲಿನಲ್ಲಿ ಖೈದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಚಿತ್ರಕ್ಕೆ ಪಗೈವಾನುಲ್ ಅರುಲ್ವಾಯ್ ಎಂಬ ಟೈಟಲ್ ಇಟ್ಟಿದ್ದು, ಚಿತ್ರದ ಶೂಟಿಂಗ್ 2021 ನೇ ವರ್ಷದಲ್ಲಿ ಆರಂಭಿಸಿರುವುದು ಖುಷಿ ತಂದಿದ್ದು, ಕನ್ನಡದ ನಟ ಸತೀಶ್ ನೀನಾಸಂ ಮೊದಲ ಭಾರಿ ತಮಿಳು ಸಿನೆಮಾದಲ್ಲಿ ನಟಿಸುತ್ತಿದ್ದು, ಅವರನ್ನು ಚಿತ್ರತಂಡ ಭವ್ಯವಾಗಿ ಸ್ವಾಗತಿಸಿದೆ ಎಂದು ಟ್ವೀಟ್ ಮಾಡಿದ್ದಾರೆ ಅನಿಸ್ ಅಬ್ಬಾಸ್.

Trending

To Top