Cinema

ಕನ್ನಡದಲ್ಲಿ ಟ್ಯಾಲೆಂಟ್ ಇದ್ದವರನ್ನು ತುಳೀತಾರೆ ಎಂದಿದ್ದ JKಗೆ ತಿರುಗೇಟು ಕೊಟ್ಟ ಕವಿರಾಜ್! ವಿಡಿಯೋ ನೋಡಿ

ಇತ್ತೀಚೆಗೆ ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಗುರುತಿಸಿಕೊಂಡ ನಟ ಜೆಕೆ ಅವರು ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ಇದೆ ಎಂದು ಹೇಳಿಕೆ ನೀಡಿದ್ದಾರೆ. ಸಿಯಾ ಕೇ ರಾಮ್ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ನಟಿಸಿದ್ದೆ, ಆ ಪಾತ್ರ ಭಾರತಾದ್ಯಂತ ಖ್ಯಾತಿ ಗಳಿಸಿತ್ತು ಆದರೂ ನನಗೆ ಒಂದೂವರೆ ವರ್ಷ ಇಲ್ಲಿ ಯಾರೂ ಅವಕಾಶ ಕೊಡಲಿಲ್ಲ ಎಂದಿದ್ದಾರೆ ಜೆಕೆ. ಜೆಕೆ ಅವರ ಹೋಲ್ಡಿಂಗ್ ಗಳನ್ನು ಥಿಯೇಟರ್ ಗಳಿಂದ ತೆಗೆಯಲಾಗಿತ್ತು. ಥಿಯೇಟರ್ ಓನರ್ ಗಳಿಗೆ ಕೇಳಿದಾಗ, ತಮಗೆ ಯಾರೋ ಆಫರ್ ನೀಡಿದ್ದಾರೆ ಎಂದಿದ್ದರು. ಹಾಗಿದ್ದರೆ ಇದರ ಹಿಂದೆ ಯಾರೋ ಇದ್ದಾರೆ ಅಲ್ವಾ.. ಸ್ಯಾಂಡಲ್ ವುಡ್ ನಲ್ಲಿ ಇದೆಲ್ಲವನ್ನು ಯಾರು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುವುದಿಲ್ಲ. ಎಲ್ಲವೂ ಗುಪ್ತವಾಗಿ ನಡೆಯುತ್ತದೆ ಎಂದಿದ್ದರು ಜೆಕೆ. ಸ್ಕ್ರಾಲ್ ಡೌನ್ ಮಾಡಿ ಕವಿರಾಜ್ ಏನ್ ಹೇಳಿದ್ದಾರೆ ವಿಡಿಯೋ ನೋಡಿ
ಇದಕ್ಕೆ ಪ್ರತಿಕ್ರಿಯಿಸಿರುವ ಹೆಸರಾಂತ ಸಾಹಿತಿ ಕವಿರಾಜ್ ಅವರು, ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಎಂಬುದು ಹೆಚ್ಚಾಗಿ ಇಲ್ಲ ಎಂದಿದ್ದಾರೆ. ಒಬ್ಬ ವ್ಯಕ್ತಿ ಯಶಸ್ಸು ಗಳಿಸಿದಾಗ ತಮ್ಮ ಮಕ್ಕಳು ಸಹ ಅದೇ ದಾರಿಯಲ್ಲಿ ಹೋಗಿ ಯಶಸ್ಸು ಗಳಿಸಲಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ ಅದು ತಪ್ಪಲ್ಲ ಎಂದಿದ್ದಾರೆ ಕವಿರಾಜ್.ಸ್ಯಾಂಡಲ್ ವುಡ್ ನ ನಿರ್ದೇಶಕರಾದ ಯೋಗರಾಜ್ ಭಟ್, ದುನಿಯಾ ಸೂರಿ, ಜೋಗಿ ಪ್ರೇಮ್. ನಟರಾದ ಉಪೇಂದ್ರ, ಯಶ್ ಇವರ ಕಟುಂಬದಲ್ಲಿ ಯಾರೊಬ್ಬರೂ ಸಿನಿರಂಗಕ್ಕೆ ಸಂಬಂಧಿಸಿದ್ದವರು ಇರಲಿಲ್ಲ. ಆದರೂ ಅವರು ಯಶಸ್ಸು ಗಳಿಸಿದ್ದು, ಪ್ರತಿಭೆಯ ಮೂಲಕ, ಪ್ರತಿಭೆ ಇದ್ದವರು ಬೆಳೆಯುತ್ತಾರೆ ಎಂಬುದು ಕವಿರಾಜ್ ಅವರ ಮಾತು. ಕೆಳಗಿನ ವಿಡಿಯೋ ನೋಡಿ
ಅವರು ಹೇಳುವ ಪ್ರಕಾರ, ಈಗಿನ ಪ್ರಪಂಚದಲ್ಲಿ ಸೋಶಿಯಲ್ ಮೀಡಿಯಾ ಇರುವುದರಿಂದ ಎಲ್ಲರೂ ಕೂಡ ತಮ್ಮನ್ನು ತಾವು ಒಳ್ಳೆಯ ನಟ ಅಥವಾ ಸಾಹಿತಿಗಳು ಎಂದುಕೊಳ್ಳುತ್ತಾರೆ. ನನಗೂ ಸಹ ಹಲವಾರು ಜನ ತಾವು ಹಾಡು ಬರೆದಿರುವುದಾಗಿ ಹೇಳಿ ಅದನ್ನು ಕಲಿಸಿಕೊಡುತ್ತಾರೆ. ಆದರೆ ಅವರು ಬರೆದಿರುವ ಸಾಹಿತ್ಯದಲ್ಲಿ ಸ್ವಲ್ಪವೂ ಗ್ರಾಮರ್ ಇರುವುದಿಲ್ಲ. ಅಂಥವರು ತಮಗೆ ಅವಕಾಶ ಸಿಗಲಿಲ್ಲ ಎಂದು ಹೇಳಿದರೆ ಏನೂ ಮಾಡಲಾಗುವುದಿಲ್ಲ ಎಂಬುದು ಕವಿರಾಜ್ ಅವರು ನೀಡಿರುವ ಪ್ರತಿಕ್ರಿಯೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಬಾಲಿವುಡ್ ನಲ್ಲಿ ನೆಪೋಟಿಸಂ ಬಗ್ಗೆ ಚರ್ಚೆಗಳು ಹೆಚ್ಚಾದವು. ಬಾಲಿವುಡ್ ನಲ್ಲಿ ಇದು ಹೆಚ್ಚಾಗಿಯೇ ಇದೆ. ನೆಪೋಟಿಸಂ ಗೆ ಸಂಬಂಧಿಸಿದಂತೆ, ಬಾಲಿವುಡ್ ನಿರ್ದೇಶಕ ಮಹೇಶ್ ಭಟ್, ಕರಣ್ ಜೋಹರ್, ಯಶ್ ಚೋಪ್ರಾ ನಿರ್ಮಾಣ ಸಂಸ್ಥೆ, ಕಲಾವಿದರಾದ ಆಲಿಯಾ ಭಟ್, ಅರ್ಜುನ್ ಕಪೂರ್, ಸೋನಂ ಕಪೂರ್ ಸೇರಿದಂತೆ ಹಲವಾರು ಕಲಾವಿದರ ಮೇಲೆ ನೆಪೋಟಿಸಂ ಕುರಿತು ಆರೋಪವನ್ನು ಹೇರಲಾಗಿತ್ತು. ಸದ್ಯ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇಂತಹ ಸಮಸ್ಯೆಗಳು ಇಲ್ಲ ಎಂದು ಸಿನಿಪ್ರಿಯರು ಅಂದುಕೊಳ್ಳುತ್ತಿದ್ದರು ಆದರೆ ಇತ್ತೀಚೆಗೆ ಹೊರಬರುತ್ತಿರುವ ಕೆಲವು ಹೇಳಿಕೆಗಳು ಬೆರೆಯದನ್ನೇ ಹೇಳುತ್ತಿವೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬ ಕ್ಲಾರಿಟಿ ಇನ್ನು ಸಿಕ್ಕಿಲ್ಲ.

Trending

To Top