Saturday, May 21, 2022
HomeFilm Newsಕಂಗನಾ ಇನ್ನೂ ಮದುವೆ ಆಗಿಲ್ಲ.. ಈ ಕುರಿತು ಕಾರಣ ತಿಳಿಸಿದ ಫೈರ್ ಬ್ರಾಂಡ್.…

ಕಂಗನಾ ಇನ್ನೂ ಮದುವೆ ಆಗಿಲ್ಲ.. ಈ ಕುರಿತು ಕಾರಣ ತಿಳಿಸಿದ ಫೈರ್ ಬ್ರಾಂಡ್.…

ಸದ್ಯ ಬಾಲಿವುಡ್ ನಲ್ಲಿ ಮದುವೆ ಸಂಭ್ರಮಗಳು ಸಾಲು ಸಾಲಾಗಿ ನಡೆಯುತ್ತಿವೆ. ಇತ್ತೀಚಿಗಷ್ಟೆ ರಣ್ಬೀರ್‍ ಆಲಿಯಾ ಹಾಗೂ ಕತ್ರಿನಾ ವಿಕ್ಕಿ ಜೋಡಿಗಳ ಮದುವೆ ನಡೆಯಿತು. ಇನ್ನೂ ಅನೇಕ ಮದುವೆಗಳು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬಾಲಿವುಡ್ ಖ್ಯಾತ ನಟಿ ಫೈರ್‍ ಬ್ರಾಂಡ್ ಎಂತಲೇ ಕರೆಯುವ ನಟಿ ಕಂಗನಾ ರವವ ಮದುವೆ ಸಹ ನಡೆಯುತ್ತೆ ಎಂದು ಅವರ ಅಭಿಮಾನಿಗಳು ಕಾದಿದ್ದರು. ಆದರೆ ಕಂಗನಾ ಮಾತ್ರ ಮದುವೆಯ ಸುದ್ದಿ ಮಾತ್ರ ಬಂದಿಲ್ಲ. ಸದ್ಯ ತಾವು ಮದುವೆ ಯಾಕೆ ಆಗಿಲ್ಲ ಎಂಬುದರ ಕುರಿತು ಸಹ ಇದೀಗ ಬಹಿರಂಗವಾಗಿದೆ.

ಬಾಲಿವುಡ್ ಫೈರ್‍ ಬ್ರಾಂಡ್ ಎಂದು ಕರೆಯಲಾಗುವ ಕಂಗನಾ ಇನ್ನೂ ಮದುವೆಯಿಂದ ದೂರವೇ ಉಳಿದಿದ್ದಾರೆ. ಬಾಲಿವುಡ್‌ ನಲ್ಲಿ ದೊಡ್ಡ ಕಲಾವಿದೆಯಾಗಿ, ನಿರ್ಮಾಪಕಿಯಾಗಿಯೂ ಸಕ್ಸಸ್ ಆಗಿರುವ ನಟಿ ಮದುವೆ ವಿಚಾರದಲ್ಲಿ ಮಾತ್ರ ದೂರ ಉಳಿದಿದ್ದಾರೆ. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮದುವೆ ಯಾಕೆ ಆಗಿಲ್ಲ ಎಂಬ ವಿಚಾರವನ್ನು ಸಂದರ್ಶನವೊಂದರಲ್ಲಿ ಕಂಗನಾ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ನಟಿ ಕಂಗನಾ ಗೆ ಮದುವೆ ಕುರಿತಂತೆ ಪ್ರಶ್ನೆ ಬಂದಿತ್ತು. ಇದಕ್ಕೆ ಕಂಗನಾ ಉತ್ತರ ನೀಡಿದ್ದಾರೆ.

ನನ್ನನ್ನು ಬಹಳ ಕೋಪದ ವ್ಯಕ್ತಿ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕಂಗನಾ ಹುಡುಗರನ್ನು ಹೊಡೆಯುತ್ತಾಳೆ. ಕೋಪಿಷ್ಟಿ ಎಂಬೆಲ್ಲಾ ಸುದ್ದಿಗಳನ್ನು ಹರಡಿಸಿದ್ದೀರಿ. ಆದ್ದರಿಂದಲೇ ನನಗೆ ಮದುವೆಯಾಗಿಲ್ಲ. ನನ್ನ ಬಗ್ಗೆ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿರುವುದರಿಂದ ನನ್ನ ವೈಯುಕ್ತಿಕ ಜೀವನದಲ್ಲಿ ತುಂಬಾ ನಷ್ಟವಾಗಿದೆ. ಆದ್ದರಿಂದಲೇ ನನಗಿನ್ನು ಮದುವೆ ಆಗಿಲ್ಲ ಎಂದು ಕಂಗನಾ ಮದುವೆ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

ಕಂಗನಾ ನಿಜ ಜೀವನದಲ್ಲಿ ತುಂಬಾ ಮೃದು ಸ್ವಭಾವದ ವ್ಯಕ್ತಿತ್ವದವರಾಗಿದ್ದಾರೆ. ಸದಾ ಲವಲವಿಕೆಯಿಂದ ಎಲ್ಲರನ್ನೂ ಸಂತೋಷದಿಂದ ಮಾತನಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಾರೆ. ಅಪಾರವಾದ ದೈವ ಭಕ್ತಿ ಹೊಂದಿದ ವ್ಯಕ್ತಿಯಾಗಿದ್ದಾರೆ. ಯೋಗ ವ್ಯಾಯಾಮಗಳನ್ನು ಸಹ ಮಾಡುತ್ತಿರುತ್ತಾರೆ. ಸರಳ ವ್ಯಕ್ತಿತ್ವವನ್ನು ಕಂಗನಾ ಹೊಂದಿದ್ದಾರೆ. ಈ ಹಿಂದೆ ಕಂಗನಾ ಹಾಗೂ ಹೃತಿಕ್ ರೋಷನ್  ಇಬ್ಬರ  ನಡುವೆ ಸಂಬಂಧವಿದೆ ಎಂಬ ಮಾತುಗಳು ಕೇಳಿಬಂದಿದ್ದು, ಬಿಟ್ಟರೇ ಬೆರ್‍ಯಾವ ನಟನ ಜೊತೆಗೆ ಕಂಗನಾ ಹೆಸರು ಕೇಳಿಬಂದಿಲ್ಲ. ಸದ್ಯ ಕಂಗನಾ ತಾವು ಮದುವೆಯಾಗದೇ ಇರಲು ಸುಳ್ಳು ಸುದ್ದಿಗಳೇ ಕಾರಣ ಎಂದಿದ್ದಾರೆ.

- Advertisement -

You May Like

More