Film News

ಕಬ್ಜ ಅಬ್ಬರ ಡಿ.20 ರಿಂದ ಆರಂಭ!

ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೇ ಭಾರತೀಯ ಸಿನಿರಂಗದ ಬಹುದೊಡ್ಡ ಸಿನೆಮಾ ಎನ್ನಿಸಿಕೊಂಡಿರುವ ರಿಯಲ್ ಸ್ಟಾರ್ ಉಪೇಂದ್ರ ರವರ ನಟನೆಯ ಕಬ್ಜ ಶೂಟಿಂಗ್ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದೆ ಎಂಬ ಮಾಹಿತಿ ಹೊರಬಿದಿದ್ದೆ.

ಭಾರತೀಯ ಸಿನಿರಂಗದ ಬಹುದೊಡ್ಡ ಸಿನೆಮಾ ಎಂದೇ ಕರೆಯಲಾಗುವ ಕಬ್ಜ ಒಟ್ಟು 7 ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ಶೂಟಿಂಗ್ ಅಕ್ಟೋಬರ್ ತಿಂಗಳಲ್ಲೇ ಪ್ರಾರಂಭವಾಗಬೇಕಿತ್ತು. ಆದರೆ ನಿರ್ದೇಶನರ ಅನಾರೋಗ್ಯದ ನಿಮಿತ್ತ ಶೂಟಿಂಗ್ ಮುಂದೂಡಲಾಗಿತ್ತು. ಪ್ರಸ್ತುತ ನಿರ್ದೇಶಕರು ಗುಣಮುಖರಾಗಿದ್ದು, ಡಿಸೆಂಬರ್ ತಿಂಗಳ ಮೂರನೇ ತಿಂಗಳಿಂದ ಶೂಟಿಂಗ್ ಪ್ರಾರಂಭ ಮಾಡುತ್ತಾರಂತೆ.

1980ರ ಅಂಡರ್ ವರ್ಲ್ಡ್ ಕಥೆಯನ್ನು ಆಧರಿಸಿ ನಿರ್ಮಾಣ ವಾಗಲಿರುವ ಕಬ್ಜ ಚಿತ್ರ, ಸಿದ್ದೇಶ್ವರ ಎಂಟರ್ ಪ್ರೈಸಸ್ ಅಡಿ ಸಿನೆಮಾ ನಿರ್ಮಾಣವಾಗಲಿದೆ. ಇನ್ನೂ ಈ ಚಿತ್ರಕ್ಕೆ ಕೆಜಿಎಫ್ ಚಿತ್ರಕ್ಕೆ ಸೆಟ್ ನಿರ್ಮಾಣ ಮಾಡಿದ ಶಿವಕುಮಾರ್ ರವರೇ ಕಬ್ಜ ಚಿತ್ರಕ್ಕೂ ಸೆಟ್ ನಿರ್ಮಿಸಲಿದ್ದಾರಂತೆ.

ಬ್ರಹ್ಮ ಮತ್ತು ಐ ಲವ್ ಯೂ ಸಿನೆಮಾಗಳ ಮೂಲಕ ಉಪೇಂದ್ರ ಹಾಗೂ ಆರ್.ಚಂದ್ರು ರವರ ಕಾಂಬಿಶೇನ್ ನಲ್ಲಿ ಕಬ್ಜ ಚಿತ್ರ ತೆರೆ ಮೇಲೆ ಬರಲಿದೆ. ಇದುವರೆಗೂ ಕಬ್ಜ ಚಿತ್ರದ ನಾಯಕಿ ಯಾರೆಂಬುದು ಇನ್ನೂ ನಿಗೂಡವಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಸ್ಟಾರ್ ನಟಿಯೊಬ್ಬರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಯಾರೆಂಬುದರ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಶೀಘ್ರದಲ್ಲಿಯೇ ನಾಯಕಿ ಯಾರೆಂದು ಅಧಿಕೃತವಾಗಿ ತಿಳಿಯಲಿದೆಯಂತೆ

Trending

To Top