Film News

ಅಸ್ತಮಾ ಕಾಯಿಲೆ ಕಾಜಲ್ ಅಗರ್ವಾಲ್ ರವರನ್ನು ಕಾಡುತ್ತಿದೆಯಂತೆ!

ಹೈದರಾಬಾದ್: ದಕ್ಷಿಣ ಭಾರತದ ಬಹುಬೇಡಿಕೆ ನಟಿ ಕಾಜಲ್ ಅಗರ್ವಾಲ್ ರವರನ್ನು ಕಳೆದ 30 ವರ್ಷಗಳಿಂದ ಅಸ್ತಮಾ ಕಾಯಿಲೆ ಕಾಡುತ್ತಿದೆಯಂತೆ. ಇನ್ನೂ ಈ ಕುರಿತು ಕಾಜಲ್ ಅಗರ್ವಾಲ್ ರವರೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ರವರಿಗೆ 5 ವರ್ಷ ವಯಸ್ಸಿನಲ್ಲಿದ್ದಾಗಲೇ ಅಸ್ತಮಾ ಕಾಯಿಲೆ ಇದೆಯೆಂಬುದು ತಿಳಿದಿತ್ತಂತೆ. ಇನ್ನೂ ಈ ಕಾಯಿಲೆ ಇರುವುದು ಗೊತ್ತಾದ ಕೂಡಲೇ ಕಾಜಲ್ ಪೋಷಕರು ಆಹಾರ ನೀಡುವುದರಲ್ಲಿ ಬದಲಾವಣೆ ಮಾಡಿದರಂತೆ. ಜೊತೆಗೆ ಚಾಕೋಲೇಟ್, ಡೈರಿ ಉತ್ಪನ್ನಗಳನ್ನು ಸಹ ತಿನ್ನುವಂತೆ ಇರಲಿಲ್ಲ ಎಂದಿದ್ದಾರೆ.

ಇನ್ನೂ ಈ ಕಾಯಿಲೆ ಕಾಜಲ್ ಬೆಳೆದು ದೊಡ್ಡವಳಾದ ಮೇಲೂ ಸಹ ವಾಸಿಯಾಗಿಲ್ಲ. ಧೂಳು ಪ್ರದೇಶಗಳಲ್ಲಿ, ರಸ್ತೆಯಲ್ಲಿನ ಧೂಳು, ಚಳಿಗಾಲದಲ್ಲಿ ಸೇರಿದಂತೆ ಹಲವು ಸನ್ನಿವೇಶಗಳಲ್ಲಿ ತುಂಬಾ ಕಷ್ಟ ಅನುಭವಿಸುತ್ತಿದ್ದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಧೂಳು, ಹೊಗೆ, ಚಳಿ ಹೆಚ್ಚಾಗಿ ಇರುವುದರಿಂದ ಪ್ರತಿನಿತ್ಯ ಅಸ್ತಮಾ ಕಾಯಿಲೆಯಿಂದ ತುಂಬಾ ಸಮಸ್ಯೆ ಪಡುತ್ತಿದೆ. ನಂತರ ನಾನು ಇನ್‌ಹೀಲರ್ ಬಳಸಲು ಆರಂಭಿಸಿದೆ. ನಾನು ಇನ್‌ಹೀಲರ್ ಬಳಸುವುದನ್ನು ಕಂಡ ಅನೇಕರ ಒಂದು ರೀತಿಯಲ್ಲಿ ನನ್ನನ್ನು ನೋಡಲು ಪ್ರಾರಂಭಿಸಿದರು. ಅನೇಕ ರೀತಿಯ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದರು. ಕಾಲಕ್ರಮೇಣ ಇದೆಲ್ಲವೂ ನನಗೆ ಅಭ್ಯಾಸವಾಯಿತು ಎಂದಿದ್ದಾರೆ.

ಅಷ್ಟೇ ಅಲ್ಲದೇ ಅಸ್ತಮಾ ಕಾಯಿಲೆ ಬಗ್ಗೆ ಮತ್ತೊಂದು ಮುಖ್ಯ ವಿಚಾರವನ್ನು ಹಂಚಿಕೊಂಡಿದ್ದು, ಇನ್‌ಹೀಲರ್ ಬಳಸಲು ಹಿಂಜರಿಯಬೇಡಿ. ಸಾರ್ವಜನಿಕವಾಗಿ ಆಗಲಿ, ಅಥವಾ ಖಾಸಗಿಯಾಗಲಿ ಇನ್‌ಹೀಲರ್ ಅನ್ನು ಬಳಸಿ, ಲಕ್ಷಾಂತರ ಮಂದಿ ಅಸ್ತಮಾ ಕಾಯಿಲೆಗೆ ತುತ್ತಾಗಿದ್ದು, ಇನ್‌ಹೀಲರ್ ಬಳಸಲು ಹಿಂಜರಿಯುತ್ತಾರೆ. ಯಾವುದೇ ಕಾರಣಕ್ಕೂ ಇನ್‌ಹೀಲರ್ ಬಳಸಲು ಹಿಂಜರಿಯಬೇಡಿ ಎಂದು ಸಲಹೆ ನೀಡಿದ್ದಾರೆ ಕಾಜಲ್ ಅಗರ್ವಾಲ್.

Trending

To Top