Uncategorized

ನಿರ್ಮಾಣ ಸಂಸ್ಥೆ ಪ್ರಾರಂಭಿಸಲಿದ್ದಾರಂತೆ ಕಾಜಲ್ ಪತಿ!

ಹೈದರಾಬಾದ್: ಇತ್ತೀಚಿಗಷ್ಟೆ ಮದುವೆಯಾಗಿರುವ ಕಾಜಲ್ ಅಗರ್ವಾಲ್ ಹಾಗೂ ಉದ್ಯಮಿ ಗೌತಮ್ ಕಿಚಲು ಹೊಸದಾಗಿ ಚಲನಚಿತ್ರಗಳ ನಿರ್ಮಾಣ ಸಂಸ್ಥೆಯೊಂದನ್ನು ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ.

ಸರಳವಾಗಿ ಮದುವೆಯಾದ ಕಾಜಲ್ ಹಾಗೂ ಗೌತಮ್ ರವರು ಮಾಲ್ಡೀವ್ಸ್ ಹನಿಮೂನ್ ಕ್ಷಣಗಳನ್ನು ಕಳೆದು, ವಾಪಸ್ಸು ಬಂದ ಕೂಡಲೇ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಆಚಾರ್ಯ ಶೂಟಿಂಗ್ ಸೆಟ್ ಗೆ ತೆರಳಿದರು. ಇನ್ನೂ ಚಿರಂಜೀವಿ ಹೊಸ ದಂಪತಿಗೆ ಹೂಗೂಚ್ಚ ನೀಡುವ ಮೂಲಕ ಅಭಿನಂದಿಸಿದ ಪೋಟೊಗಳು ಸಹ ಸೋಷಿಯಲ್ ಮಿಡೀಯಾಗಳಲ್ಲಿ ವೈರಲ್ ಆಗಿದ್ದವು.

ಇದೀಗ ಬಂದ ಹೊಸ ವಿಚಾರವೆಂದರೆ, ಉದ್ಯಮಿಯಾಗಿದ್ದ ಗೌತಮ್ ರವರನ್ನು ಸಿನಿರಂಗ ಸೆಳೆಯುತ್ತಿದ್ದು, ಹೊಸ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸುವ ಯೋಚನೆಯಲ್ಲಿದ್ದಾರೆ. ಈ ಕುರಿತು ಕೆಲವೊಂದು ಸುದ್ದಿವಾಹಿನಿಗಳು ವರದಿ ಮಾಡಿದಂತೆ ಕಾಜಲ್ ದಂಪತಿ ಹೊಸದೊಂದು ನಿರ್ಮಾಣ ಸಂಸ್ಥೆ ಪ್ರಾರಂಭಿಸಲಿದ್ದಾರಂತೆ. ದೇಶದ ಪ್ರತಿಷ್ಟಿತ ಒಳಾಂಗಣ ವಿನ್ಯಾಸ ಸಂಸ್ಥೆಗಳಲ್ಲಿ ಒಂದಾದ ಹೋಮ್ ಡೆಕೋರ್ ನ ಮಾಲೀಕರಾದ ಗೌತಮ್ ಕೀಚಲು, ಹೊಸದೊಂದು ಒಳಾಂಗಣ ವಿನ್ಯಾಸದ ಬ್ರ್ಯಾಂಡ್ ವೊಂದನ್ನು ಬಿಡುಗಡೆ ಮಾಡಲಿದೆಯಂತೆ. ನಂತರ ನಿರ್ಮಾಣ ಸಂಸ್ಥೆಯ ಬಗ್ಗೆ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ನಟಿ ಕಾಜಲ್ ಆಚಾರ್ಯ ಸಿನೆಮಾದಲ್ಲಿ ನಟಿಸುತ್ತಿದ್ದು, ನಂತರ ಇಂಡಿಯನ್-೨, ಮೋಸಗಾಳ್ಳು, ಮುಂಬೈ ಸಗಾ, ಮೆರುಪು, ದುಲ್ಕರ್ ಹಾಗೂ ಕನ್ನಡದ ತಥಾಸ್ತು ಸಿನೆಮಾಗಳಲ್ಲಿ ಅಭಿನಯಿಸಲಿದ್ದಾರೆ.

Trending

To Top