ಸಿನಿರಂಗದ ಸ್ಟಾರ್ ನಟರ ಕುಟುಂಬವೂ ಸಹ ಅವರಂತೆ ಕ್ರೇಜ್ ಪಡೆದುಕೊಂಡಿರುತ್ತಾರೆ. ಅದರಂತೆ ತೆಲುಗು ಸಿನಿರಂಗದ ಸ್ಟಾರ್ ನಟರ ಪತ್ನಿಯರು, ಮಕ್ಕಳೂ ಸಹ ಸಿನಿರಂಗಕ್ಕೆ ಎಂಟ್ರಿ ಕೊಡದೇ ಇದ್ದರೂ ಅವರದ್ದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಈ ಹಾದಿಯಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಜೂನಿಯರ್ ಎನ್.ಟಿ.ಆರ್ ರವರ ಪತ್ನಿ ಪ್ರಣತಿ ಸಹ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಆದರೆ ಆಕೆಯ ಹೆಸರಲ್ಲಿ ಸೋಷಿಯಲ್ ಮಿಡಿಯಾ ಖಾತೆಗಳಿಲ್ಲ. ಸಾರ್ವಜನಿಕವಾಗಿಯೂ ಸಹ ಅಷ್ಟೊಂದು ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಆಕೆ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇಂದಿನ ಕಾಲದಲ್ಲಿ ಅನೇಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ತಮ್ಮದೇ ಆದ ಖ್ಯಾತಿ ಪಡೆದುಕೊಳ್ಳಲು ಕಾಯುತ್ತಿರುತ್ತಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದ ಮೂಲಕ ಫಾಲೋಯಿಂಗ್ ಬೆಳೆಸಿಕೊಳ್ಳಲು ಸಹ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ. ಈ ವಿಚಾರಕ್ಕೆ ಬಂದರೇ ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು ರವರ ಪತ್ನಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಭಾನೆ ಆಕ್ಟೀವ್ ಆಗಿರುತ್ತಾರೆ. ಅವರಿಗೂ ಸಹ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಆದರೆ ಜೂನಿಯರ್ ಎನ್.ಟಿ.ಆರ್ ಪತ್ನಿ ಪ್ರಣತಿ ಮಾತ್ರ ಅವರೆಲ್ಲರಿಗಿಂತ ಭಿನ್ನ ಎಂದೇ ಹೇಳಬಹುದು. ಎನ್.ಟಿ.ಆರ್ ಜೊತೆ ಬಿಟ್ಟರೇ ಸಿಂಗಲ್ ಆಗಿ ಸಾರ್ವಜನಿಕವಾಗಿ ಕಾಣಿಸಿಕೊಂಡ ದಾಖಲೆಗಳೂ ಸಹ ಇಲ್ಲ. ಕ್ಯಾಮೆರಾ ಕಣ್ಣಿಗೂ ಸಹ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಜೊತೆಗೆ ಆಕೆ ಟ್ರೆಡಿಷನಲ್ ಡ್ರೆಸ್ ಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಆದರೆ ಇದೀಗ ಪ್ರಣತಿ ನೆವರ್ ಬಿಪೋರ್ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಟೈಟ್ ಜೀನ್ಸ್ ನೀ ಹೈ ಶೂ ಧರಿಸಿ ಸ್ಟಾರ್ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಕಳೆದ ಎರಡು ವಾರಗಳ ಹಿಂದೆಯಷ್ಟೆ ಜೂನಿಯರ್ ಎನ್.ಟಿ.ಆರ್ ತಮ್ಮ ಕುಟುಂಬದೊಂದಿಗೆ ಅಮೇರಿಕಾ ಪ್ರವಾಸಕ್ಕೆ ಹೋದ ವಿಚಾರ ತಿಳಿದೇ ಇದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಜೂನಿಯರ್ ಎನ್.ಟಿ.ಆರ್ ತನ್ನ ಕುಟುಂಬದೊಂದಿಗೆ ಅಮೇರಿಕಾಗೆ ತೆರಳಿದ್ದಾರೆ. ಅಲ್ಲಿ ಪ್ರಣಿತಾ ಎನ್.ಟಿ.ಆರ್ ಜೊತೆಗೆ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಣತಿ ಮೊದಲ ಬಾರಿಗೆ ಈ ಮಾದರಿಯಲ್ಲಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದು, ವೈರಲ್ ಸಹ ಆಗುತ್ತಿವೆ.
ಇನ್ನೂ ನಟ ಎನ್.ಟಿ.ಆರ್ ರವರ RRR ಸಿನೆಮಾದ ಬಳಿಕ ನಿರ್ದೇಶಕ ಕೊರಟಾಲ ಶಿವಾ ಜೊತೆಗೆ NTR30 ಸಿನೆಮಾ ಘೋಷಣೆಯಾಗಿದೆ. ಸಿನೆಮಾ ಘೋಷಣೆಯಾಗಿ ಸುಮಾರು ತಿಂಗಳುಗಳೇ ಕಳೆದಿದೆ. ಇದೀಗ ಹೊಸ ಮಾಹಿತಿಯ ಪ್ರಕಾರ ಜನವರಿ ಮಾಹೆಯಲ್ಲಿ ಈ ಸಿನೆಮಾದ ಶೂಟಿಂಗ್ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದುಬಂದಿದೆ. ಬಳಿಕ ನಿರಂತರವಾಗಿ ಶೂಟಿಂಗ್ ಕೆಲಸಗಳು ಸಹ ನಡೆಯಲಿದೆಎಂದು ಹೇಳಲಾಗುತ್ತಿದೆ.