ರಾಜಮಾರ್ತಾಂಡ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಜೂನಿಯರ್ ಚಿರು

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ದಿವಂಗತ ಚಿರಂಜೀವಿ ಅಭಿನಯದ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಚಿರು-ಮೇಘನಾ ರಾಜ್ ಪುತ್ರ ಜೂನಿಯರ್ ಚಿರು ರಿಲೀಸ್ ಮಾಡಿದ್ದು, ಟ್ರೈಲರ್‌ಗೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಿನ್ನೆಯಷ್ಟೆ ರಾಜಮಾರ್ತಾಂಡ ಚಿತ್ರದ ನಿರ್ದೇಶಕ ರಾಮ್ ನಾರಾಯಣ ಜೂನಿಯರ್ ಚಿರು ಜೊತೆ ಸೇಲ್ಫಿ ಕ್ಲಿಕ್ಕಿಸಿಕೊಂಡ ಪೊಟೋವೊಂದನ್ನು ಹಂಚಿಕೊಳ್ಳುವ ಮೂಲಕ ಜೂನಿಯರ್ ಚಿರು ರಾಜಾಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಶುಭ ಸುದ್ದಿಯನ್ನು ನೀಡಿದ್ದರು. ತಂದೆ ಅಭಿನಯದ ಚಿತ್ರದ ಟ್ರೈಲರ್ ಅನ್ನು ಚಿಕ್ಕ ವಯಸ್ಸಿನ ಮಗ ರಿಲೀಸ್ ಮಾಡುತ್ತಿರುವುದು ಇದೇ ಮೊದಲು ಎಂದು ಬರೆದುಕೊಂಡಿದ್ದರು. ಅದರಂತೆ ಇಂದು ಟ್ರೈಲರ್ ಬಿಡುಗಡೆ ಮಾಡಿದ್ದಾನೆ ಜೂನಿಯರ್ ಚಿರು.

ನಟಿ ಮೇಘನಾ ರಾಜ್ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಟ್ರೈಲರ್ ರಿಲೀಸ್ ಮಾಡಿದ್ದಾರೆ. ಜೊತೆಗೆ ಈ ಟ್ರೈಲರ್ ಬಿಡುಗಡೆಯ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟ್ರೈಲರ್ ನೋಡಿ ಮೇಘನಾ ಸಿನೆಮಾದ ಕುರಿತು ಕೆಲವೊಂದು ಮಾಹಿತಿ ನೀಡಿದ್ದಾರೆ. ಈ ಸಿನೆಮಾ ಚಿರುಗೆ ಮನಸ್ಸಿಗೆ ಹತ್ತಿರವಾದಂತಹ ಚಿತ್ರ. ಚಿರು ಅಭಿನಯದ ಬೇರೆಲ್ಲಾ ಸಿನೆಮಾಗಳಿಗಿಂತ ಇದು ವಿಶೇಷವಾಗಿದೆ. ನಮಗೆ ಚಿರು ಅವರನ್ನು ಈ ಪಾತ್ರದಲ್ಲಿ ನೋಡಿ ಇಷ್ಟಪಟ್ಟಿದ್ವಿ. ಅಪ್ಪನಿಗೋಸ್ಕರ, ಅಪ್ಪನಿಗಾಗಿ ಸಿನೆಮಾ ತಂಡಕ್ಕಾಗಿ ನನ್ನ ಮಗ ಈ ಟ್ರೈಲರ್ ಅನ್ನು ಲಾಂಚ್ ಮಾಡುತ್ತಿದ್ದಾನೆ ಎಂದಿದ್ದಾರೆ.

ರಾಜಮಾರ್ತಾಂಡ ಚಿತ್ರದಲ್ಲಿನ ಚಿರು ಪಾತ್ರಕ್ಕೆ ಹಿನ್ನೆಲೆ ಧ್ವನಿಯನ್ನು ಧ್ರುವ ಸರ್ಜಾ ನೀಡಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನವಾದ ಡೈಲಾಗ್ಗಳಿದ್ದು, ಅಭಿಮಾನಿಗಳನ್ನು ರಂಜಿಸಲಿದೆ ಎನ್ನಲಾಗುತ್ತಿದೆ.

Previous articleನನ್ನನ್ನು ವೇಶ್ಯೆ ಎಂದು, ರೇಪ್ ಮಾಡುವುದಾಗಿ ಬೆದರಿಕೆ ಬಂದಿತ್ತು ಎಂದ ನಿರ್ದೇಶಕನ ಪುತ್ರಿ!
Next articleಕಾರ್ಗಿಲ್ ಯುದ್ದಭೂಮಿಯಲ್ಲಿ ಅಮೀರ್ ಖಾನ್ ಶೂಟಿಂಗ್!