Film News

ಮಾನನಷ್ಟ ಕೇಸ್ ಸುಳಿಯಲ್ಲಿ ನಟಿ ಕಂಗನಾ!

ಮುಂಬೈ: ಕಾಂಟ್ರವರ್ಸಿ ನಟಿ ಎಂದೇ ಕರೆಯಲಾಗುವ ಬಾಲಿವುಡ್ ನಟಿ ಕಂಗನಾ ರಾಣವತ್ ಗೆ ಇದೀಗ ಕೋರ್ಟ್ ಶಾಕ್ ನೀಡಿದೆ. ಮಾನನಷ್ಟ ಕೇಸ್ ವೊಂದರಲ್ಲಿ ಕಂಗನಾಗೆ ಸಂಕಷ್ಟ ಎದುರಾಗಿದೆ.

ಬಾಲಿವುಡ್‌ನ ಫೈರ್‌ಬ್ರಾಂಡ್ ಎಂತಲೇ ಕರೆಯುವ ಕಂಗನಾ ವಿರುದ್ದ ಖ್ಯಾತ ಲೇಖಕ ಜಾವೆದ್ ಅಖ್ತರ್ ದಾಖಲು ಮಾಡಿದ ಮಾನನಷ್ಟ ಮೊಕದ್ದಮೆ ಕೇಸ್‌ನಲ್ಲಿ ಕಂಗನಾಗೆ ಸಂಕಷ್ಟ ಎದುರಾಗಿದೆ. ಕಂಗನಾ ನನ್ನ ವಿರುದ್ದ ನನ್ನ ಪ್ರತಿಷ್ಟೆಗೆ ಅಡ್ಡಿಯಾಗುವಂತಹ ಆರೋಪಗಳನ್ನು ಮಾಡಿದ್ದರು. ಇದರಿಂದ ಬೇಸತ್ತ ಜಾವೆದ್ ಅಖ್ತರ್ ಕೋರ್ಟಿನಲ್ಲಿ ಮಾನನಷ್ಟ ಕೇಸ್ ದಾಖಲು ಮಾಡಿದ್ದಾರೆ.

ಇನ್ನೂ ಈ ಕೇಸ್‌ನಡಿ ಕೋರ್ಟ್ ಕಂಗನಾಗೆ ಸಮನ್ಸ್ ಸಹ ಜಾರಿ ಮಾಡಿತ್ತು. ಆದರೆ ಕಂಗನಾ ಈ ಸಮನ್ಸ್ ಗೆ ಉತ್ತರ ನೀಡದ ಕಾರಣ ಆಕೆಗೆ ವಾರೆಂಟ್ ಜಾರಿ ಮಾಡಬೇಕೆಂದು ಆದೇಶ ನೀಡಿದೆ ಎನ್ನಲಾಗಿದೆ. ಇನ್ನೂ ಈ ಕೇಸ್ ವಿಚಾರಣೆಯನ್ನು ಮಾರ್ಚ್ 26 ರಂದು ಕೈಗೆತ್ತಿಕೊಳ್ಳಲಿದೆ ಕೋರ್ಟ್.

ಈ ಹಿಂದೆ ಜುಹೋ ಪೊಲೀಸರು ಈ ಕೇಸ್ ಕುರಿತು ವಿಚಾರಣೆ ನಡೆಸಿದ್ದರು. ಸುಶಾಂತ್ ಸಿಂಗ್ ರಾಜಪುತ್ ಸೂಸೈಡ್ ಗೆ ಸಂಬಂಧಿಸಿದಂತೆ ಕಂಗನಾ ಜಾವೆದ್ ಅಖ್ತರ್ ಮೇಲೆ ಕೆಲವೊಂದು ಆರೋಪಗಳನ್ನು ಮಾಡಿದ್ದರು. ಈ ಕಾರಣದಿಂದಾಗಿ ಜಾವೆದ್ ಕೇಸನ್ನು ದಾಖಲಿಸಿದ್ದರು.

Trending

To Top