Uncategorized

ಟಾಲಿವುಡ್ ನ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ರಿಷಬ್ ಶೆಟ್ಟಿ…..

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ ರಿಷಬ್ ಶೆಟ್ಟಿ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ನಲ್ಲೂ ತಮ್ಮ ಕ್ರೇಜ್ ಹೆಚ್ಚಿಸಲಿದ್ದಾರೆ.


ಈಗಾಗಲೇ ಸಾಲು ಸಾಲು ಚಿತ್ರಗಳನ್ನು ಕೈಯಲ್ಲಿಟ್ಟುಕೊಂಡಿರುವ ರಿಷಬ್ ಶೆಟ್ಟಿ ಇದೀಗ ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ. ಸ್ವರೂಪ್ ಆರ್.ಜೆ.ಎಸ್ ನಿರ್ದೇಶನದ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ.


ಇನ್ನೂ ರಿಷಬ್ ಶೆಟ್ಟಿ ಮಿಷನ್ ಇಂಪಾಸಿಬಲ್ ಚಿತ್ರದಲ್ಲಿ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದರ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಇನ್ನೂ ಈ ಚಿತ್ರದಲ್ಲಿ ಸುಹಾಸ್ ಹಾಗೂ ಸಂದೀಪ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು. ರಿಷಬ್ ಶೆಟ್ಟಿ ಜೊತೆ ತೆರೆ ಹಂಚಿಕೊಳ್ಳುವುದು ಸಂತಸದ ವಿಚಾರ. ನಟರಾಗಿ ಹಾಗೂ ನಿರ್ದೇಶಕರಾಗಿ ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ ಎಂದು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.


ಇನ್ನೂ ಮಿಷನ್ ಇಂಪಾಸಿಬಲ್ ಸಿನೆಮಾದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು, ಎರಡನೇ ಹಂತದ ಶೂಟಿಂಗ್ ನಲ್ಲಿ ರಿಷಬ್ ಸಹ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೆಲ್ ಬಾಟಂ – 2 ಚಿತ್ರದ ಮುಹೂರ್ತ ಸಹ ನೆರವೇರಿದ್ದು ಶೀಘ್ರದಲ್ಲೇ ಶೂಟಿಂಗ್ ಸಹ ಆರಂಭವಾಗಲಿದೆ.

Trending

To Top