Film News

ಬಟ್ಟೆ ವಿಚಾರಕ್ಕೆ ಕಿತ್ತಾಡಿದ ಬಾಲಿವುಡ್ ಸ್ಟಾರ್ ನಟಿಯರು!

ಮುಂಬೈ: ಸದಾ ಟ್ವಿಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಗಳ ಮೂಲಕವೇ ಸುದ್ದಿಯಲ್ಲಿರುವ ನಟಿ ಕಂಗನಾ ರಾಣಾವತ್ ಇದೀಗ ಮತ್ತೋರ್ವ ನಟಿಯ ವಿರುದ್ದ ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ. ಇದೀಗ ನಟಿ ತಾಪ್ಸಿ ಪನ್ನು ರವರ ವಿರುದ್ದ ’ಕಾಪಿ ಕ್ಯಾಟ್’ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಅನೇಕ ಬಾರಿ ವಿವಿಧ ವಿಚಾರಕ್ಕಾಗಿ ಬಾಲಿವುಡ್ ನಟಿಯರಾದ ಕಂಗನಾ ಹಾಗೂ ತಾಪ್ಸಿ ಕಿತ್ತಾಡಿಕೊಂಡಿದ್ದಾರೆ. ಇದೀಗ ಬಟ್ಟೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ, ಕಂಗನಾ ರವರು ಧರಿಸಿದ್ದಂತಹ ಬಟ್ಟೆಯ ಮಾದರಿಯಲ್ಲಿಯೇ ತಾಪ್ಸಿ ಪನ್ನು ಸಹ ಧರಿಸಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡುವಂತಹ ೨ ಪೊಟೋಗಳನ್ನು ಕಂಗನಾ ಅಭಿಮಾನಿಯೊಬ್ಬರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಈ ಟ್ವಿಟರ್ ಗಮನಿಸಿದ ಕಂಗನಾ ವ್ಯಂಗವಾಗಿ ತಾಪ್ಸಿ ಕುರಿತು ಟ್ವೀಟ್ ಮಾಡಿದ್ದಾರೆ.

ತಾಪ್ಸಿ ವಿರುದ್ದ ಕಂಗನಾ ಟ್ವೀಟ್ ಮಾಡಿದ್ದು, ತಾಪ್ಸಿ ನನ್ನ ಅಭಿಮಾನಿಯಾಗಿರುವುದು ಖುಷಿಯ ವಿಚಾರವಾಗಿದೆ. ನನ್ನನ್ನು ಕಾಪಿ ಮಾಡುವುದರಲ್ಲಿಯೇ ತಾಪ್ಸಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ. ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬಳಿಕ ಹೆಚ್ಚಾಗಿ ನಕಲು ಮಾಡಲ್ಪಡುವ ಬಾಲಿವುಡ್ ಸೆಲೆಬ್ರೆಟಿ ನಾನೇ’ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ತಾಪ್ಸಿ ಸಹ ಪ್ರತಿಕ್ರಿಯೆ ನೀಡಿದ್ದು, ಆತ್ಮವಿಶ್ವಾಸ ಹೊಂದಿರುವ ಸಮರ್ಥ ವ್ಯಕ್ತಿಗೆ ಯಾವ ವಿಚಾರಕ್ಕೂ ಹೊಟ್ಟೆ ಕಿಚ್ಚು ಇರುವುದಿಲ್ಲ. ಹೊಟ್ಟೆ ಕಿಚ್ಚು ಎಂಬುದು ಅಭದ್ರತೆಯ ಲಕ್ಷಣವಿದ್ದಂತೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ಈ ಬಾಲಿವುಡ್ ನಟಿಯರ ಜಗಳ ಅವರವರ ಅಭಿಮಾನಿಗಳಲ್ಲೂ ಕೂಡ ಟ್ವೀಟ್ ವಾರ್ ನಡೆಯುತ್ತಿದೆ.

Trending

To Top