Cinema

ಕನ್ನಡ ಕಿರುತೆರೆಯಲ್ಲಿ ರಾವಣ JK ಯಾ ರಾವಣ ಧಾರಾವಾಹಿಯ ಆರ್ಭಟ ಶುರು!

ಜೆಕೆ ಎಂದ ತಕ್ಷಣವೇ ನೆನಪಾಗುವುದು ಅಶ್ವಿನಿ ನಕ್ಷತ್ರ ಧಾರಾವಾಹಿ ಹಾಗೂ ಈ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಪಾತ್ರ ನಿರ್ವಹಿಸಿದ ನಟ ಜಯರಾಮ್ ಕಾರ್ತಿಕ್. ನಟ ಜಯರಾಮ್ ಕಾರ್ತಿಕ್ ಅವರು, ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಚಿರಪರಿಚಿತರಾದರು, ಇವರು ಅಭಿನಯಿಸಿದ ಜೆಕೆ ಪಾತ್ರವನ್ನು ಇಂದಿಗೂ ಸಹ ಕನ್ನಡ ಜನತೆ ಮರೆತಿಲ್ಲ. ಜೆಕೆ ಪಾತ್ರದ ಮೂಲಕ ಕರ್ನಾಟಕದ ಮನೆಮನೆಗಳಲ್ಲೂ ಜೆಕೆ ಹೆಸರು ಪರಿಚಿತವಾಗಿತ್ತು. ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಡಮನೆಗೆ ಎಂಟ್ರಿ ಕೊಟ್ಟಿದ್ದರು ಜೆಕೆ. ಜೆಕೆ ಎಂದರೆ ಗಂಭೀರ ಸ್ವಭಾವದವರು ಅಹಂಕಾರಿ ಎಂದುಕೊಂಡಿದ್ದವರಿಗೆ ನಿಜ ಜೀವನದಲ್ಲಿ ಜೆಕೆ ಹಾಗಲ್ಲ, ಬಹಳ ಕೂಲ್ ಪರ್ಸನ್ ಎಂದು ಅರ್ಥವಾಯಿತು. ಕನ್ನಡದಲ್ಲಿ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದರು ಜೆಕೆ.
ನಂತರ ಸಿಯಾ ಕೆ ರಾಮ್ ಹಿಂದಿ ಧಾರಾವಾಹಿಯಲ್ಲಿ ಶ್ರೀರಾಮನ ವೈರಿ ರಾವಣನ ಪಾತ್ರವನ್ನು ನಿರ್ವಹಿಸಿ, ಬಾಲಿವುಡ್ ನಟರಿಗೆ ಶಾಕ್ ನೀಡಿದ್ದರು. ಜೆಕೆ ನಿರ್ವಹಿಸಿದ್ದ ರಾವಣನ ಪಾತ್ರ ಹಿಂದಿ ಕಿರುತೆರೆಯಲ್ಲಿ ಸಕ್ಕತ್ ಸೌಂಡ್ ಮಾಡಿತ್ತು. ಬಾಲಿವುಡ್ ಅಂಗಳದಲ್ಲಿ ತಮ್ಮದೇ ಶೈಲಿಯಲ್ಲಿ ಛಾಪನ್ನು ಸೃಷ್ಟಿಸಿದ್ದರು ಜೆಕೆ. ರಾವಣನ ಪಾತ್ರದಿಂದ ದೇಶ ವಿದೇಶಗಳಲ್ಲೂ ಸಹ ಅಭಿಮಾನಿಗಳನ್ನು ಸಂಪಾದಿಸಿದ್ದರು ಜೆಕೆ. ಇದೀಗ ಕನ್ನಡ ಕಿರುತೆರೆಯಲ್ಲೂ ರಾವಣನ ಆರ್ಭಟ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿ ಕನ್ನಡಕ್ಕೆ ಸೀತೆಯ ರಾಮ ಹೆಸರಿನಲ್ಲಿ ಡಬ್ ಆಗುತ್ತಿದ್ದು, ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವಿಶೇಷ ಏನೆಂದರೆ, ಕನ್ನಡ ಅವತರಣಿಕೆಯಲ್ಲಿ ರಾವಣನ ಪಾತ್ರಕ್ಕೆ ಖುದ್ದು ಜೆಕೆಯವರೆ ಡಬ್ ಮಾಡಲಿದ್ದಾರೆ.
ನಟ ಜಯರಾಮ್ ಕಾರ್ತಿಕ್ ಅವರ ಧ್ವನಿ ಕನ್ನಡಿಗರಿಗೆ ಚಿರಪರಿಚಿತ. ಹಾಗಾಗಿ, ಸಿಯಾ ಕೆ ರಾಮ್ ಕನ್ನಡ ಅವತರಿಣಿಕೆಯಲ್ಲಿ ಅವರೆ ಡಬ್ ಮಾಡಲಿದ್ದಾರೆ. ಈಗಾಗಲೇ ಡಬ್ಬಿಂಗ್ ಕೆಲಸಗಳು ಶುರುವಾಗಿದ್ದು ಶೀಘ್ರದಲ್ಲಿ ರಾವಣನ ಆರ್ಭಟವನ್ನು ಕಿರುತೆರೆಯಲ್ಲಿ ನೋಡಬಹುದು. ಜೆಕೆ ಎಂದ ತಕ್ಷಣವೇ ನೆನಪಾಗುವುದು ಅಶ್ವಿನಿ ನಕ್ಷತ್ರ ಧಾರಾವಾಹಿ ಹಾಗೂ ಈ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ಜೆಕೆ ಪಾತ್ರ ನಿರ್ವಹಿಸಿದ ನಟ ಜಯರಾಮ್ ಕಾರ್ತಿಕ್. ನಟ ಜಯರಾಮ್ ಕಾರ್ತಿಕ್ ಅವರು, ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಚಿರಪರಿಚಿತರಾದರು, ಇವರು ಅಭಿನಯಿಸಿದ ಜೆಕೆ ಪಾತ್ರವನ್ನು ಇಂದಿಗೂ ಸಹ ಕನ್ನಡ ಜನತೆ ಮರೆತಿಲ್ಲ. ಜೆಕೆ ಪಾತ್ರದ ಮೂಲಕ ಕರ್ನಾಟಕದ ಮನೆಮನೆಗಳಲ್ಲೂ ಜೆಕೆ ಹೆಸರು ಪರಿಚಿತವಾಗಿತ್ತು. ನಂತರ ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಡಮನೆಗೆ ಎಂಟ್ರಿ ಕೊಟ್ಟಿದ್ದರು ಜೆಕೆ. ಜೆಕೆ ಎಂದರೆ ಗಂಭೀರ ಸ್ವಭಾವದವರು ಅಹಂಕಾರಿ ಎಂದುಕೊಂಡಿದ್ದವರಿಗೆ ನಿಜ ಜೀವನದಲ್ಲಿ ಜೆಕೆ ಹಾಗಲ್ಲ, ಬಹಳ ಕೂಲ್ ಪರ್ಸನ್ ಎಂದು ಅರ್ಥವಾಯಿತು. ಕನ್ನಡದಲ್ಲಿ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲೂ ಮಿಂಚಿದ್ದರು ಜೆಕೆ.

Trending

To Top