News

ಬಿಗ್ ಬಾಸ್ ಸೀಸನ್ 6 ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಿರುವ ಜೀವಿತ! ಎಸ್ಕ್ಲ್ಯೂಸಿವ್ ಸುದ್ದಿ

jeevitha-gowda1

ಬಿಗ್ ಬಾಸ್ ಕನ್ನಡ ಸೀಸನ್ 06 ಇತ್ತೀಚಿಗೆ ತನ್ನ 50 ದಿನಗಳನ್ನು ಪೂರೈಸಿತು. ಬಿಗ್ ಬಾಸ್ ವೀಕ್ಷಕರು ಈ ಭಾರಿ ಯಾರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದರು. ಕನ್ನಡದ ಫೇಮಸ್ ಸೀರಿಯಲ್ ನಟಿ ಆದ ಜೀವಿತ ಅವರು ಬಿಗ್ ಬಾಸ್ ಕನ್ನಡ 6 ನೇ ಸೀಸನ್ ಅಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಇಂದು ಕಾಲಿಡುತ್ತಿದ್ದಾರೆ. ಜೀವಿತ ಅವರು ಕನ್ನಡದ ಫೇಮಸ್ ಸೆಲೆಬ್ರಿಟಿ ಗಳಲ್ಲಿ ಒಬ್ಬರು, ಜೀವಿತ ಅವರು “ಜಾನಕಿ ರಾಘವ” ಎಂಬ ಕನ್ನಡದ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ.
ಮೂಲತಃ ಫ್ಯಾಷನ್ designer ಆದ ಜೀವಿತ ಅವರು ತಮ್ಮ ಕೆರಿಯರ್ ಅನ್ನು ಫ್ಯಾಷನ್ designing ಮೂಲಕ ಶುರು ಮಾಡಿ ನಂತರ ಮಾಡೆಲ್ ಆಗಿ ಕೂಡ ಹಲವಾರು ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೀವಿತ ಅವರು ಸದ್ಯ ಜಾನಕಿ ರಾಘವ ಎಂಬ ಕನ್ನಡ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೀವಿತ ಅವರಿಗೆ ಬಹಳಷ್ಟು ಬೇರೆ ಧಾರಾವಾಹಿಗಳು ಹಾಗು ಸಿನೆಮಾಗಳಲ್ಲಿ ಕೂಡ ಬಹಳ ಅವಕಾಶಗಳು ಬರುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಜೀವಿತ ಅವರು ಇತ್ತೀಚಿನ ಒಂದು ಸಂದರ್ಶನ ದಲ್ಲಿ ಹೇಳಿದ್ದೇನು ಅಂದರೆ ” ನಾನು ಮಾಡೆಲ್ಲಿಂಗ್ ಇಂದ ಕನ್ನಡ ಕಿರುತೆರೆಗೆ ಬಂದೆ, ಎಲ್ಲಾ ರೀತಿಯ ಪತ್ರಗಳನ್ನು ಮಾಡಬೇಕು, ಸಿನಿಮಾ ಮಾಡಲು ಅವಕಾಶ ಬಂದರೆ ನನ್ನ ಪಾತ್ರಕ್ಕೆ ಜೀವ ತುಂಬಿ ನಟಿಸಬೇಕು” ಎಂದು ನಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ. ಸದ್ಯ ಜೀವಿತ ಅವರಿಗೆ ಬಿಗ್ ಬಾಸ್ ಮನೆಯಿಂದ ಕರೆ ಬಂದಿದೆ. ಜೀವಿ ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಹೋಗಲಿದ್ದಾರೆ.
ಇಂದು ಬರುವ ಕನ್ನಡ ಬಿಗ್ ಬಾಸ್ ಸೀಸನ್ 6 ರ ಎಪಿಸೋಡ್ ನಲ್ಲಿ ನೀವು ಜೀವಿತ ಅವರನ್ನು ಕಾಣಬಹುದು. ಜೀವಿತ ಅವರು ಒಬ್ಬ ಅದ್ಭುತ ಬೆಲ್ಲಿ ಡ್ಯಾನ್ಸರ್ ಕೂಡ. ಇಂತಹ ಅದ್ಭುತ ಟ್ಯಾಲೆಂಟ್ ಇರುವ ಕನ್ನಡ ಪ್ರತಿಭೆಗೆ ಶುಭ ಹಾರೈಸೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top