Kannada Cinema News

ಜೋಗಿ ಚಿತ್ರಕ್ಕೆ 15 ವರ್ಷ! ಅಭಿಮಾನಿಗಳಿಂದ ದೊಡ್ಡ ಮಟ್ಟದಲ್ಲಿ ಜೋಗಿ ಜಾತ್ರೆ, ವಿಡಿಯೋ ನೋಡಿ

ಕರುನಾಡ ಚಕ್ರವರ್ತಿ ಶಿವ ರಾಜ್ ಕುಮಾರ್ ನಟಿಸಿ, ಪ್ರೇಮ್ ನಿರ್ದೇಶಿಸಿ ಸ್ಯಾಂಡಲ್ ವುಡ್ ನಲ್ಲಿ ಹೊಸದೊಂದು ಟ್ರೆಂಡ್ ಸೃಷ್ಟಿಸಿದ್ದ ಸಿನಿಮಾ ಜೋಗಿ. ಈ ಸಿನಿಮಾದಿಂದ ನಿರ್ದೇಶಕ ಪ್ರೇಮ್ ಅವರಿಗೆ ಜೋಗಿ ಪ್ರೇಮ್ ಎಂದೇ ಹೆಸರು ಬಂದಿತ್ತು. ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ. ಜೋಗಿ ಸಿನಿಮಾ ಬರೆದ ದಾಖಲೆ ಕೂಡ ಒಂದೆರಡಲ್ಲ. ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ಮತ್ತು ಮೈಸೂರಿನ 3 ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಮೊದಲ ದಿನ ಬಿಡುಗಡೆಯಾದ 45 ಚಿತ್ರಮಂದಿರಗಳಲ್ಲಿ 100ಕ್ಕು ಹೆಚ್ಚು ದಿನ ಪ್ರದರ್ಶನ ಕಂಡಿತ್ತು. ಸ್ಕ್ರಾಲ್ ಡೌನ್ ಮಾಡಿ ಜೋಗಿ 15 ವರ್ಷದ ವಿಡಿಯೋ ನೋಡಿ

ಕೆಲವೊಂದು ಚಿತ್ರಮಂದಿರಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡ ಸಿನಿಮಾ ಜೋಗಿ. ಈ ಸಿನಿಮಾದಲ್ಲಿ ಶಿವಣ್ಣನ ಮಾಸ್ ಲುಕ್, ತಾಯಿ ಸೆಂಟಿಮೆಂಟ್ , ಸಿನಿಮಾದ ಹಾಡುಗಳು, ಶಿವಣ್ಣನ ಲುಕ್ ಎಲ್ಲವೂ ಹೊಸದಾದ ಟ್ರೆಂಡ್ ಸೃಷ್ಟಿಸಿತ್ತು. ಇದೆ ಆಗಸ್ಟ್ 19ರಂದು ಜೋಗಿ ಸಿನಿಮಾ ಬಿಡುಗಡೆಯಾಗಿ 15 ವರ್ಷ ತುಂಬುತ್ತದೆ. ಇಷ್ಟೆಲ್ಲಾ ದಾಖಲೆ ಸೃಷ್ಟಿಸಿದ್ದ ಸಿನಿಮಾದ 15ನೇ ವರ್ಷದ ವಾರ್ಷಿಕೋತ್ಸವನ್ನು ಆಚರಿಸಲು ಶಿವಣ್ಣನ ಅಭಿಮಾನಿಗಳು ಪ್ಲಾನ್ ಮಾಡಿದ್ದಾರೆ.

ಟ್ವಿಟರ್ ಟ್ರೆಂಡ್ ಸೃಷ್ಟಿಸುವ ಮೂಲಕ ಜೋಗಿ ಸಿನಿಮಾ ತೆರೆಕಂಡ 15 ವರ್ಷದ ಸಂಭ್ರಮವನ್ನು ಆಚರಿಸಬೇಕು ಎಂದು ಪ್ಲಾನ್ ಮಾಡಿದ್ದಾರೆ ಅಭಿಮಾನಿಗಳು. ಈ ಸಂಭ್ರಮದ ಆಚರಣೆಗೆ ಶಿವು ಅಡ್ಡ ತಂಡ ಕಾಮನ್ ಡಿಪಿ ಡಿಸೈನ್ ಮಾಡಿದ್ದು, ಇಂದು ಸ್ಯಾಂಡಲ್ ವುಡ್ ನತನಟಿಯರು, ನಿರ್ದೇಶಕರು, ನಿರ್ಮಾಪಕರು, ಮತ್ತು ಇನ್ನಿತರರು ಕಾಮನ್ ಡಿಪಿಯನ್ನು ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ ಅಗಸ್ಟ್ 19ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶಿವಣ್ಣನ ಅಭಿಮಾನಿಗಳಿಗೆ ಇದೊಂದು ಸಂಭ್ರಮದ ದಿನವಾಗಿರಲಿದೆ.

Trending

To Top