Cinema

ತಪ್ಪು ನಿರ್ಧಾರ ಮಾಡಿ ಸಾyaಲು ಹೊರಟಿದ್ದ ಜಯಶ್ರೀ,ಇಂದು ಮಾಡಿದ್ದೇನು ಗೊತ್ತಾ!

ಕೆಲ ದಿನಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 3 ಸ್ಪರ್ಧಿ ಜಯಶ್ರೀ ರಾಮಯ್ಯ ಅವರ ಫೇಸ್ ಬುಕ್ ಪೋಸ್ಟ್ ಒಂದು ಎಲ್ಲರನ್ನು ಗಾಬರಿಗೊಳಿಸಿತು. ಅತ್ಮ#ತ್ಯೆಗೆ ಶರಣಾಗುವ ರೀತಿಯಲ್ಲಿ ಪೋಸ್ಟ್ ಮಾಡಿದ್ದರು ಜಯಶ್ರೀ. ಇವರ ಪೋಸ್ಟ್ ಇಂದಾಗಿ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಬಹಳ ಆತಂಕಕ್ಕೆ ಒಳಗಾಗಿದ್ದರು.
ಕೆಲ ಸಮಯದ ನಂತರ ತಾವು ಆರಾಮವಾಗಿರುವುದಾಗಿ ಪೋಸ್ಟ್ ಮಾಡಿ ಎಲ್ಲರ ಆತಂಕವನ್ನು ಕಡಿಮೆ ಮಾಡಿದ್ದರು. ನಂತರ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದರು. ಇದೀಗ ಹೊಸದೊಂದು ಒಳ್ಳೆಯ ಕೆಲಸ ಮಾಡಿದ್ದಾರೆ ಜಯಶ್ರೀ. ಕ್ಯಾನ್ಸರ್ ರೋಗಿಗಳಿಗೆ ಸಪೋರ್ಟ್ ಮಾಡಲು ತಮ್ಮ ಕೂದಲನ್ನು ತ್ಯಾಗ ಮಾಡಿದ್ದಾರೆ. ಕೂದಲನ್ನು ಸಂಪೂರ್ಣವಾಗಿ ಶೇವ್ ಮಾಡಿರುವ ಜಯಶ್ರೀ, ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. “ಒಳ್ಳೆಯ ನಾಳೆಗೆ ಮೊದಲ ಹೆಜ್ಜೆ” ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ ಅವರು ಈಗ ಆರಾಮವಾಗಿರುವುದಾಗಿ ಹಾಗೂ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
“ನನ್ನಿಂದ ಸಾಧ್ಯವಾಗುತ್ತಿಲ್ಲ.. ಇಡೀ ಜಗತ್ತಿಗೆ ಹಾಗೂ ನನ್ನ ಖಿನ್ನತೆಗೆ ಗುಡ್ ಬೈ..” ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು ಜಯಶ್ರೀ. ಈ ಪೋಸ್ಟ್ ನೋಡಿದ ಅವರ ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಬಹಳ ಆತಂಕಗೊಂಡು ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದರು.. ಕೆಲ ಸಮಯದ ನಂತರ “ನಾನು ಆರಾಮವಾಗಿದ್ದೇನೆ.. ಲವ್ ಯೂ ಆಲ್..” ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಆಗ ಅವರ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಸಮಾಧಾನವಾಗಿತ್ತು.
ಇದರ ನಂತರ, ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದ ಜಯಶ್ರೀ.. ನಾನು ಸುದೀಪ್ ಸರ್ ಅವರಿಂದ ಆರ್ಥಿಕ ಸಹಾಯವನ್ನು ಬಯಸುತ್ತಿಲ್ಲ. ನನ್ನ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ. ಆದರೆ ನಾನು ಮಾನಸಿಕವಾಗಿ ಕು#ಗ್ಗಿಹೋಗಿದ್ದೇನೆ. ನನಗೆ ಮೋ#ಸ ಆಗಿದೆ. ಕುಟುಂಬದ ಸಮಸ್ಯೆಗಳನ್ನು ನನ್ನಿಂದ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ಬೇಕಾಗಿರುವುದು ನನ್ನ ಸಾ# ಒಂದೇ. ನನಗೆ ಎಲ್ಲವೂ ಮೋ#ಸವೆ ಆಗಿದೆ. ಅಗಬಾರದ ಘ#ಟನೆ ಒಂದು ನಡೆದಿದೆ. ಅದನ್ನು ಮರೆಯಲು ನನ್ನಿಂದ ಸಾಧ್ಯವಾಗಿತ್ತಿಲ್ಲ ಎಂದಿದ್ದರು. ನಂತರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಹಾಯದಿಂದ ಮಾನಸಿಕ ಖಿನ್ನತೆಯಿಂದ ಚೇತರಿಸಿಕೊಂಡಿರುವುದಾಗಿ ಫೇಸ್ ಬುಕ್ ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದರು..
“ಸುದೀಪ್ ಸರ್ ನಿಮ್ಮ ಕಾಳಜಿಗೆ ಬಹಳ ಧನ್ಯವಾದಗಳು. ನಿಮ್ಮ ಟೀಮ್ ನ ಸಹಾಯಕ್ಕೆ ಧನ್ಯವಾದ. ಹಾಗೂ ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳೇ ಐ ಲವ್ ಯೂ ಆಲ್.. ನಿಮ್ಮನ್ನು ಆತಂಕ ಗೊಳಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಈಗ ನಾನು ನಾನಾಗಿ ಹಿಂದಿರುಗಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಸದಾ ಚಿರರುಣಿಯಾಗಿರಲಿದ್ದೇನೆ..” ಎಂದು ಮತ್ತೊಂದು ಪೋಸ್ಟ್ ಮಾಡಿದ್ದರು.

Trending

To Top