ಅಪ್ಪನ ಹಾಗೇ ಪೋಸ್ ಕೊಟ್ಟ ಜೂನಿಯರ್ ಯಶ್, ಕೆಜಿಎಫ್ ಸಿನೆಮಾದಲ್ಲಿ ಯಶ್ ನಂತೆ ಸ್ಟೈಲಿಷ್ ಲುಕ್.!

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಇತಿಹಾಸ ಸೃಷ್ಟಿ ಮಾಡಿದ ಸಿನೆಮಾ ಅದು ಕೆಜಿಎಫ್-2. ಈಗಾಗಲೇ ಈ ಸಿನೆಮಾ ದೇಶದ ಸಿನಿರಂಗದ ಅನೇಕ ದಾಖಲೆಗಳನ್ನು ಉಡೀಸ್ ಮಾಡಿದೆ. ಈ ಸಿನೆಮಾದ ಬಳಿಕ ಯಶ್ ನ್ಯಾಷನಲ್ ಸ್ಟಾರ್‍ ಆಗಿದ್ದಾರೆ. ಈಗಾಗಲೇ ಯಶ್ ಅಭಿನಯಕ್ಕೆ ದೇಶ ಸೇರಿದಂತೆ ವಿದೇಶಗಳಲ್ಲೂ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಇನ್ನೂ ಯಶ್ ಹಾಗೂ ರಾಧಿಕಾ ದಂಪತಿಯ ಮುದ್ದಿನ ಮಕ್ಕಳಾದ ಐರಾ ಹಾಗೂ ಯಥರ್ವರವರನ್ನು ಸಹ ಯಶ್ ಫ್ಯಾನ್ಸ್ ತುಂಬಾನೆ ಲೈಕ್ ಮಾಡುತ್ತಾರೆ. ಯಶ್ ಪತ್ನಿ ರಾಧಿಕಾ ತಮ್ಮ ಮಕ್ಕಳ ತುಂಟಾದ ಪೊಟೋಗಳನ್ನು, ವಿಡಿಯೋಗಳನ್ನು ಆಗಾಗ ಶೇರ್‍ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಆಕೆ ಸದ್ಯ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮಕ್ಕಳ ಪೋಷಣೆ ಮಾಡುತ್ತಾ, ಯಶ್ ಗೆ ಕುಟುಂಬದ ಬಗ್ಗೆ ಯೋಚನೆ ಮಾಡದ ರೀತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನೂ ಮಕ್ಕಳೊಂದಿಗೆ ರಾಧಿಕಾ ಪುಲ್ ಖುಷಿಯಾಗಿದ್ದಾರೆ. ಆಕೆ ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಟಚ್ ನಲ್ಲಿರುತ್ತಾರೆ. ಈ ಹಾದಿಯಲ್ಲೇ ಯಶ್ ಆಗಾಗ ತಮ್ಮ ಮಕ್ಕಳು ಮನೆಯಲ್ಲಿ ಮಾಡುವಂತಹ ತುಂಟಾಟದ ವಿಡಿಯೋಗಳನ್ನು ಹಾಗೂ ಪೊಟೊಗಳನ್ನು ಶೇರ್‍ ಮಾಡುತ್ತಿರುತ್ತಾರೆ. ರಾಧಿಕಾ ಅಥವಾ ಯಶ್ ಅವರ ಮಕ್ಕಳ ಪೊಟೋಗಳನ್ನು ಶೇರ್‍ ಮಾಡಿದರೇ ಸಾಕು, ಕಡಿಮೆ ಸಮಯದಲ್ಲೇ ಆ ಪೊಟೋ ಹಾಗೂ ವಿಡಿಯೋಗಳು ವೈರಲ್ ಆಗಿಬಿಡುತ್ತವೆ. ಇನ್ನೂ ಸದ್ಯ ರಾಧಿಕಾ ತನ್ನ ಮುದ್ದಿನ ಮಗನಾದ ಯಥರ್ವ್ ನ ಪೊಟೊ ಒಂದನ್ನು ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿಂದೆ ಹಂಚಿಕೊಂಡ ಎಲ್ಲಾ ಪೊಟೋಗಳಿಗಿಂತ ಇದು ಬೇರೆ ಲೆವೆಲ್ ಎನ್ನಲಾಗುತ್ತಿದೆ.

ನಟಿ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಯಥರ್ವ್ ಬಿಚ್ ದಡದಲ್ಲಿ ನಿಂತು ಸಮುದ್ರದ ಕಡೆ ಮುಖ ಮಾಡಿ ನಿಂತಿದ್ದಾರೆ. ಇನ್ನೂ ಈ ಪೊಟೋಗೆ ರಾಧಿಕಾ ಇದನ್ನು ಎಲ್ಲೋ ನೋಡಿದಂತೆ ಇದೆ ಅಲ್ಲವೇ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ಈ ಪೊಟೋ ಎಲ್ಲೆಡೆ ವೈರಲ್ ಆಗಿದೆ. ಇನ್ನೂ ಈ ಪೊಟೋ ವೈರಲ್ ಆಗಲು ಕಾರಣ ಸಹ ಇದೆ. ಯಶ್ ಪುತ್ರ ಯಥರ್ವ್ ಕೆಜಿಎಫ್ ಸಿನೆಮಾದಲ್ಲಿ ಯಶ್ ಕೊಟ್ಟಂತೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋ ನೋಡಿದ ಕೂಡಲೇ ರಾಖಿಭಾಯ್ ನೆನಪಿಗೆ ಬರುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಗಳನ್ನು ಹರಿಬಿಟ್ಟಿದಾರೆ. ಇನ್ನೂ ಯಶ್ ಪುತ್ರ ಯಥರ್ವ್ ಈ ಪೊಟೋ ಎಲ್ಲೆಡೆ ವೈರಲ್ ಸಹ ಆಗುತ್ತಿದೆ.

ನಟ ಯಶ್ ಕೆಜಿಎಫ್-1 ರಲ್ಲಿ ಬಾಲಕನಾಗಿ ಕಡಲ ತೀರದಲ್ಲಿ ಅದೇ ತರಹ ಪೋಸ್ ಕೊಟ್ಟಿರುತ್ತಾನೆ, ಅದರಂತೆ ಕೆಜಿಎಫ್-2 ನಲ್ಲೂ ಸಹ ರಾಖಿಭಾಯ್ ಅದೇ ಪೋಸ್ ಕೊಡುತ್ತಾರೆ. ಇದೀಗ ನಿಜಜೀವನದಲ್ಲಿ ಯಥರ್ವ್ ಸಹ ಅದೇ ಮಾದರಿಯಲ್ಲಿ ಲುಕ್ಸ್ ಕೊಟ್ಟಿದ ಹಿನ್ನೆಲೆಯಲ್ಲಿ ಅತೀ ಕಡಿಮೆ ಸಮಯದಲ್ಲೇ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದೆ. ಸದ್ಯ ಯಶ್ ಕೆಜಿಎಫ್-2 ಸಿನೆಮಾ ಬಿಗ್ ಸಕ್ಸಸ್ ನಲ್ಲಿದ್ದು, ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.

Previous articleತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಹೇಳಿದ ಶ್ರುತಿ ಹಾಸನ್.. ವೈರಲ್ ಆಯ್ತು ಆಕೆಯ ಹೇಳಿಕೆಗಳು….!
Next articleಬಾಲಿವುಡ್ ಬಿಗ್ ಬಿ ಹೈದರಾಬಾದ್ ಮೆಟ್ರೋ ಸ್ಟೇಷನ್ ನಲ್ಲಿ.. ಬಿಗ್ ಬಿ ಬಂದಿದ್ದಾರೂ ಏಕೆ?