ಸೇಮ್ ಇಂದಿರಾಗಾಂಧಿಯಂತೆ ಕಾಣಿಸಿಕೊಂಡ ಕಂಗನಾ, ವೈರಲ್ ಆದ ಕಂಗನಾ ಹೊಸ ಸಿನೆಮಾ ಪೋಸ್ಟರ್…!

ಬಾಲಿವುಡ್ ನ ವಿವಾದಾತ್ಮಕ ನಟಿ ಎಂದಾಕ್ಷಣ ನೆನೆಪಿಗೆ ಬರುವುದು ಕಂಗನಾ ರಾಣವತ್. ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ದೊಡ್ಡ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಮಾಡುವಂತಹ ಕಾಮೆಂಟ್ ಗಳು, ದೊಡ್ಡ ದೊಡ್ಡ ಸ್ಟಾರ್‍ ನಟರ ಬಗ್ಗೆ ಓಪೆನ್ ಆಗಿಯೇ ಸ್ಟೇಟ್ ಮೆಂಟ್ ಕೊಡುತ್ತಾರೆ. ಇದರ ಜೊತೆಗೆ ನಟಿ ಕಂಗನಾ ಸಿನೆಮಾಗಳಲ್ಲೂ ಸಹ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತಿರುತ್ತಾರೆ. ಸಿನೆಮಾಗಳಲ್ಲಿ ರೊಮ್ಯಾನ್ಸ್, ಕತ್ತಿ ಹಿಡಿದು ಯುದ್ದ ಮಾಡುವ ಸಿನೆಮಗಳಲ್ಲೂ ಸಹ ಆಕೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇದೀಗ ಆಕೆಯ ಹೊಸ ಸಿನೆಮಾ ಪೋಸ್ಟರ್‍ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಕಂಗನಾ ಇತ್ತೀಚಿಗೆ ಅನೇಕ ಸಿನೆಮಾಗಳಲ್ಲಿ ಲೇಡಿ ಓರಿಯೆಂಟೆಂಡ್ ಸಿನೆಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಇನ್ನೂ ಕಂಗನಾ ಸಿನಿ ಕೆರಿಯರ್‍ ಶುರುವಾಗಿ ಎರಡು ದಶಮಾನ ಕಳೆಯಲಿದೆ. ಅನೇಕ ಹಿಟ್ ಸಿನೆಮಾಗಳನ್ನು ಸಹ ಈಕೆ ನೀಡಿದ್ದಾರೆ. ಅದರಲ್ಲೂ ಹೆಚ್ಚಾಗಿ ಸಾಹಸಮಯ ಸಿನೆಮಾಗಳು ಕಂಗಾನಗೆ ಒಳ್ಳೆಯ ಫೇಮ್ ತಂದುಕೊಟ್ಟಿತ್ತು. ಈ ಕಾರಣದಿಂದ ಅನೇಕ ವರ್ಷಗಳಿಂದ ಬಾಲಿವುಡ್ ನಲ್ಲಿ ಆಫರ್‍ ಗಳನ್ನು ದಕ್ಕಿಸಿಕೊಳ್ಳುತ್ತಾ ಬಾಲಿವುಡ್ ಕ್ವೀನ್ ಆಗಿ ಮುಂದುವರೆಯುತ್ತಿದ್ದಾರೆ. ಸದ್ಯ ಕಂಗನಾ ಸಿನೆಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನೆಮಾದಲ್ಲಿ ಆಕೆ ಚಾಲೆಂಜಿಂಗ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿಗಷ್ಟೆ ಕಂಗನಾ ತಮಿಳುನಾಡು ಸಿಎಂ ಜಯಲಲಿತಾ ಜೀವನ ಕಥೆಯನ್ನು ಆಧರಿಸಿದ ಸಿನೆಮಾದಲ್ಲಿ ನಟಿಸುವ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು. ಇದೀಗ ಮತ್ತೊಂದು ದೊಡ್ಡ ರಾಜಕಾರಣಿಯೊಬ್ಬರ ಪಾತ್ರದಲ್ಲಿ ನಟಿಸುವ ಮೂಲಕ ಎಲ್ಲರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಇನ್ನೂ ನಟಿ ಕಂಗನಾ ರಾಣಾವತ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಯವರಿಗೆ ಸಂಬಂಧಿಸಿದ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ. ಪ್ರಧಾನಿಯಾಗಿದ್ದಾಗ ಇಂದಿರಾಗಾಂಧಿ ಹೇರಿದ್ದ ಎಮರ್ಜೆನ್ಸಿ ಎಂಬ ಸಿನೆಮಾದಲ್ಲಿ ಕಂಗನಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನೆಮಾದ ಪೋಸ್ಟರ್‍ ಸಹ ರಿಲೀಸ್ ಆಗಿದೆ. ಪೋಸ್ಟರ್‍ ನಲ್ಲಿ ಕಂಗನಾ ಸೇಮ್ ಟು ಸೇಮ್ ಇಂದಿರಾಗಾಂಧಿಯವರಂತೆ ಕಾಣಿಸಿಕೊಂಡಿದ್ದಾರೆ. ಎಮರ್ಜೆನ್ಸಿ ಸಿನೆಮಾ ತುಂಬಾ ಪವರ್‍ ಪುಲ್ ಕಥೆಯನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತಿದೆ. 1979 ರಲ್ಲಿ ನಡೆದ ಕೆಲವೊಂದು ಯದಾರ್ಥ ಸಂಘಟನೆಗಳನ್ನು ಆಧರಿಸಿ ಸಿನೆಮಾ ಸೆಟ್ಟೆರಲಿದೆ. ಆ ಸಮಯದಲ್ಲಿ ದೇಶದಲ್ಲಿ ಹೇರಲಾಗಿದ್ದ ಎಮರ್ಜೆನ್ಸಿಯಲ್ಲಿನ ಕೆಲವೊಂದು ವಿಚಾರಗಳನ್ನು ಸಿನೆಮಾದಲ್ಲಿ ತೆರೆದಿಡಲಾಗುತ್ತಿದೆ. ಸದ್ಯ ಸಿನೆಮಾದ ಪೋಸ್ಟರ್‍ ಎಲ್ಲೆಡೆ ವೈರಲ್ ಆಗುತ್ತಿದೆ. ಟೀಸರ್‍ ಸಹ ರಿಲೀಸ್ ಆಗಿದೆ. ಟೀಸರ್‍ ನಲ್ಲೂ ಇಂದಿರಾ ರವರ ವಾಯ್ಸ್ ನಂತೆ ಬಂದಿದ್ದು, ಕೆಲವೊಂದು ಡೈಲಾಗ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನೂ ಕಂಗನಾ ರವರೇ ಸಿನೆಮಾದ ಕಥೆಯನ್ನು ಸಿದ್ದಮಾಡಿದ್ದಾರೆ. ಜೊತೆಗೆ ಕಂಗನಾ ರವರೇ ನಿರ್ದೇಶನ ಮಾಡಲಿದ್ದಾರೆ. ಸದ್ಯ ಫಸ್ಟ್ ಲುಕ್ ಹಾಗೂ ಟೀಸರ್‍ ರಿಲೀಸ್ ಆಗಿದ್ದು. ಎಲ್ಲೆಡೆ ವೈರಲ್ ಆಗುತ್ತಿವೆ. ಸದ್ಯ ಕಂಗನಾ ಇಂದಿರಾಗಾಂಧಿಯವರ ತರಹವೇ ಕಾಣಿಸುತ್ತಿದ್ದು, ಇದೀಗ ಸೋಷಿಯಲ್ ಮಿಡಿಯಾ ತುಂಬಾ ಇದೇ ಪೊಟೋಗಳು ವೈರಲ್ ಆಗುತ್ತಿವೆ.

Previous articleಬ್ಲೂ ಕಲರ್ ಸೀರೆಯಲ್ಲಿ ನಾಚಿ ನೀರಾದ ಮಲಾಯಾಳಂ ಕುಟ್ಟಿ ಅನುಪಮಾ…!
Next articleಕುಣಿದಾಡುತ್ತಾ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಪೂನಂ ಬಾಜ್ವಾ, ಬೋಲ್ಡ್ ಸ್ಟಿಲ್ಸ್ ಗೆ ಫಿದಾ…!