News

(video)ಕೆಜಿಎಫ್ ಸಿನಿಮಾದಲ್ಲಿ ರಿಯಲ್ ಆಗಿ ಯಶ್ ತಾಯಿ ಯಶ್ ಗಿಂತ ಎಷ್ಟು ವರ್ಷ ಚಿಕ್ಕವರು ಗೊತ್ತಾ

yash-mom

KGF ಚಿತ್ರದಲ್ಲಿ ಯಶ್ ಅವರ ಪಾತ್ರವನ್ನು ಜನ ಎಷ್ಟು ಮೆಚ್ಚಿದ್ದಾರೋ , ಅಷ್ಟೇ ಮೆಚ್ಚುಗೆಯನ್ನು ಯಶ್ ಅವರ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಅವರು ಪಡೆದಿದ್ದಾರೆ. ಅರ್ಚನಾ ಜೋಯಿಸ್ ಅವರು ಜಿ ಕನ್ನಡದ ವಾಹಿಯಲ್ಲಿ ಪ್ರಸಾರ ವಾಗುವ ಮಹಾದೇವಿ ಎಂಬ ಧಾರವಾಹಿ ಇಂದ ಕನ್ನಡ ಕಿರುತೆರೆಗೆ ಕಾಲಿಟ್ಟರು. ಅರ್ಚನಾ ಅವರು ಸುವರ್ಣ ವಾಹಿನಿಯಲ್ಲಿ ಪ್ರಸಾರ ವಾದ ದುರ್ಗಾ ಎಂಬ ಧಾರಾವಾಹಿಯಲ್ಲಿ ಕೂಡ ನಟಿಸಿ ಬಹಳ ಫೇಮಸ್ ಆಗಿದ್ದರು. ಅರ್ಚನಾ ಜೋಯಿಸ್ ಅವರು ತಮ್ಮ ಮೊದಲ ಚಿತ್ರ KGF ನಲ್ಲಿ ಅದ್ಭುತ ವಾಗಿ ನಟಿಸಿದ್ದಾರೆ. ಇನ್ನೊಂದು ವಿಷ್ಯ ಏನಪ್ಪಾ ಅಂದರೆ ಇವರು ಯಶ್ ಗಿಂತ ವಯಸ್ಸಿನಲ್ಲಿ ಚಿಕ್ಕವರು, ಇವರ ವಯಸ್ಸು 28 (ಯಶ್ ಅವರ ವಯಸ್ಸು 32 ). ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆ ಆಗಿ ಎಲ್ಲಾ ಸೆಂಟರ್ ಗಳಲ್ಲಿ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡುತ್ತಿದೆ KGF ಚಿತ್ರ. ಇದಲ್ಲದೆ ಇಡೀ ಭಾರತದ ಜನ KGF ಚಿತ್ರವನ್ನು ಹಾಡಿ ಹೊಗಳಿದ್ದಾರೆ. KGF ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಎಂದರೆ ಅದು ರಾಕಿ bhai ಅವರ ತಾಯಿ. ಯಶ್ ಅವರ ತಾಯಿ ಪಾತ್ರದಲ್ಲಿ ನಟಿಸಿ ಬಹಳ ಫೇಮಸ್ ಆಗಿರುವ ನಟಿ ಅರ್ಚನಾ ಜೋಯಿಸ್ ಅವರು. ಇದೆ ಮೊದಲ ಬಾರಿಗೆ ಅರ್ಚನಾ ಜೋಯಿಸ್ ಅವರು KGF ಚಿತ್ರದ ಬಗ್ಗೆ, ತಮ್ಮ ಅನುಭವದ ಬಗ್ಗೆ, ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಏನ್ ಹೇಳಿದ್ದಾರೆ, ಈ ಕೆಳಗಿನ ವಿಡಿಯೋ ದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ. KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ.

Trending

To Top