ಸದ್ಯ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದು ಅಂದರೆ ಅದು ಅನಿರುಧ್ ಹಾಗು ಮೇಘ ಶೆಟ್ಟಿ ಅವರ ಅಭಿನಯದ ಕನ್ನಡ ಧಾರಾವಾಹಿ ಜೊತೆ ಜೊತೆಯಲಿ. ಕಳೆದ ಒಂದು ವರ್ಷದಿಂದ ಜೊತೆ ಜೊತೆಯಲಿ ಧಾರಾವಾಹಿ ಕನ್ನಡದ ಟಾಪ್ ಧಾರಾವಾಹಿ ಆಗಿ, ಅತೀ ಹೆಚ್ಚು TRP ಯನ್ನು ಕೂಡ ಹೊಂದಿದೆ. ಜೊತೆ ಜೊತೆಯಲಿ ಧಾರಾವಾಹಿ ಯಿಂದ ನಟ ಅನಿರುಧ್ ಅವರ ಕೆರಿಯರ್ ನಲ್ಲಿ ಹೊಸ ತಿರುವು ಬಂದಿದ್ದು, ಸದ್ಯ ಎಲ್ಲಾರ ಫೆವರೇಟ್ ಆಗಿದ್ದಾರೆ, ಅನಿರುಧ್ ಹಾಗು ಮೇಘಾ ಶೆಟ್ಟಿ! ಅಸಲಿಗೆ ಫೇಮಸ್ ದಾರಾವಾಹಿಯಾದ ಜೊತೆಜೊತೆಯಲಿ ಚಿತ್ರೀಕರಣ ಹೇಗಿರುತ್ತೆ ಗೊತ್ತಾ, ಈ ಧಾರಾವಾಹಿಯ ತಂಡ ಎಷ್ಟು ಕಷ್ಟ ಪಡುತ್ತಾರೆ ಗೊತ್ತಾ! ಸ್ಕ್ರಾಲ್ ಡೌನ್ ಮಾಡಿ ಚಿತ್ರೀಕರಣ ವಿಡಿಯೋ ನೋಡಿ
ಹೌದು! ಒಂದು ಧಾರಾವಾಹಿಯ ಚಿತ್ರೀಕರಣ ಕೂಡ ಯಾವ ಸಿನಿಮಾ ಗೂ ಕಡಿಮೆ ಇಲ್ಲ ಎಂದು ಹೇಳಬಹುದು! ಜೊತೆಜೊತೆಯಲಿ ಧಾರಾವಾಹಿ ಸದ್ಯ ಕನ್ನಡದ ಅತೀ ಹೆಚ್ಚು ಬಜೆಟಿನ ಧಾರಾವಾಹಿ! ಈ ಧಾರಾವಾಹಿಯ ಚಿತ್ರೀಕರಣ ಹೇಗಿರುತ್ತದೆ ಎಂದು, ನೀವು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿ! ನಿಮ್ಮ ಅನಿಸಿಕೆ ತಿಳಿಸಿ
ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರಾವಹಿಯ ಆಫರ್ ಬಂದಾಗ ತಿರಸ್ಕರಿಸಿದರು ನಾಯಕಿ ಮೇಘ ಶೆಟ್ಟಿ .. ಏಕೆಂದರೆ ‘ಜೊತೆ ಜೊತೆಯಲಿ’ ಧಾರಾವಾಹಿಗೆ ಅವಕಾಶ ಬಂದಾಗ ಅವರು ಇನ್ನು ಕಾಲೇಜು ಓದುತ್ತಿದ್ದರು. ಪರೀಕ್ಷೆ ಇದ್ದಿದ್ದರ ಕಾರಣದಿಂದ ನಟಿಸಲ್ಲ ಎಂದಿದ್ದರು. ಮೇಘಾ ಹೀಗೆ ಹೇಳಿದ್ದಕ್ಕೆ ರಾಘವೇಂದ್ರ ಹುಣಸೂರು ಅವರು ಪರೀಕ್ಷೆ ಮುಗಿಸಿ ಬನ್ನಿ ಕಾಯುತ್ತೇವೆ ಎಂದಿದ್ದರು. ಹಾಗೆ ಮೇಘಾ ಅವರಿಗಾಗಿ ಕಾದರು. ಪರೀಕ್ಷೆ ಎಲ್ಲಾ ಮುಗಿದ ನಂತರ ರಾಘವೇಂದ್ರ ಹುಣಸೂರು ಅವರೇ ಮತ್ತೊಮ್ಮೆ ಫೋನ್ ಮಾಡಿ ಮಾತನಾಡಿದ ಮೇಲೆ ಮೇಘಾ ಶೆಟ್ಟಿ ಕತೆ ಕೇಳಿ ತುಂಬಾ ಚೆನ್ನಾಗಿದೆ ಅನಿಸಿ, ಅವರ ಮನೆಯಲ್ಲೂ ಒಪ್ಪಿಗೆ ಕೊಟ್ಟ ಮೇಲೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡರು.
‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಪಾತ್ರವನ್ನು ಮೇಘಾ ಶೆಟ್ಟಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಅವರಿಗೆ ಸಾಕಷ್ಟು ಅಭಿಮಾನಿ ವರ್ಗ ಸೃಷ್ಟಿಯಾಗಿದೆ. ಅನು ರೀತಿಯ ಮಗಳು ನಮ್ಮ ಮನೆಯಲ್ಲೂ ಕೂಡ ಇರಬೇಕು ಎಂದು ಎಷ್ಟೋ ಪ್ರೇಕ್ಷಕರು ಬಯಸುತ್ತಿದ್ದಾರೆ.. ಕಿರುತೆರೆಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ ಅವರ ಮೊದಲ ಪ್ರಾಜೆಕ್ಟ್. ಟಿಆರ್ಪಿ ವಿಚಾರದಲ್ಲಿ ಈ ಧಾರಾವಾಹಿ ಆರಂಭದಿಂದಲೂ ತನ್ನ ಛಾಪನ್ನು ಮೂಡಿಸಿದೆ. 45 ವರ್ಷದ ಗಂಡು ಮತ್ತು 20 ವರ್ಷದ ಹುಡುಗಿಯ ಪ್ರೇಮಕಥೆಯಿದು. ಈ ಧಾರಾವಾಹಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದೆ. ಆಗಾಗ ಹಲವು ವಿಚಾರಗಳಿಗೆ ಧಾರಾವಾಹಿ ಹೊರತಾಗಿ ಈ ತಂಡದ ಸದಸ್ಯರು ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೆ ಧಾರಾವಾಹಿ ಮೂಲಕ ಸ್ವಚ್ಛತೆ, ಆಹಾರ, ಮೊಬೈಲ್ ಮುಂತಾದ ವಿಚಾರಗಳ ಬಗ್ಗೆ ಸಾಮಾಜಿಕ ಜಾಗೃತಿ, ಮೂಡಿಸುತ್ತಿದೆ ಈ ತಂಡ.
