ಹೈದರಾಬಾದ್: ಇತ್ತೀಚಿಗಷ್ಟೆ ನಟ ಕಾಜಲ್ ಅಗರ್ವಾಲ್ ರವರು ಸರಳವಾಗಿ ಮದುವೆಯಾಗಿ ಮಾಲ್ಡೀವ್ಸ್ ನಲ್ಲಿ ಹನಿಮೂನ್ ಗೆ ತೆರಳಿದ್ದಾಗ ತೆಗೆಸಿಕೊಂಡ ಪೊಟೋಗಳು ಸಖತ್ ವೈರಲ್ ಆಗಿತ್ತು. ಇದೀಗ ನಟಿ ಕಾಜಲ್ ಹಾಗೂ ಪತಿ ಗೌತಮ್ ರವರು ಹೊಸ ವರ್ಷವನ್ನು ಶಿಮ್ಲಾದಲ್ಲಿ ಕಳೆದು ಎಂಜಾಯ್ ಮಾಡಿದ್ದಾರೆ.
ಬಹುಭಾಷ ನಟಿ ಕಾಜಲ್ ಅಗರ್ವಾಲ್ ಹಾಗೂ ಪತಿ ಗೌತಮ್ ಕೀಚಲು ರವರು ಹೊಸವರ್ಷ ಸಂಭ್ರಮಾಚರಣೆಗಾಗಿ ಸ್ನೇಹಿತರೊಂದಿಗೆ ಶಿಮ್ಲಾಗೆ ತೆರಳಿದ್ದು, ಎಂಜಾಯ್ ಮಾಡಿದ್ದಾರೆ. ಇನ್ನೂ ಅಲ್ಲಿ ಕಳೆದಂತಹ ಪೊಟೋಗಳನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ವಾತವರಣಕ್ಕೆ ತಕ್ಕಂತೆ ಉಡುಪುಗಳನ್ನು ಧರಿಸಿದ ನೂತನ ದಂಪತಿ ಮೋಜು ಮಸ್ತಿ ಮಾಡಿದ್ದು, ಹೊಸ ವರ್ಷ ೨೦೨೧ ನ್ನು ಸ್ವಾಗತಿಸಿದ್ದಾರೆ.
ಇನ್ನೂ ಈ ಪೊಟೋಗಳನ್ನು ಶೇರ್ ಮಾಡಿ ವರ್ಷದ ಜೀವನದ ಬಗ್ಗೆ ಸುದೀರ್ಘವಾಗಿ ಬರೆದಿದ್ದು, ನನ್ನ ಜೀವನದಲ್ಲಿ ಜೊತೆಯಾದ ಎಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ಕೃತಜ್ಞತೆಗಳನ್ನು ತಿಳಿಸುವ ಮೂಲಕ ಹೊಸ ವರ್ಷದ ಶುಭಾಷಯಗಳನ್ನು ಕೋರಿದ್ದಾರೆ.
ಈಗಾಗಲೇ ತಿಳಿದಂತೆ ಕಾಜಲ್ ಪತಿ ಗೌತಮ್ ಕೀಚಲು ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸಹ ತೆರೆಯಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಶೀಘ್ರವಾಗಿಯೇ ಹೊಸ ನಿರ್ಮಾಣ ಸಂಸ್ಥೆಯನ್ನು ಸಹ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ನಟಿ ಕಾಜಲ್ ಮೆಗಾಸ್ಟಾರ್ ಅಭಿನಯದ ಆಚಾರ್ಯ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
